ಬೆಂಗಳೂರು : ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶ ವಾಪಸ್ ಪಡೆಯಲಾಗಿದೆ.
ಜುಲೈ ೧೫ ರ ತಡರಾತ್ರಿ ಆದೇಶ ವಾಪಸ್ ಪಡೆದಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಆಗಿದೆ ಸರ್ಕಾರದ ಸ್ಥಿತಿ. ಸರ್ಕಾರಿ ಇಲಾಖೆಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೋ ಪೋಟೋ ತೆಗೆಯಂಗಿಲ್ಲ ಎಂದು ನಿನ್ನೆ ಸರ್ಕಾರ ಅದೇಶ ಮಾಡಿತ್ತು. ಆದರೆ, ಸಾರ್ವಜನಿಕ ವಲಯ ಹಾಗೂ ಮಾಧ್ಯಮದಲ್ಲಿ ಸರ್ಕಾರದ ನಿರ್ಧಾರಕ್ಕೆ ಬಾರೀ ಅಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಲಂಚಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಎಂದು ಅಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು, ನಿನ್ನೆ ಹೊರಡಿಸಿದ ಅದೇಶ ರಾತ್ರೋರಾತ್ರಿ ವಾಪಾಸು ಪಡೆದಿದ್ದು, ಅದರಲ್ಲೂ ಬಿಜೆಪಿ ಸರ್ಕಾರಕ್ಕೆ ಈ ಅದೇಶದಿಂದ ಬಾರೀ ಮುಜುಗರವಾಗಿತ್ತು. ಹೀಗಾಗಿ ಮುಜುಗರದಿಂದ ಪಾರಾಗಲು ಇದೀಗ ದಿಡೀರ್ ಅದೇಶ ವಾಪಾಸು ಪಡೆಯಲಾಗಿದೆ.