ಆಂಧ್ರಪ್ರದೇಶ: ವಿನೂತನ ಪ್ರಯತ್ನ ನಡೆಸಲಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಅಗತ್ಯ ಬೇಡಿಕೆ ಪೂರೈಸಲು ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದೆ.
ಈ ಹಿನ್ನಲೆಯಲ್ಲಿ ತೇಲುವ ಸೋಲಾರ್ ಪ್ಲಾಂಟ್ ನಿರ್ಮಿಸಿದೆ. ವಿಶಾಖಪಟ್ಟಣದ ಮೇಘಾದ್ರಿ ಗೆಡ್ಡಾ ಜಲಾಶಯದಲ್ಲಿ ಈ ತೇಲುವ ಸೋಲಾರ್ ಘಟಕ ನಿರ್ಮಿಸಲಾಗಿದ್ದು, ಇದೀಗ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ವಿಶಾಖಪಟ್ಟಣಂ ಮಹಾನಗರ ಪಾಲಿಕೆಯ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸೋಲಾರ್ ಘಟಕವನ್ನು 12 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ತೇಲಾಡುವ ಸೋಲಾರ್ ಘಟಕ ವಾರ್ಷಿಕ 4.2 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಿದೆ. ಈ ಸೋಲಾರ್ ಘಟಕದಿಂದ 54000 ಟನ್ ಗಳಷ್ಟು ಕಲ್ಲಿದ್ದಲನ್ನು ಉಳಿಸಲಿದೆ ಮತ್ತು ವಾರ್ಷಿಕ 3022 ಟನ್ ನಷ್ಟು ವಾಯು ಮಾಲಿನ್ಯವನ್ನು ಕಡಿಮೆ ಮಾಡಲಿದೆ.