ಬೆಂಗಳೂರು : ಗಾಂಧಿ ಕುಟುಂಬಕ್ಕೆ ಒಂದಲ್ಲಾ ಒಂದು ಸಂಕಷ್ಟ ಎದುರಾಗ್ತಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಮ್ಯಾರಾಥಾನ್ ವಿಚಾರಣೆ ಎದುರಿಸಿದ್ದ ರಾಹುಲ್ ಗಾಂಧಿ ಸದ್ಯ ರಿಲಾಕ್ಸ್ ಆಗುತ್ತಿದ್ದಾರೆ. ರಾಹುಲ್ ಗಾಂಧಿ ಬಳಿಕ ಇದೀಗ ಸೋನಿಯಾಗಾಂಧಿಗೆ ED ಡ್ರಿಲ್ ಮಾಡಲು ಮುಂದಾಗಿದೆ. ಕಳೆದ ತಿಂಗಳು ಕೋವಿಡ್ ಕಾರಣದಿಂದ ED ವಿಚಾರಣೆಗೆ ಗೈರಾಗಿದ್ದ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿಗೆ ED ಮತ್ತೆ ಸಮನ್ಸ್ ನೀಡಿದೆ. ಇದೇ 21ರಂದು ವಿಚಾರಣೆಗೆ ಹಾಜರಾಗುವಂತೆ ED ಮತ್ತೊಮ್ಮೆ ಸಮನ್ಸ್ ನೀಡಿದ್ದು, ವಿಚಾರಣೆಗೆ ಸೋನಿಯಾಗಾಂಧಿ ಹಾಜರಾಗುತ್ತಿದ್ದಾರೆ. ಹೀಗಾಗಿ ಅಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚನೆ ನೀಡಿದೆ. ಈ ಹಿಂದೆ ರಾಹುಲ್ ಗಾಂಧಿ ED ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿತ್ತು..ಈ ಬಾರಿಯೂ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಇನ್ನು ಎಐಸಿಸಿ ಸೂಚನೆಯಂತೆ ಜುಲೈ 21 ರಂದು ಬೃಹತ್ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ, ಬೆಂಗಳೂರಿನ ಫ್ರೀಡಂ ಪಾರ್ಕ್ ಮುಖಾಂತರ ರಾಜಭವನಕ್ಕೆ ಮುತ್ತಿಗೆ ಹಾಕಲು ರಾಜ್ಯ ಕೈ ಪಡೆ ತೀರ್ಮಾನಿಸಿದೆ. ಸೋನಿಯಾ ಗಾಂಧಿಗೆ ಧೈರ್ಯ ತುಂಬಲು ನಾವು ಪ್ರತಿಭಟನೆ ಮಾಡ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ಜೈಲಿಗೆ ಹೋಗ್ತೋರೋ ಇಲ್ವೋ ಗೊತ್ತಿಲ್ಲ. ಅದನ್ನ ನ್ಯಾಯಾಲಯ ತೀರ್ಮಾನಿಸುತ್ತೆ. ಆದ್ರೆ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಅಮಾಯಕರಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.
ಒಟ್ಟಾರೆ ,ಜುಲೈ 21 ರಂದು ಇಡಿ ವಿಚಾರಣೆಗೆ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಹಾಜರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದ್ದು,ಪ್ರತಿಭಟನೆ ವೇಳೆ ದೊಡ್ಡ ಹೈಡ್ರಾಮಾವೇ ನಡೆಯುವ ಸಾಧ್ಯತೆ ಇದೆ.
ಗೋವಿಂದ್,ಪೊಲಿಟಿಕಲ್ ಬ್ಯುರೋ,ಪವರ್ ಟಿವಿ