Saturday, November 23, 2024

ಜೆಡಿಎಸ್​​ ಮತ್ತೆ ನಂಬರ್ 1 ಆಗಿದೆ : ಸಿ.ಎಂ ಇಬ್ರಾಹಿಂ

ಕೊಪ್ಪಳ : ಜನತದಾಳ ಇದೀಗ ಮತ್ತೆ ನಂಬರ್ 1 ಆಗಿದೆ ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್, ಬಿಜೆಪಿ ಇಂದ ಜೆಡಿಎಸ್​​ಗೆ ಸುಮಾರು 80 ಜನ ಕಾರ್ಯಕರ್ತರು ಬರುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ ರಿಜಲ್ಟ್ ಸರಪ್ರೈಸ್ ಆಗಿರಲಿದೆ. ನವೆಂಬರ್ ಅಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ಹಾಲಿ ಶಾಸಕರು ಇದ್ದಾರೆ ಎಂದರು.

ಇನ್ನು ಅತಂತ್ರ ಬಂದ್ರೆ ನಿಮ್ಮ ನಿಲವು ಯಾರ ಕಡೆ ಎಂಬುದರ ಪ್ರಶ್ನೆಗೆ ಉತ್ತರಿಸಿ, ನಮಗೆ ಯಾರ ಅನಕೂಲ ಅವರ ಕಡೆ. ನಮ್ಮ ಗುರಿ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರೋದು. ನಾವು ಈಗಾಗಲೇ ಮಹಿಮಾ ಪಾಟೀಲ್ ಜೊತೆ ಮಾತುಕತೆ ಆಗಿದೆ. ವೀರೇಂದ್ರ ಪಾಟೀಲ್​​ರ ಮಗನ ಜೊತೆ ಮಾತುಕತೆ ನಡೀತಿದೆ.ನಾನು ಯಾವತ್ತು ಉಹಾಪೋಹ ಮಾತಾಡೋದಿಲ್ಲ. ನಾನು ಆಧಾರ ಇಲ್ಲದೆ ಮಾತಾಡಲ್ಲ, ಸಂಪೂರ್ಣ ಆಗುವರೆಗೂ ಯಾವುದು ಹೇಳಲ್ಲ ಎಂದರು.

ಅಲ್ಲದೇ ಜನತಾದಳ ಅಸ್ತಿತ್ವದ ಮೇಲೆ ಸರ್ಕಾರ ರಚನೆ ಮಾಡತ್ತೆ. ನಾವು ಪಕ್ಷದಲ್ಲಿ ನಿಷ್ಠೆ ಇದ್ದವರನ್ನ ಕಡೆಗಣಿಸೋದಿಲ್ಲ.ನಾವು ಈಗಾಗಲೇ ಅಭ್ಯರ್ಥಿಗಳನ್ನು ನಿಯೋಜಿತ ಅಭ್ಯರ್ಥಿ ಎಂದು ಕರೆಯುತ್ತಿದ್ದೇವೆ. ನಾನು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡ್ತೀದಿನಿ. ಜನತಾದಳದ್ದು ತನ್ನದೆ ಆದ ವೋಟ್ ಬ್ಯಾಂಕ್ ಇದೆ. ಗುಜರಾತ್ ಜೊತೆ ಕರ್ನಾಟಕದ ಚುನಾವಣೆ ನಡೆಯತ್ತದೆ ಎಂದರು.

ಬಿಜೆಪಿಗೆ ಮೋದಿ ಚಿಂತೆ, ಕಾಂಗ್ರೆಸ್​​ಗೆ ಸೋನಿಯಾ ಗಾಂಧಿ ಚಿಂತೆ. ನನಗೆ ಆಶ್ಚರ್ಯ ಅಂದ್ರೆ ಸೋನಿಯಾ ಗಾಂಧಿಗೆ ಸಮನ್ಸ್ ಕೊಟ್ಟಿದ್ದಕ್ಕೆ ಹೋರಾಟ ಮಾಡ್ತಾರೆ‌. ಇಲ್ಲಿ ಜನ ಪ್ರವಾಹದಿಂದ ಮನೆ ಕಳೆದುಕೊಂಡರು ಕಾಂಗ್ರೆಸ್ ಹೋರಾಟ ಮಾಡ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿ.ಎಸ್ ಟಿ.ಬರಲಿಲ್ಲ, ಅದಕ್ಕೆ ಕಾಂಗ್ರೆಸ್ ಹೋರಾಟ ಮಾಡಿಲ್ಲ. ಕೋಲಾರ ಮತ್ತು ಚಿಕ್ಕಮಗಳೂರು ಜಿಲ್ಲೆ ಎರಡು ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿವೆ ಎಂದು ಹೇಳಿದರು.

ಕಾಂಗ್ರೆಸ್ ನಡಿಗೆ ಕೃಷ್ಡೆಯ ಕಡೆಗೆ ಅಂದಿದ್ರು, ಇದೀಗ ಕಾಂಗ್ರೆಸ್ ನಡೀಗೆ ರಥೋತ್ಸವದ ಕಡೆ ನಡೆಯುತ್ತಿದೆ ಎಂದು ಸಿದ್ದರಾಮೋತ್ಸವದ ಬಗ್ಗೆ ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES