ಬೆಂಗಳೂರು : ಗೂಗಲ್ ವೆಬ್ ಸೈಟ್ ಅನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡ್ತಿದ್ದವರನ್ನು ಬಂಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಒಟ್ಟು ನಾಲ್ವರು ಆರೋಪಿಗಳಾದ ಪರನ್ ಸಿಂಗ್ ಚೌಹಾಣ್(25)ನರೇಂದ್ರ(32),ಧರ್ಮೇಂದರ್(21)ಧರ್ಮವೀರ್ (24) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಾಹನ ಟ್ರಾನ್ಸ್ ಪೋರ್ಟ್ ಮಾಡುವ ನೆಪದಲ್ಲಿ ವಂಚನೆ ಮಾಡಿದ್ದು, ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡ್ತಿದ್ರು. ಜಾಹಿರಾತಿನಲ್ಲಿ ತಮ್ಮ ಫೋನ್ ನಂಬರ್ ಹಾಕಿ ವಾಹನ ತೆಗೆದುಕೊಂಡು ತಮ್ಮ ಅಸಲಿ ಆಟ ಶುರು ಮಾಡ್ತಿದ್ರು, ತಿಂಗಳು ಕಳೆದರು ವಾಹನ ಡಿಲವರಿ ಕೊಡದೇ ಕಳ್ಳಾಟ ಮಾಡುತ್ತಿದ್ದರು.
ಇನ್ನು, ಪ್ರಶ್ನೆ ಮಾಡಿದ್ದಕ್ಕೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ರು, ಇದೇ ರೀತಿ ವಂಚನೆಗೊಳಗಾಗಿದ್ದ ವ್ಯಕ್ತಿಯಿಂದ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಬುಲೆಟ್ ಶಿಫ್ಟ್ ಮಾಡಲು ಮುಂದಾಗಿದ್ದ ವ್ಯಕ್ತಿ. ಮೊದಲು 4 ಸಾವಿರ ಶಿಫ್ಟಿಂಗ್ ಚಾರ್ಜ್ ಪಡೆದಿದ್ರು 20 ದಿನದವರೆಗೂ ವಾಹನ ಹುಬ್ಬಳ್ಳಿ ತಲುಪಿರಲಿಲ್ಲ. ಈ ವೇಳೆ ಸಂಪರ್ಕಿಸಿದ ವ್ಯಕ್ತಿಗೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹೆಚ್ಚಿನ ಹಣ ನೀಡಿದ್ರು ಬೈಕ್ ತಲುಪಿರಲಿಲ್ಲ. ನಂತರ ಪ್ರತಿಷ್ಠಿತ ಕಂಪನಿ ಜಾಗಕ್ಕೆ ಬೈಕ್ ಬಿಟ್ಟು ಬರ್ತಿದ್ರು. ಬೈಕ್ ಮಾಲೀಕ ಹುಡುಕಿ ಬಂದಾಗ ಎಲ್ಲಾ ಕೃತ್ಯ ಬಯಲಿಗೆ ಮತ್ತೆ ಕಂಪನಿಗರ ಹಣ ಕೊಟ್ಟು ಬೈಕ್ ಡಿಲವರಿ ಕೊಡೊ ಸ್ಥಿತಿ ಉಂಟಾಗಿದೆ.