ಬೆಂಗಳೂರು : ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡದ ಅವರು, ರಾಹುಲ್ ಗಾಂಧಿಯವರನ್ನ 50 ಗಂಟೆ ವಿಚಾರಿಸಿದ್ರು..ಏನಾಯ್ತು? ಅದರ ವಿಡಿಯೋ ಬಿಡಲಿ ನೋಡೋಣ, ಸುಳ್ಳು ಕೇಸ್ ದಾಖಲಿಸಿ ತನಿಖೆ ಮಾಡ್ತಾ ಇದಾರೆ. ಈ ಹಿಂದೆ ಅರುಣ್ ಜೇಟ್ಲಿ ಅವರೇ ಹೇಳಿರಲಿಲ್ವಾ? ಪ್ರಾಥಮಿಕ ತನಿಖೆಯಲ್ಲಾದರೂ ತಪ್ಪಿ ಕಂಡು ಬಂದಿದೆಯಾ?ಹೀಗಾಗಿ ನಾವು ಇದನ್ನ ಖಂಡಿಸಿ ಪ್ರತಿಭಟನೆ ಮಾಡ್ತಾ ಇದ್ದೇವೆ ಎಂದು ಹೇಳಿದರು.
ಇನ್ನು, ಕೇಂದ್ರ ಸರ್ಕಾರದ ವಿರುದ್ದ ನಮ್ಮ ಹೋರಾಟ ನಿರಂತರವಾಗಿರಲಿದೆ. ಒಂದೇ ಸಮುದಾಯವನ್ನು ನಂಬಿಕೊಂಡರೇ ಸಿಎಂ ಆಗಲ್ಲ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಮೀರ್ ಗೆ ಎಲ್ಲಾ ಉತ್ತರ ಕೊಡೊಕೆ ನಾನು ತಯಾರಿಲ್ಲ. ಇಂತಹವರು ನೂರಾರು ಜನ, ಯಾರು ಏನಬೇಕಾದರು ಮಾತಾಡಿದ್ರು, ಕಾಂಗ್ರೆಸ್ ಪಾರ್ಟಿ ಟೆಕೇರ್ ಆಫ್ ಕಾಂಗ್ರೆಸ್ ಪಾರ್ಟಿ ,ಕಾಂಗ್ರೆಸ್ ಲೈನ್ ನಲ್ಲೆ ಹೋಗಬೇಕು ಎಂದರು.