ಸ್ಯಾಂಡಲ್ವುಡ್ಗೆ ಮತ್ತೊಬ್ಬ ಪ್ರಾಮಿಸಿಂಗ್ ಹೀರೋ ಎಂಟ್ರಿ ಕೊಟ್ಟಾಯ್ತು. ಪ್ರೀತಿ, ಸ್ನೇಹದ ಸುತ್ತೋ ಪ್ರೇಮ್ ಆದ್ರೂ ಪಕ್ಕಾ ಕಮರ್ಷಿಯಲ್ ಹೀರೋ ಆಗಿಯೇ ಲಾಂಚ್ ಆಗಿದ್ದಾರೆ. ಅದಕ್ಕೆ ಸ್ಯಾಂಡಲ್ವುಡ್ ಸುಪ್ರೀಂ ಹೀರೋ ಆಶೀರ್ವಾದ ಕೂಡ ಸಿಕ್ಕಿದೆ. ಇಷ್ಟಕ್ಕೂ ಓ ಮೈ ಲವ್ ಹೇಗಿದೆ..? ಅಕ್ಷಿತ್ ಹೀರೋಯಿಸಂ ಹೆಂಗಿದೆ ಅನ್ನೋದ್ರ ಕಂಪ್ಲೀಟ್ ರಿವ್ಯೂ ರಿಪೋರ್ಟ್ ನಿಮ್ಮ ಮುಂದೆ.
ನಾಯಕನಾಗಿ ಚಿತ್ರರಂಗಕ್ಕೆ ಜೂ. ಸುಪ್ರೀಂ ಹೀರೋ ಎಂಟ್ರಿ
ಡ್ಯಾನ್ಸ್ & ಮಸ್ತ್ ಆ್ಯಕ್ಷನ್ ಜೊತೆ ಪರಿಪಕ್ವವಾದ ಅಭಿನಯ
ಚಿತ್ರ: ಓ ಮೈ ಲವ್
ನಿರ್ದೇಶನ: ಸ್ಮೈಲ್ ಶ್ರೀನು
ನಿರ್ಮಾಣ: ಜಿ ರಾಮಾಂಜಿನಿ
ಸಂಗೀತ: ಚರಣ್ ಅರ್ಜುನ್
ಸಿನಿಮಾಟೋಗ್ರಫಿ: ಹಾಲೇಶ್ ಎಸ್
ತಾರಾಗಣ: ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲಕೇರಿ, ಎಸ್ ನಾರಾಯಣ್, ಸಾಧು ಕೋಕಿಲಾ, ಪವಿತ್ರಾ ಲೋಕೇಶ್, ದೇವ್ಗಿಲ್ ಮುಂತಾದವರು.
ಓ ಮೈ ಲವ್ ಸ್ಟೋರಿಲೈನ್ :
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಪ್ರೀತಿಯ ಸುತ್ತ ಸುತ್ತೋ ಕಥಾನಕ. ಪ್ರೇಮ್ ಅನ್ನೋ ನಾಯಕನಟ ಪ್ರೀತಿ ಅನ್ನೋ ನಾಯಕಿಯ ಪ್ರೀತಿ ಹಾಗೂ ಅವ್ರ ಸಹೋದರ ಪೃಥ್ವಿಯ ಸ್ನೇಹವನ್ನು ಹೇಗೆ ಬ್ಯಾಲೆನ್ಸ್ ಮಾಡ್ತಾನೇ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ. ಇದ್ರ ಜೊತೆಗೆ ನಾಯಕಿಯ ಮೇಲೆ ಮೋಜು ತೋರಿಸೋ ಖಳನಾಯಕ, ಆತನಿಂದ ಆಕೆಯನ್ನ ಪ್ರೇಮ್ ಹೇಗೆ ಕಾಪಾಡ್ತಾನೆ..? ಗೆಳೆಯನ ಸ್ನೇಹ, ಆತನ ತಂಗಿಯ ಪ್ರೀತಿಯನ್ನ ಉಳಿಸಿಕೊಳ್ತಾನಾ ಅಥ್ವಾ ಇಲ್ವಾ ಅನ್ನೋದೇ ಓ ಮೈ ಲವ್ ಚಿತ್ರದ ಕಥಾಹಂದರ.
ಓ ಮೈ ಲವ್ ಆರ್ಟಿಸ್ಟ್ ಪರ್ಫಾಮೆನ್ಸ್
ಈ ಚಿತ್ರದಿಂದ ಕನ್ನಡ ಇಂಡಸ್ಟ್ರಿಗೆ ಹೊಸ ಹೀರೋ ಹುಟ್ಟಿಕೊಂಡಿದ್ದಾನೆ. ಸುಪ್ರೀಂ ಹೀರೋ ಶಶಿಕುಮಾರ್ ತನಯ ಅಕ್ಷಿತ್ ಚೊಚ್ಚಲ ಚಿತ್ರದಲ್ಲೇ ಜಬರ್ದಸ್ತ್ ಎಂಟ್ರಿ ಕೊಟ್ಟಿದ್ದಾರೆ. ಇವ್ರ ನಟನೆ ಜೊತೆ ಹಾವ, ಭಾವ, ಆಂಗಿಕ ಭಾಷೆ ಎಲ್ಲವೂ ನುರಿತ ಕಲಾವಿದನಂತಿವೆ. ಅದ್ರಲ್ಲೂ ಸ್ಟಂಟ್ಸ್ ಹಾಗೂ ಡ್ಯಾನ್ಸ್ ವಿಚಾರದಲ್ಲಿ ಸ್ಪೆಷಲ್ ಅಟ್ರ್ಯಾಕ್ಷನ್ ಅನಿಸ್ತಾರೆ ಪ್ರೇಮ್ ಪಾತ್ರದಾರಿಯಲ್ಲಿನ ಅಕ್ಷಿತ್ ಶಶಿಕುಮಾರ್.
ಸನಾದಿ ಅಪ್ಪಣ್ಣ ಮೊಮ್ಮಗಳು ಕೀರ್ತಿ ಕಲಕೇರಿಗೆ ಈ ಚಿತ್ರದ ನಾಯಕಿ ಪ್ರೀತಿ ಪಾತ್ರದಲ್ಲಿ ನೋಡುಗರಿಗೆ ಹಿತ ಅನಿಸ್ತಾರೆ. ಅವ್ರಿಗೆ ಇದು ಎರಡನೇ ಸಿನಿಮಾ ಆದ್ರೂ ಕಾಲೇಜ್ ಗರ್ಲ್ ಹಾಗೂ ಗ್ಲಾಮರ್ ಡಾಲ್ ಆಗಿ ಚಿತ್ರದ ಗ್ಲಾಮರ್ ಹೆಚ್ಚಿಸಿದ್ದಾರೆ. ಇನ್ನು ಸಾಧು ಕೋಕಿಲಾ ಕಾಮಿಡಿ ಟ್ರ್ಯಾಕ್ ನೋಡುಗರಿಗೆ ಮಸ್ತ್ ಮನರಂಜನೆ ಜೊತೆ ನಕ್ಕು ನಲಿಸುತ್ತೆ.
ಸೀರಿಯಸ್ ಆಗಿರೋ ತಂದೆ ಪಾತ್ರವನ್ನು ಇದೇ ಮೊದಲ ಬಾರಿಗೆ ಮಾಡಿರೋ ಕಲಾಸಾಮ್ರಾಟ್ ಎಸ್ ನಾರಾಯಣ್ ಗಮನ ಸೆಳೆಯುತ್ತಾರೆ. ಇನ್ನು ಮಗಧೀರ ಖ್ಯಾತಿಯ ಖಳನಾಯಕ ದೇವ್ಗಿಲ್ ಈ ಚಿತ್ರದ ಮತ್ತೊಂದು ಹೈಲೈಟ್. ಅಕ್ಷಿತ್ ಜೊತೆ ಜಿದ್ದಿಗೆ ಬಿದ್ದು ಹೊಡೆದಾಡೋ ವಿಲನ್ ಆಗಿ ವಿಲನಿಸಂ ಗತ್ತು ತೋರಿದ್ದಾರೆ . ಉಳಿದಂತೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಓ ಮೈ ಲವ್ ಪ್ಲಸ್ ಪಾಯಿಂಟ್ಸ್ :
ಅಕ್ಷಿತ್- ಕೀರ್ತಿ ನಟನೆ
ಸಾಧು ಕೋಕಿಲಾ ಕಾಮಿಡಿ
ಸ್ಮೈಲ್ ಶ್ರೀನು ನಿರ್ದೇಶನ
ರಿಚ್ ಪ್ರೊಡಕ್ಷನ್ ವ್ಯಾಲ್ಯೂಸ್
ಕಲರ್ಫುಲ್ ಲೊಕೇಷನ್ಸ್
ಓ ಮೈ ಲವ್ ಮೈನಸ್ ಪಾಯಿಂಟ್ಸ್
ಮೊದಲಾರ್ಧ ಕಲರ್ಫುಲ್ ಆಗಿ ಸಾಗಿತಾದ್ರೂ, ಅಸಲಿ ಕಥೆಯನ್ನ ದ್ವಿತಿಯಾರ್ಧದಲ್ಲಿ ನಿರೂಪಿಸಿರೋ ನಿರ್ದೇಶಕ, ಇನ್ನಷ್ಟು ಕ್ರಿಸ್ಪಿಯಾಗಿ ಮಾಡಬಹುದಿತ್ತು ಅನಿಸುತ್ತೆ. ಸೆಕೆಂಡ್ ಹಾಫ್ ಸಿನಿಮಾ ಕೊಂಚ ಲ್ಯಾಗ್ ಅನಿಸುತ್ತೆ. ಆದ್ರೂ ನೋಡುಗರಿಗೆ ಒಂದು ಭಿನ್ನ ಅಲೆಯ ಲವ್ ಸ್ಟೋರಿ ನೋಡಿದ ಫೀಲ್ ಕೊಡಲಿದೆ.
ಓ ಮೈ ಲವ್ಗೆ ಪವರ್ ಟಿವಿ ರೇಟಿಂಗ್: 3/5
ಓ ಮೈ ಲವ್ ಫೈನಲ್ ಸ್ಟೇಟ್ಮೆಂಟ್
ಬಳ್ಳಾರಿ ದರ್ಬಾರ್ ಅನ್ನೋ ಸಿನಿಮಾ ಮಾಡಿದ್ದ ಬಳ್ಳಾರಿ ಮೂಲದ ಸ್ಮೈಲ್ ಶ್ರೀನು ಅನ್ನೋ ನಿರ್ದೇಶಕ, ಒಂದು ದೊಡ್ಡ ಗ್ಯಾಪ್ನ ಬಳಿಕ ಅಕ್ಷರಶಃ ಲವ್ ದರ್ಬಾರ್ ಮಾಡಿದ್ದಾರೆ. ಅಕ್ಷಿತ್ ಅನ್ನೋ ಹೊಸ ನಾಯಕನಟನನ್ನ ಹುಟ್ಟಿಹಾಕಿದ್ದಾರೆ. ಹೊಸ ಪ್ರತಿಭೆಯಿಂದ ಮನೋಜ್ಞ ಅಭಿನಯ ತೆಗಿಸೋದ್ರ ಜೊತೆಗೆ ಪ್ರೇಮ್ ಕಹಾನಿಯನ್ನ ಯೂತ್ಸ್ಗೆ ಇಷ್ಟವಾಗುವಂತೆ ಹಾಗೂ ಫ್ಯಾಮಿಲಿ ಆಡಿಯೆನ್ಸ್ಗೂ ಕನೆಕ್ಟ್ ಆಗೋ ರೀತಿ ಬ್ಲೆಂಡ್ ಮಾಡಿರೋದು ಇಂಟರೆಸ್ಟಿಂಗ್. ಅವ್ರ ನಿರ್ದೇಶನಾ ಕೌಶಲ್ಯಗಳನ್ನು ಮೆಚ್ಚುವಂತಿದ್ದು, ಪ್ರೀತಿ- ಸ್ನೇಹದ ಜೊತೆ ಪ್ರೇಮ್ ಜರ್ನಿಯನ್ನ ಹೇಳುವಂತಿದೆ. ರಾಮಾಂಜಿನಿ ಅವ್ರ ಪ್ರೊಡಕ್ಷನ್ ವ್ಯಾಲ್ಯೂಸ್ನ ಪ್ರತಿ ಫ್ರೇಮ್ನಲ್ಲೂ ಕಾಣಬಹುದಾಗಿದೆ. ಪ್ರೇಮ್ನಂತಹ ಫ್ರೆಂಡ್ ಇದ್ರೆ ಸ್ನೇಹಿತರಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸ ಮೂಡುತ್ತೆ ಅನ್ನೋದಕ್ಕೆ ಇದು ಸಾಕ್ಷಿ ಆಗಲಿದೆ. ಈ ವೀಕೆಂಡ್ ಫ್ಯಾಮಿಲಿ ಸಮೇತ ನೋಡೋಕೆ ಇದಕ್ಕಿಂತ ಬೆಸ್ಟ್ ಸಿನಿಮಾ ಮತ್ತೊಂದಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ