ಬೆಂಗಳೂರು : ಎರಡು ವಾರಗಳ ಒಳಗೆ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸುವಂತೆ ಮನವಿ ಮಾಡಿಕೊಳ್ಳಲು ಮಾಜಿ ಕಾರ್ಪೊರೇಟರ್ ಗಳ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ್ದ 8 ವಾರಗಳ ಗಡುವು ಮುಕ್ತಾಯಗೊಂಡಿದ್ದು, ವಾರ್ಡ್ ಪುನರ್ ವಿಂಗಡನೆ & ವಾರ್ಡ್ ವಾರು ಮೀಸಲಾತಿ ಪ್ರಕಟಿಸಲು ಸುಪ್ರೀಂಕೋರ್ಟ್ ನೀಡಿದ್ದ 8 ವಾರಗಳು ಮುಗಿದ ಹಿನ್ನೆಲೆ ಇಂದು ಮತ್ತೆ ವಿಚಾರಣೆ ನಡೆಯಲಿದೆ. ವಾರ್ಡ್ ಪುನರ್ ವಿಂಗಡಣೆ ಮಾತ್ರ ಮಾಡಿ ಮೀಸಲಾತಿ ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸಿರುವ ಸರ್ಕಾರ ಕೋರ್ಟ್ ಆದೇಶ ಉಲ್ಲಂಘನೆ ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಇನ್ನು, ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಕಾನೂನು ತಜ್ಞರು, ವಕೀಲರು ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವ ಮಾಜಿ ಕಾರ್ಪೊರೇಟರ್ ಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಮಾಜಿ ಕಾರ್ಪೊರೇಟರ್ಗಳಾದ ಶಿವರಾಜ್, ಅಬ್ದುಲ್ ವಾಜೀದ್ ರಿಂದ ಮೇಲ್ಮನವಿ ಸಲ್ಲಿಸಲಾಗಿದೆ.
ಸರ್ಕಾರದ ವಿಳಂಬ ಧೋರಣೆ ಹಿನ್ನೆಲೆ ಸುಪ್ರೀಂಕೋರ್ಟ್ ನಿಂದ ಸರ್ಕಾರಕ್ಕೆ ಛೀಮಾರಿ ಸಾಧ್ಯತೆ ಇದ್ದು, ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪುಗಳನ್ನ ಗಮನಿಸಿದ್ರೆ ಸರ್ಕಾರಕ್ಕೆ ತರಾಟೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಅಬ್ದುಲ್ ವಾಜೀದ್ & ಶಿವರಾಜುರಿಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗಿದೆ.
ಅದಲ್ಲದೇ, ಎರಡು ವಾರಗಳ ಒಳಗೆ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸುವಂತೆ ಮನವಿ ಮಾಡಿಕೊಳ್ಳಲು ಮಾಜಿ ಕಾರ್ಪೊರೇಟರ್ ಗಳ ಪರ ವಕೀಲರ ಸಿದ್ಧತೆ ನಡೆಸಿದ್ದು, ಮತ್ತೊಂದೆಡೆ ಚುನಾವಣೆ ನಡೆಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಮನವಿಯನ್ನು ಮಾಡಿದ್ದಾರೆ.