ಬಳ್ಳಾರಿ : ತುಂಗಭದ್ರಾ ಜಲಾಶಯ ಭರ್ತಿ ಆಗಿದೆ. ಒಂದೂವರೆ ಲಕ್ಷಕ್ಕೂ ಅಧಿಕ ನೀರು ನದಿಗೆ ಬಿಡಲಾಗಿದೆ. ವಿಶ್ವ ವಿಖ್ಯಾತ ಹಂಪಿಯ 5 ದೇವಾಲಯಗಳಿಗೆ ಹೋಗುವ ದಾರಿ ಬಂದ್ ಆಗಿದೆ.
ಕೋದಂಡರಾಮ ದೇಗುಲದ ಅರಳಿ ಕಟ್ಟೆ ಸಂಪೂರ್ಣ ಜಲಾವೃತವಾಗಿದ್ದು. ಕೋದಂಡರಾಮ ದೇಗುಲ, ಯಂತ್ರೋದ್ಧಾರಕ, ವೆಂಕಟೇಶ್ವರ ದೇಗುಲ, ಸೂರ್ಯನಾರಾಯಣ, ರಂಗನಾಥ ಸ್ವಾಮಿ ದೇಗುಲಕ್ಕೆ ಹೋಗುವ ದಾರಿ ಬಂದ್ ಆಗಿದ್ದು, ಸಾಲು ಮಂಟಪಗಳು ಮುಳುಗಡೆಯಾಗಿವೆ. ದೇವರುಗಳ ದರ್ಶನಕ್ಕೆ ಗುಡ್ಡ ಹತ್ತಿ ಭಕ್ತಾಧಿಗಳು ಬರುತ್ತಿದ್ದಾರೆ. ಇನ್ನೂ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಮದಲಘಟ್ಟ ಆಂಜನೇಯಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ಇಂದಿನಿಂದ ದೇವಸ್ಥಾನ ಪ್ರವೇಶ ಮತ್ತು ಸುತ್ತ ಮುತ್ತಲ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಹೂವಿನ ಹಡಗಲಿಯ ರೈತರ ಜಮೀನುಗಳು ಜಲಾವೃತವಾಗಿವೆ. ಹೊಸಹಳ್ಳಿ ಗ್ರಾಮದ 300 ಹೆಚ್ಚು ಎಕರೆ ಬೆಳೆ ಜಲಾವೃತವಾಗಿದೆ.