ಹಾಸನ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗ್ತಿದೆ. ಮುಂಗಾರು ಆರಂಭವಾಯಿತೆಂದು ರೈತರು ಬೆಳೆ ಬೆಳೆಯಲು ಆರಂಭ ಮಾಡಿದ್ರು. ಸಾಲ ಸೋಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ತಂದು ಬೆಳೆ ಬೆಳೆಯಲು ಶುರು ಮಾಡಿದ್ರು. ಆದರೆ ನಿತಂತರ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಅನ್ನದಾತ ಕಂಗಾಲಾಗಿ ಹೋಗಿದ್ದಾನೆ.
ಆದರೆ ನಿರಂತರ ಮಳೆಗೆ ರೈತ ಬೆಳೆದ ಬೆಳೆಗಳು ಕೊಳೆತು ಹೋಗ್ತಿದ್ದು, ಕಾಫಿ, ಮೆಣಸು ಬೆಳೆಗಳು ಅತಿಯಾದ ತೇವಾಂಶದಿಂದ ನೆಲಕಚ್ಚಿವೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲವು ಕಡೆ ಕಾಫಿ, ಮೆಣಸು ಉದುರುತ್ತಿದ್ದು, ಕಾಫಿ ಹಾಗೂ ಮೆಣಸಿಗೆ ಕೊಳೆರೋಗ ಬಾಧಿಸಿದೆ. ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಕೊಳೆರೋಗ ಬಂದಿದ್ದು, ಶೇಕಡಾ 50 % ಫಸಲು ಕಡಿಮೆಯಾಗೋ ಆತಂಕದಲ್ಲಿ ಕಾಫಿ ಬೆಳೆಗಾರರು ಇದ್ದಾರೆ. ಸರ್ಕಾರ ಕಾಫಿಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.