ಕೊಪ್ಪಳ : ಮುಂಗಾರು ಮಳೆಗೆ ಕಬ್ಬರಗಿಯ ಕಪಿಲತೀರ್ಥ ಜಲಪಾತ ಮೈದುಂಬಿ ಹರಿಯುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಬಳಿಯ ಬೆಟ್ಟದಲ್ಲಿರುವ ಜಲಪಾತ ಇದಾಗಿದ್ದು, ಸ್ಥಳೀಯರ ಪ್ರಕಾರ ಈ ಜಲಪಾತದ ಹೆಸರು ಕಪಲೆಪ್ಪನ ದಿಡಗು ಎಂದಾಗಿದೆ.
ಇನ್ನು, ಸುಮಾರು 40 ಅಡಿ ಎತ್ತರದಿಂದ ಜಲಪಾತ ಧುಮ್ಮುಕ್ಕುತ್ತಿದ್ದು, ಜಲಪಾತ ನೋಡಲು ಸುತ್ತಲಿನ ಜನರು ಸೇರಿದಂತೆ ಹೊರ ಜಿಲ್ಲೆ ಯಿಂದ ಕೂಡ ಆಗಮಿಸಿ ಜಲಪಾತದ ಸೌಂದರ್ಯವನ್ನು ಕಂಡು ಕಣ್ಣ್ತುಂಬಿಕೊಂಡರು. ಪರಿಸರದ ಮಧ್ಯೆ ಸುಂದರ ಜಲಪಾತ ಇದ್ದು, ಜನಮನ ಸೆಳೆಯುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಲಪಾತಕ್ಕೆ ಜೀವ ಕಳೆ ಬಂದಿದೆ. ಮಳೆಗಾಲದಲ್ಲಿ ಪಲೆಪ್ಪ ಜಲಪಾತ ಪ್ರವಾಸಿ ತಾಣವಾಗುತ್ತದೆ.