Saturday, September 21, 2024

H.D.ಕೋಟೆಯಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭ

ಮೈಸೂರು : ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ.. ರಾಜ್ಯದ ಹಿಂದುಳಿದ ತಾಲೂಕುಗಳಲ್ಲೇ ಅತ್ಯಂತ ಹಿಂದುಳಿದ ತಾಲೂಕು. ಇದೀಗ ವನಸಿರಿ ನಾಡು H.D.ಕೋಟೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆಯಾಗಿದೆ. ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೃಷ್ಣ ನಾಯಕ್ ಆರಂಭಿಸಿರುವ ಅಪ್ಪಾಜಿ ಕ್ಯಾಂಟೀನ್‌ಗೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.

ಹೆಚ್.ಡಿ.ಕೋಟೆ ಮಿನಿ ವಿಧಾನ ಸೌಧದ ಎದುರು ಅಪ್ಪಾಜಿ‌ ಕ್ಯಾಂಟೀನ್ ಉದ್ಘಾಟನೆಗೊಂಡಿದೆ.ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಸಿ.ಎಂ.ಹೆಚ್.ಡಿ.ಕುಮಾರಸ್ವಾಮಿ ಕೃಷ್ಣ ನಾಯಕ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಹಳ್ಳಿಯಿಂದ ಬರೋ ಬಡ, ಕೂಲಿ ಕಾರ್ಮಿಕರಿಗೆ ಇದೊಂದು ಆಶಾದಾಯಕ ಬೆಳವಣಿಗೆ. ಕೇಂದ್ರ ಸರ್ಕಾರ ಜಿಎಸ್‌ಟಿ ಹೆಚ್ಚು ಮಾಡಿರುವ ಪರಿಣಾಮ ಹೋಟೆಲ್ ಊಟ, ತಿಂಡಿ ಬೆಲೆ ಕೂಡ ದುಬಾರಿಯಾಗಿದೆ. ಹೀಗಾಗಿಯೇ ಬಡವರ ಪಾಲಿಕೆ ಅಪ್ಪಾಜಿ ಕ್ಯಾಂಟೀನ್ ನೆರವಾಗಲಿದೆ ಎಂದಿದ್ರು ಕುಮಾರಸ್ವಾಮಿ.

ಇನ್ನು ಅಪ್ಪಾಜಿ ಕ್ಯಾಂಟೀನ್ ಸೋಮವಾರದಿಂದಲೇ ಕಾರ್ಯಾರಂಭ ಮಾಡಲಿದೆ. ಸೋಮವಾರದಿಂದ ಶನಿವಾರದವರೆಗೂ ಕಾರ್ಯನಿರ್ವಹಿಸಲಿರುವ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಕೇವಲ 10 ರೂಪಾಯಿಗೆ ಸಿಗಲಿದೆ. ಸುಮಾರು 8 ಮಂದಿ ಬಾಣಸಿಗರ ಮೂಲಕ ಅಡುಗೆ ತಯಾರಾಗಲಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಜೆಡಿಎಸ್ ಮುಖಂಡ ಕೃಷ್ಣನಾಯಕ ಇದು ಚುನಾವಣೆಗಾಗಿ ಆರಂಭ ಮಾಡಿರುವ ಕ್ಯಾಂಟೀನ್ ಅಲ್ಲ. ಕೆಲವರಿಗೆ ಸ್ವಾಭಿಮಾನ ಅಡ್ಡ ಬರುತ್ತದೆ. ಹೀಗಾಗಿ ಕನಿಷ್ಠ ಅಮೌಂಟ್ ಅನ್ನು ಊಟ, ತಿಂಡಿಗೆ ಫಿಕ್ಸ್ ಮಾಡಲಾಗಿದೆ. ನಾನು ಇರೋ ವರೆಗೂ ಈ ಕ್ಯಾಂಟೀನ್ ಇರುತ್ತೆ. ತಾಲೂಕು ಕೇಂದ್ರಕ್ಕೆ ವಿವಿಧ ಕೆಲಸಗಳಿಗೆ ಹಳ್ಳಿ ಭಾಗದ ಜನ್ರು ಬರ್ತಾರೆ. ಅವ್ರಿಗೆ ಕಡಿಮೆ ದರದಲ್ಲಿ ಆಹಾರ ನೀಡೋ ಉದ್ದೇಶ ನಮ್ಮದು. ಫುಡ್ ಕ್ವಾಲಿಟಿ ವಿಚಾರದಲ್ಲಿ ರಾಜಿ ಇಲ್ಲ, ಹೀಗಾಗಿ ನಮ್ಮ ಕಾರ್ಯಕರ್ತರನ್ನ ಒಳಗೊಂಡ 25 ಮಂದಿ‌ ಟೀಂ ಮೂಲಕ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ, ಒಂದೊಳ್ಳೆ ಉದ್ದೇಶದಿಂದ ಜೆಡಿಎಸ್ ಮುಖಂಡ ಕೃಷ್ಣ ನಾಯಕ್ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದು ಹಸಿದು ಬರೋ ಜನ್ರಿಗೆ ಆಹಾರ ನೀಡಲಿ ಎನ್ನೋದು ಕೂಡ ನಮ್ಮ ಆಶಯ.

RELATED ARTICLES

Related Articles

TRENDING ARTICLES