Thursday, December 19, 2024

U TURN ಹೊಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ

ಬೆಂಗಳೂರು: ನಿನ್ನೆ ಕೊಟ್ಟ ಒಂದೇ ಒಂದು ಹೇಳಿಕೆ ಬಿಜೆಪಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದ್ರೆ, ಆ ಬಿರುಗಾಳಿ ಜೋರಾಗುವ ಮೊದಲೇ ತಣ್ಣಗಾಗಿಸಿದೆ ಹೈಕಮಾಂಡ್‌. ಬಿಎಸ್‌ವೈ ಚುನಾವಣಾ ನಿವೃತ್ತಿ ಘೋಷಣೆ ಬೆನ್ನಲ್ಲೇ, ಅವರು ಶಿಷ್ಯರು ಓಡೋಡಿ ಬಂದಿದ್ರು. ಸದ್ಯ, ಬಿಎಸ್‌ವೈ ಯುಟರ್ನ್ ಹೊಡೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ನಿನ್ನೆ ನಿವೃತ್ತಿಯ ಮಾತು ಹೇಳಿದ್ದ ರಾಜಾಹುಲಿ ಈಗ ಯೂಟರ್ನ್ ಹೊಡೆದಿದೆ. ಹೌದು. ಬಿಎಸ್‌ವೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಕೇಸರಿ ಬ್ರಿಗೇಡ್‌ನಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ತನ್ನ ಮಗ ವಿಜಯೇಂದ್ರಗೆ ಕ್ಷೇತ್ರ ಬಿಟ್ಟು ಕೊಡುತ್ತಿದ್ದೇನೆ ಎಂದ್ದಿದ್ದೇ ತಡ ನಾನಾ ವಿಧವಾದ ಚರ್ಚೆ ಬಿಜೆಪಿಯಲ್ಲಿ ಶುರುವಾಗಿತ್ತು.. ಜೊತೆಗೆ ಇದು ಬಿಜೆಪಿಗೆ ದೊಡ್ಡ‌ ಹೊಡೆತ ಸಹ ಅಗುವ ಲಕ್ಷಣಗಳು ಕಾಣ್ತಿದ್ವು. ಆದ್ರೆ, ನಿನ್ನೆ ನೀಡಿದ ಹೇಳಿಕೆ ಕ್ಷೇತ್ರದ ಜನರಿಗೆ ಹೇಳಿದೆ‌ ಅಷ್ಟೆ. ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುವೆ ಎನ್ನುವ ಮೂಲಕ ವರಿಷ್ಠರ ಸೂಚನೆಗೆ ಯಡಿಯೂರಪ್ಪ ಬೆದರಿದ್ರಾ ಅನ್ನೋ‌ ಅನುಮಾನ‌ ಇದೀಗ ಕಾಡಲಾರಂಭಿಸಿದೆ.

ನಿನ್ನೆ ನೀಡಿದ ಹೇಳಿಕೆ ಸಾಕಷ್ಟು‌ ಗೊಂದಲಗಳಿಗೆ ಕಾರಣವಾಗಿದೆ.. ಶಿಕಾರಿಪುರದ ಕಾರ್ಯಕರ್ತರು ನನ್ನನ್ನೇ‌ ನಿಲ್ಲುವಂತೆ ಒತ್ತಾಯಿಸಿದ್ರು. ಆದ್ರೆ ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ ಬದಲಾಗಿ ವಿಜಯೇಂದ್ರ ನಿಲ್ತಾನೆ ಎಂದು ಹೇಳಿದೇ ಅಷ್ಟೇ ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾರೆ ಯಡಿಯೂರಪ್ಪ. ಜೊತೆಗೆ ನಮ್ಮ ರಾಷ್ಟ್ರೀಯ ಮುಖಂಡರಾದ ನಡ್ಡಾ,‌ ಅಮಿತ್ ಶಾ‌ ನಿರ್ಧಾರವೇ ಇಲ್ಲಿ ಅಂತಿಮ. ನನ್ನದು ಸಲಹೆ ಮಾತ್ರ. ಕಾರ್ಯಕರ್ತರು, ಮುಖಂಡರಿಗೆ ಯಾವುದೇ ಗೊಂದಲ‌ಬೇಡ ಎಂದು ಹೇಳಿದ್ರು.

ನಾನು ಬರೀ ಕಾರ್ಯಕರ್ತರು ಕೇಳಿದಕ್ಕೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿರುವೆ.. ಆದರೆ ನನ್ನ ಗುರಿ ಪಕ್ಷವನ್ನ ಬೆಳೆಸೋದು.. ಮೋದಿಜೀಯವರನ್ನು ಮತ್ತೆ ಪ್ರಧಾನಿ ಮಾಡಲು ನಾನು ಶ್ರಮಿಸುವೆ.. ನಾಳೆಯಿಂದಲೇ ಮತ್ತೆ ಪ್ರವಾಸ ಮಾಡುವೆ.. ಪಕ್ಷದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಯಡಿಯೂರಪ್ಪ ಹೇಳಿದ್ರು.. ಇದರ ಜೊತೆಗೆ ಅಂತಿಮ ತೀರ್ಮಾನ ಪ್ರಧಾನಿ ಹಾಗೂ ಜೆಪಿ ನಡ್ಡಾ ತೆಗೆದುಕೊಳ್ಳಬೇಕು. ಹಳೆ ಮೈಸೂರು ಭಾಗವಾದರೂ ಸರಿ ಎಲ್ಲಾದರೂ‌ ಸರಿ, ವರಿಷ್ಠರು‌‌ ಹೇಳಿದ‌ ಕಡೆ‌ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದು ಬಿಎಸ್‌ವೈ ಹೇಳಿದ್ರು.

ಇನ್ನು ಅಪ್ಪನ ಕ್ಷೇತ್ರದಲ್ಲಿ ನಿಲ್ಲುವುದರ ಬಗ್ಗೆ ಮಾತನಾಡಿದ ವಿಜೇಯಂದ್ರ ವರಿಷ್ಠರು ತೀರ್ಮಾನ.. ಆದ್ರೆ, ನಾನು‌ ಸಹ ನಿನ್ನೆ ಮೊನ್ನೆ ಬಂದವನಲ್ಲ ಪಕ್ಷದ ಸಂಘಟನೆಯಿಂದ ಬಂದವನು, ಹೀಗಾಗಿ ಕುಟುಂಬ ರಾಜಕಾರಣ ಇದಕ್ಕೆ ಅನ್ವಯಿಸೋದಿಲ್ಲ ಎಂದು ಹೇಳಿದ್ರು.

ಇನ್ನು ರಾಜಾಹುಲಿಯ ಈ ಹೇಳಿಕೆಯಿಂದ ಬಿಜೆಪಿಯಲ್ಲಿ ಇಕ್ಕಟ್ಟಿನ ವಾತಾವರಣ ಸೃಷ್ಟಿಯಾಗಿತ್ತು.. ಹೀಗಾಗಿ ಯಡಿಯೂರಪ್ಪ ಬೆಂಗಳೂರಿಗೆ ಬರುತ್ತಿದ್ದಂತೆ ಅಪ್ತ ಶಿಷ್ಯರು ಬಿಎಸ್‌ವೈ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ್ರು. ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ಮತ್ತು ಆರ್‌.ಅಶೋಕ್‌, ಕ್ಷೇತ್ರದ ಜನತೆ ಕೇಳಿದಾಗ ಹೇಳಿರುವ ಮಾತು. ಅದನ್ನು ತಪ್ಪಾಗಿ ಗ್ರಹಿಸಬಾರದು ಎಂದು ಹೇಳಿದ್ರು.

ಒಟ್ಟಿನಲ್ಲಿ ಚುನಾವಣೆಯ ನಿವೃತ್ತಿ ಘೋಷಣೆ ಮಾಡಿದ ಯಡಿಯೂರಪ್ಪ ಈಗ `ಹೈ’ ಅಲರ್ಟ್‌ಗೆ ತಲೆಬಾಗಿದ್ದಾರೆ. ಎಲ್ಲವೂ ಹೈಕಮಾಂಡ್‌ ತೀರ್ಮಾನ ಎಂದು ಹೇಳಿದ್ದಾರೆ. ಆದ್ರೆ, ರಾಜಕೀಯ ಲೆಕ್ಕಾಚಾರ ಹೀಗೆ ಎಂದು ಹೇಳೋದು ಕಷ್ಟ..

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು..

RELATED ARTICLES

Related Articles

TRENDING ARTICLES