Saturday, November 23, 2024

ಏರ್​ಪೋರ್ಟ್​ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ.!

ಬೆಂಗಳೂರು ಗ್ರಾಮಾಂತರ: ಏರ್​ಪೋರ್ಟ್​ಗೆ ಮೆಟ್ರೋ ಬರ್ತಿದ್ದಂತೆ ಸಿಟಿ ಕನೆಕ್ಟಿವಿಟಿ ಈಜಿಯಾಗುತ್ತೆ ಅಂತ ಅವ್ರೆಲ್ಲಾ ಕನಸು ಕಾಣ್ತಿದ್ರು. ಆದ್ರೆ, ಅವ್ರಿಗೆ ಮೆಟ್ರೋ ನಿರಾಸೆ ಮಾಡ್ತಿದೆ. ಏರ್​ಪೋರ್ಟ್ ಮಾರ್ಗದಲ್ಲಿ ಬರೋ ಊರ ಜನ್ರಿಗೆ, ತಮ್ಮ ಊರಲ್ಲೇ ಮೆಟ್ರೋ ಹೋಗ್ತಿದ್ರು ಟ್ರೈನ್ ಹತ್ತೋ ಭಾಗ್ಯ ಇಲ್ಲದಂತಾಗಲಿದೆ ಹಾಗಾದ್ರೆ ಅದ್ಯಾಕೆ ಅಂತೀರಾ..? ಈ ಸ್ಟೋರಿ ನೋಡಿ.

ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ಫೈನಲ್ ಆಗ್ತಿದ್ದಂತೆ ಏರ್​ಪೋರ್ಟ್ ಪ್ರಯಾಣಿಕರಿಗಿಂತ ಖುಷಿ ಪಟ್ಟವರು ಬೆಂಗಳೂರಿನ ಬಳ್ಳಾರಿ ರಸ್ತೆ ಸುತ್ತಲಿನ ಗ್ರಾಮಸ್ಥರು. ಮೆಟ್ರೋ ಬಂದ್ಬಿಡುತ್ತೆ 10 ನಿಮಿಷಕ್ಕೆ ಸಿಟಿ ಸೆಂಟರ್ ಸೇರಬಹುದು ಅಂತ ಕನಸು ಕಾಣ್ತಿದ್ರು. ಆದ್ರೆ, ಈ ಊರ ಮಂದಿಗೆ BMRCL ನಿರಾಸೆ ಮಾಡಿದೆ. ಎಲ್ಲಾ ಊರಿಗೆ ಮೆಟ್ರೋ ಟ್ರ್ಯಾಕ್ ಬರ್ತಿದೆ. ಆದ್ರೆ, ಸ್ಟೇಷನ್ಸ್ ಬರ್ತಿಲ್ಲ. ಹೀಗಾಗಿ ಜನ್ರಿಗೆ ನಿರಾಸೆ ಮೂಡಿಸಿದೆ BMRCL. ಏರ್​ಪೋರ್ಟ್​ಗೆ ಈಗಾಗಲೇ ಮೆಟ್ರೋ ಆರಂಭವಾಗಿದ್ದು, ಹೆಚ್ಚುವರಿ ನಿಲ್ದಾಣಗಳನ್ನು ಮಾಡೋಕೆ ನಮ್ಮ ಮೆಟ್ರೋ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಅವರೆಲ್ಲಾ ಈ ಮೊದಲು ಹೇಗೆ ಮೆಟ್ರೋ ಕಿಲೋಮೀಟರ್​ಗೆ ಒಂದರಂತೆ ನಿಲ್ದಾಣ ನಿರ್ಮಿಸ್ತಿತ್ತೋ ಅದೇ ರೀತಿ ಈ ಮಾರ್ಗದಲ್ಲೂ ಮಾಡಲಿ. ಇನ್ನೂ ಕಾಲ ಮಿಂಚಿಲ್ಲ ಅಂತ ಹೇಳ್ತಿದ್ದಾರೆ.

ಸದ್ಯ ಹೆಬ್ಬಾಳ ಟು ಏರ್​ಪೋರ್ಟ್ ಮಧ್ಯೆ ಕೊಡಿಗೆಹಳ್ಳಿ ಕ್ರಾಸ್, ಜಕ್ಕೂರು ಕ್ರಾಸ್, ಕೋಗಿಲು ಕ್ರಾಸ್, ಬಾಗಲೂರು ಕ್ರಾಸ್ ಬೆಟ್ಟದ ಹಲಸೂರು, ಟ್ರೆಂಪೆಟ್ ಜಂಕ್ಷನ್​ನಲ್ಲಿ ಮೆಟ್ರೋ ನಿಲ್ದಾಣಗಳು ಬರಲಿವೆ. ನಿಲ್ದಾಣಗಳ ಮಧ್ಯೆ ಸರಾಸರಿ 4.5 ಕಿಲೋಮೀಟರ್ ಅಂತರ ಇರಲಿದೆ. ಆದ್ರೆ, ಮೆಟ್ರೋ ಮಾತ್ರ ಹಳೆ ಪ್ಲ್ಯಾನ್​ನಂತೆ ನಾವು ಕೆಲಸ ಮಾಡುತ್ತಾ ಇದೀವಿ ಅಂತ ಹೇಳ್ತಿದೆ.

ಒಟ್ಟಿನಲ್ಲಿ ಮೆಟ್ರೋ ಬಂತು ಅಂತ ಖುಷಿಯಲ್ಲಿದ್ದ ಜನ್ರಿಗೆ ಈಗ ನಿಲ್ದಾಣ ಇಲ್ವಲ್ಲಾ ಅನ್ನೋ ಬೇಸರ ಹೆಚ್ಚಾಗಿದೆ. ವೇಗವಾಗಿ ಬೆಳೆಯುತ್ತಿರೋ ಈ ಮಾರ್ಗದಲ್ಲಿ ನಿಲ್ದಾಣಗಳನ್ನು ಕಡಿಮೆ ಮಾಡ್ತಿರೋದಕ್ಕೆ ಮೆಟ್ರೋ ಮುಂದಿನ ದಿನಗಳಲ್ಲಿ ದುಬಾರಿ ಬೆಲೆ ತೆರಬೇಕಾದ ಸಾಧ್ಯತೆ ಇದೆ.

ಕೃಷ್ಣಮೂರ್ತಿ, ಪವರ್ ಟಿವಿ, ಬೆಂಗಳೂರು

RELATED ARTICLES

Related Articles

TRENDING ARTICLES