ಮೈಸೂರು : ಪ್ರತಿಷ್ಠಿತ ಮೈಸೂರಿನ ಮಂಡಕಹಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಹೆಸರನ್ನು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೆಸರಿಡಲು ತೀರ್ಮಾನಿಸಿರುವ ಬೆನ್ನಲ್ಲೇ ಹೆಸರಿನ ಕ್ರೆಡಿಟ್ ಪಡೆದುಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗಿಳಿದಿವೆ. ಆ ಮೂಲಕ ರಾಜ ಮನೆತನ ಹಾಗೂ ಮೈಸೂರು ಭಾಗದಲ್ಲಿ ರಾಜ ಮನೆತನಕ್ಕೆ ನೀಡುತ್ತಿದ್ದ ಗೌರವದ ಕ್ರೆಡಿಟ್ ಪಡೆದುಕೊಳ್ಳಲು ಹೊಸದೊಂದು ಹೆಜ್ಜೆಗೆ ಕೈ ಹಾಕಿವೆ. ಅಕ್ಟೋಬರ್ 9, 2015 ರಂದು ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಸರ್ಕಾರವೇ ಪ್ರಮುಖ ಕಾರಣ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ದಾಖಲೆಗಳ ಮೂಲಕ ವಾದ ಮಾಡ್ತಾರೆ.
ಮತ್ತೊಂದೆಡೆ ಇದು ನಾನು ಮಾಡಿಸಿದ್ದು, ನನ್ನ ಅವಧಿಯಲ್ಲಿ ಆಗಿದ್ದು ಕೇವಲ ಪತ್ರ ಬರೆದರೆ ಏನೇನೂ ಆಗುವುದಿಲ್ಲ. ಒಂದು ವೇಳೆ ಸಿದ್ದರಾಮಯ್ಯನವರಿಗೆ ಆ ಅವಕಾಶ ಸಿಕ್ಕಿದ್ದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರ ಬದಲಿಗೆ ಟಿಪ್ಪು ಸುಲ್ತಾನ್ ಹೆಸರನ್ನ ಇಡುತ್ತಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಪಾದಿಸಿದ್ದಾರೆ.
ಒಟ್ಟಾರೆ, ಮೈಸೂರು ವಿಮಾನ ನಿಲ್ದಾಣದ ಹೆಸರಿನಲ್ಲೂ ಕ್ರೆಡಿಟ್ ವಾರ್ ವಿವಾದ ಸೃಷ್ಟಿಯಾಗಿರುವುದಂತೂ ಸುಳ್ಳಲ್ಲ. ಅದು ಏನೇ ಆಗ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರು ಪ್ರಕಟಿಸಿರುವುದಕ್ಕೆ ಮೈಸೂರು ಜನತೆ ಸಂತಸಗೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಸುರೇಶ್ ಬಿ.ಪವರ್ ಟಿವಿ ಮೈಸೂರು.