Friday, September 20, 2024

ರಾಜ್ಯದಲ್ಲಿ ವರುಣನ ಅವಾಂತರ : ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕರು

ಬೆಂಗಳೂರು : ಇಂದು ಪೂರ್ತಿ ದಿನ ಖಾಸಗಿ ಹೋಟೆಲ್​​ನಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿದ್ದು, ರಾತ್ರಿ 8:30 ರಿಂದ ಸಿಎಂ ಬೊಮ್ಮಾಯಿ‌ ಜೊತೆ ಡಿನ್ನರ್ ಪಾರ್ಟಿಯಲ್ಲಿ ಶಾಸಕರು ಭಾಗವಹಿಸಲಿದ್ದಾರೆ.

ಬೆಳಗ್ಗೆ 8 ಗಂಟೆ ಉಪಹಾರ ಸೇವಿಸಲಿರುವ ಶಾಸಕರು. ನಂತರ ಆಡಳಿತ ಪಕ್ಷದ ಶಾಸಕರು ವಿಶ್ರಾಂತಿ ಪಡೆಯಲಿದ್ದಾರೆ. ಮಧ್ಯಾನ್ಹ ‌12:30 ಶಾಸಕರ ಜೊತೆ ಸಿಎಂ ಬೊಮ್ಮಾಯಿ‌ ಸಭೆ ನಡೆಸಲಿದ್ದು, 1:30 ರಿಂದ 2:30 ರವರೆಗೆ ಭೋಜನ ವಿರಾಮ ಇರಲಿದೆ. ಬಳಿಕೆ 3:30 ರಿಂದ ರಾಷ್ಟ್ರಪತಿ ಚುನಾವಣೆ ಮಾದರಿ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸಂಜೆ 5 ಕ್ಕೆ ಶಾಸಕರು ಲಘು ಉಪಹಾರ ಸೇವಿಸಲಿದ್ದಾರೆ.

ಇನ್ನು, ರಾತ್ರಿ 8:30 ರಿಂದ ಸಿಎಂ ಬೊಮ್ಮಾಯಿ‌ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸುವ ಶಾಸಕರು, ಜುಲೈ ೧೮ ರಂದು‌ ರಾಷ್ಟ್ರಪತಿ‌ ಚುನಾವಣೆ ಬಿಜೆಪಿ ‌ಶಾಸಕರಿಗೆ ಐಷಾರಾಮಿ ಹೋಟೆಲ್​​ನಲ್ಲಿ ಅತಿಥ್ಯ ಹೂಡಲಿದ್ದಾರೆ. ಇಂದು ಮತದಾನ ಪ್ರಕ್ರಿಯೆ ಬಗ್ಗೆ ತರಬೇತಿ ಅಣಕು ಮತದಾನದ ಮೂಲಕ ತರಬೇತಿ ಪಡೆಯಲಿದ್ದಾರೆ.

ಆದರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಹಲವೆಡೆ ನದಿಗಳು ತುಂಬಿ ಪ್ರವಾಹದ ಭೀತಿ ಉಂಟಾಗಿದ್ದು, ಮಳೆಯ ಹೊಡೆತಕ್ಕೆ ಜನ ಸಿಲುಕಿದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸಬೇಕಾಗ ಶಾಸಕರು ಐಷಾರಾಮಿ ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದು, ರಾಷ್ಟ್ರಪತಿ ಚುನಾವಣೆ ನೆಪದಲ್ಲಿ ಅತಿಥ್ಯ ಆದರೆ ಜನರ ಗೋಳು ಕೇಳೋರು ಯಾರು? ಎಂದು ಪ್ರಶ್ನೆಯಾಗಿಯೇ ಉಳಿದಿದೆ.

RELATED ARTICLES

Related Articles

TRENDING ARTICLES