Wednesday, February 5, 2025

ಸೂರ್ಯ 7th ಸೆನ್ಸ್ ನೆನಪಿಸಿದ ‘ಕರ್ಮಣ್ಯೇ ವಾಧಿಕಾರಸ್ತೇ’

ಟೀಸರ್​ ಹಾಗೂ ಟ್ರೈಲರ್​ ಮೂಲಕವೇ ಸಂಚಲನ ಮೂಡಿಸಿದ್ದ ಸಿನಿಮಾ ಕರ್ಮಣ್ಯೆ ವಾಧಿಕಾರಸ್ತೆ. ಟೈಟಲ್​ ಸಖತ್​ ಡಿಫರೆಂಟ್​ ಆಗಿದೆ. ಇನ್ನೂ ಹೊಸಬರ ಪ್ರಯತ್ನಕ್ಕೆ ಸೂಪರ್​​ ಮುದ್ರೆ ಒತ್ತಿದ್ದ ಪ್ರೇಕ್ಷಕರು ಕೂಡ ಥಿಯೇಟರ್​​​ನತ್ತ ಹೆಜ್ಜೆ ಹಾಕಿದ್ರು. ರಾಜ್ಯಾದ್ಯಂತ ರಿಲೀಸ್ ಆಗಿರೋ ಈ ಸಿನಿಮಾ ಚಿತ್ರರಸಿಕರನ್ನು ಕೈ ಬೀಸಿ ಕರಿತೀದೆ. ಇದ್ರ ಜತೆಯಲ್ಲಿ ಈ ಸಿನಿಮಾ ಬ್ಲಾಕ್​ ಬಸ್ಟರ್​ ಸಿನಿಮಾ ನೆನಪು ಮಾಡ್ತಿದೆ, ಯೆಸ್​​​.. ಯಾವುದು ಆ ಸೂಪರ್​​ ಹಿಟ್​ ಸಿನಿಮಾ ಅಂತೀರಾ..?

ಸೂರ್ಯ 7th ಸೆನ್ಸ್ ನೆನಪಿಸಿದ ‘ಕರ್ಮಣ್ಯೇ ವಾಧಿಕಾರಸ್ತೇ’..!

ಭಗವದ್ಗೀತೆಯ ಸಾರ.. ಪಾಪ-ಪುಣ್ಯ ಕರ್ಮಫಲಗಳ ವಿಚಾರ

ಆಕರ್ಷಕ ಟ್ರೈಲರ್​ ಮೂಲಕವೇ ಎಲ್ಲರ ಅಟೆನ್ಷನ್​ ತನ್ನ ಕಡೆಗೆ ತಿರುಗುವಂತೆ ಮಾಡಿದ್ದ ಸಿನಿಮಾ ಕರ್ಮಣ್ಯೆ ವಾಧಿಕಾರಸ್ತೆ. ಟೈಟಲ್​​ ಎಷ್ಟು ಇಂಟ್ರೆಸ್ಟಿಂಗ್​ ಆಗಿದಿಯೋ ಅಷ್ಟೆ ಪ್ರಮಾಣದ ಕೂತೂಹಲವನ್ನು ಟ್ರೈಲರ್​ ಮೂಡಿಸಿತ್ತು. ಭಗವದ್ಗೀತೆಯ ಸಾರವನ್ನು ಒತ್ತಿ ಹೇಳ್ತಾ ಇದ್ರು, ಕೃಷ್ಣನ ಸಂದೇಶವೇನೋ ಇದೆ ಅನ್ನೊ ಕಾತರವನ್ನು ದುಪ್ಪಟ್ಟು ಮಾಡಿತ್ತು. ಇದೀಗ ರಾಜ್ಯಾದ್ಯಂತ ರಿಲೀಸ್​ ಆಗಿರೋ ಕರ್ಮಣ್ಯೆ ವಾಧಿಕಾರಸ್ತೆ ಸಿನಿಮಾಗೆ ಗುಡ್​ ರೆಸ್ಪಾನ್ಸ್​ ಸಿಗ್ತಿದೆ.

ಈ ಸಿನಿಮಾದ ಕೆಲವು ಸೀನ್​ಗಳು ಸೂರ್ಯ ಅಭಿನಯದ 7thಸೆನ್ಸ್​ ಸಿನಿಮಾ ನೆನಪು ಮಾಡ್ತಿವೆ. ಈ ಚಿತ್ರದ ಟ್ರೈಲರ್​ ನೋಡಿದಾಗ್ಲೇ ಬೌದ್ಧ ಬಿಕ್ಕುಗಳನ್ನು ತೋರಿಸಲಾಗಿತ್ತು. ಸೂರ್ಯ ಅವ್ರ 7th ಸಿನಿಮಾ ಕೂಡ ವೈರಸ್​ ವಿರುದ್ಧ ಹೋರಾಡೋ ಅದ್ಭುತ ದೃಶ್ಯಗಳ ಮೂಲಕ ಬ್ಲಾಕ್​​ ಬಸ್ಟರ್​ ಹಿಟ್​ ದಾಖಲಿಸಿತ್ತು. ಇದೀಗ ಕರ್ಮಣ್ಯೆ ವಾಧಿಕಾರಸ್ತೆ ಸಿನಿಮಾ ಕೂಡ 7th ಸಿನಿಮಾ ಮೀರಿಸ್ತಿದೆ ಅನ್ನೋ ಟಾಕ್​ ಓಡಾಡ್ತಿದೆ.

ಶ್ರೀ ಹರಿ ಅನಂದ್​ ನಿರ್ದೇಶನ, ರಮೇಶ್​ ರಾಮಯ್ಯ ನಿರ್ಮಾಣಕ್ಕೆ ಪ್ರೇಕ್ಷಕ ಬಹುಪರಾಕ್​ ಎಂದಿದ್ದಾನೆ. ಎಲ್ಲೆಡೆ ಪಾಸಿಟಿವ್​ ರೆಸ್ಪಾನ್ಸ್​ ಸಿಕ್ಕಿದೆ. ಅವನಿ ಪ್ರೊಡಕ್ಷನ್​ ಬ್ಯಾನರ್​​ನಲ್ಲಿ, ರಿತ್ವಿಕ್​​ ಮುರುಳಿಧರ್​​ ಮ್ಯೂಸಿಕ್​ ಕಂಪೋಸಿಂಗ್​ನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ  ಬಂದಿದೆ. ಉದಯ್​ ಲೀಲಾ ಕ್ಯಾಮೆರಾ ಕೈಚಳಕಕ್ಕೆ ಎಲ್ಲರೂ ಭೇಷ್​ ಎಂದಿದ್ದಾರೆ. ಪ್ರತೀಕ್​​​ ಸುಬ್ರಮಣಿ ನಾಯಕನಾಗಿ, ದಿವ್ಯಾ, ಡೊಲ್ಮಾ ಹೀರೋಯಿನ್ಸ್​ ಆಗಿ ಮಿಂಚಿದ್ದಾರೆ. ಅಮೇರಿಕಾದಲ್ಲೂ ಸದ್ದು ಮಾಡಿರೋ ಕರ್ಮಣ್ಯೆ ವಾಧಿಕಾರಸ್ತೇ ಹೊಸಬರ ಸಿನಿಮಾವಾಗಿದ್ದು, ಹೊಸಬರ ಪ್ರಯತ್ನಕ್ಕೂ ಪ್ರೇಕ್ಷಕ ಸೈ ಎಂದಿದ್ದಾನೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES