Tuesday, December 24, 2024

ಸಿದ್ದರಾಮಯ್ಯ ವ್ಯಕ್ತಿಯಲ್ಲ,‌ ಶಕ್ತಿ : ಶಾಸಕ ರಾಘವೇಂದ್ರ ಹಿಟ್ನಾಳ್

ಕೊಪ್ಪಳ: ಮಾಜಿ ಸಿಎಂ‌ ಸಿದ್ದರಾಮಯ್ಯ ವ್ಯಕ್ತಿಯಲ್ಲ,‌ ಅವರೊಂದು ಶಕ್ತಿ ಎಂದು ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವ್ಯಕ್ತಿಯಲ್ಲ,‌ ಅವರೊಂದು ಶಕ್ತಿ ಹೀಗಾಗಿ  ಬಿಜೆಪಿಯವರಿಗೆ ಅವರ ಕಂಡರೆ ಭಯವಿದೆ ಎಂದು ಹೇಳಿದರು.

ಇನ್ನು ಅವರು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸ್ತಿನಿ ಅಂತ ಎಲ್ಲಿಯೂ ಹೇಳಿಲ್ಲ. ಕೊಪ್ಪಳದ‌ ಜನತೆ ಅವರಿಗೆ ಕೊಪ್ಪಳದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಅವರು ಕುಷ್ಟಗಿಗಾದ್ರೂ ನಿಲ್ಲಲ್ಲಿ,‌ ಕೊಪ್ಪಳಕ್ಕಾದ್ರೂ ನಿಲ್ಲಲ್ಲಿ ನಾವು ಕ್ಷೇತ್ರ ತ್ಯಾಗ ಮಾಡ್ತೀವಿ. ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೆ ಅಂದ್ರೆ ನಾವು ಕ್ಷೇತ್ರ ಬಿಟ್ಟು ಕೊಡ್ತೀವಿ ಎಂದರು.

ಅಲ್ಲದೇ ಅವರು ಸರ್ವ ಜನಾಂಗದ ಏಳ್ಗೆಗೆ ಶ್ರಮಿಸಿದ್ದಾರೆ. ಅವರ ಅಭಿಮಾನಿಗಳು ಹಾಗೂ ಮಿತ್ರರು ಸೇರಿ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES