Friday, November 22, 2024

BBMP ಚುನಾವಣೆ ಭವಿಷ್ಯ ಇಂದೇ ನಿರ್ಧಾರವಾಗುತ್ತಾ..?

ಬೆಂಗಳೂರು : ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೀಡಿದ್ದ 8 ವಾರಗಳ ಗಡುವು ಮುಕ್ತಾಯಗೊಂಡಿದ್ದು, ಸುಪ್ರೀಂಕೋರ್ಟ್ ನಲ್ಲಿ ಇಂದು ಬಿಬಿಎಂಪಿ ಚುನಾವಣೆ ಸಂಬಂಧ ವಿಚಾರಣೆ ನಡೆಯಲಿದೆ.

ಇನ್ನು, ಚುನಾವಣೆಗೆ ಸಮಯ ನಿಗದಿಯಾಗುತ್ತಾ…? ಮತ್ತೆ ಕಾಲಾವಕಾಶ ನೀಡುತ್ತಾ..? ಸುಪ್ರೀಂಕೋರ್ಟ್ ನಲ್ಲಿ ಇಂದು ಬಿಬಿಎಂಪಿ ಚುನಾವಣೆ ಸಂಬಂಧ ವಿಚಾರಣೆ ನಡೆಯಲಿದ್ದು, ಕೇಸ್ ನಂಬರ್ 14 ಪಾಲಿಕೆ ಚುನಾವಣೆ ವಿಚಾರಣೆಯನ್ನು, ನ್ಯಾಯಮೂರ್ತಿಗಳಾದ ಖಾನ್ವಿಲ್ಕರ್, ಅಭಯ್ ಎಸ್.ಓಕಾ ಮತ್ತು ಜೆ.ಪಿ. ಪರ್ದಿವಾಲ ಮಾಡಲಿದ್ದಾರೆ.

ಇನ್ನು, ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೀಡಿದ್ದ 8 ವಾರಗಳ ಗಡುವು ಮುಕ್ತಾಯಗೊಂಡಿದ್ದು, ವಾರ್ಡ್ ಪುನರ್ ವಿಂಗಡನೆ & ವಾರ್ಡ್ ವಾರು ಮೀಸಲಾತಿ ಪ್ರಕಟಿಸಿದೆ. ಸುಪ್ರೀಂಕೋರ್ಟ್ ನೀಡಿದ್ದ 8 ವಾರಗಳು ಮುಗಿದ ಹಿನ್ನೆಲೆ ಮತ್ತೆ ವಿಚಾರಣೆ ನಡೆಯಲಿದ್ದು, ವಾರ್ಡ್ ಪುನರ್ ವಿಂಗಡಣೆ ಮಾತ್ರ ಮಾಡಿ ಮೀಸಲಾತಿ ಪ್ರಕಟಿಸದೆ ವಿಳಂಬಧೋರಣೆ ಅನುಸರಿಸಿದೆ.

ಇನ್ನು, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿರುವ ಮಾಜಿ ಕಾರ್ಪೊರೇಟರ್​​​ಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಮಾಜಿ ಕಾರ್ಪೊರೇಟರ್ ಶಿವರಾಜ್, ಅಬ್ದುಲ್ ವಾಜೀದ್ ರಿಂದ ಮೇಲ್ಮನವಿ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES