ಕಾರವಾರ : ಘಟ್ಟದ ಮೇಲಿನ ಪ್ರದೇಶಗಳಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಹಳಿಯಾಳದ ಬೊಮ್ಮನಹಳ್ಳಿ ಜಲಾಶಯದಿಂದ 3000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಉತ್ತರಕನ್ನಡ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹಳಿಯಾಳದ ಬೊಮ್ಮನಹಳ್ಳಿ ಜಲಾಶಯದಿಂದ 3000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ 3 ಮತ್ತು 5ನೇ ಗೇಟ್‌ನಿಂದ ತಲಾ 1,500 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗಿದೆ.
ಸದ್ಯ ಜಲಾಶಯದಲ್ಲಿ 437.29 ಮೀ ತುಂಬಿರುವ ನೀರು ಜಲಾಶಯದಲ್ಲಿ 436.50 ಮೀ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ನಿಗದಿಪಡಿಸಿದೆ. ಜಲಾಶಯಕ್ಕೆ 9,946 ಕ್ಯೂಸೆಕ್ಸ್ ನೀರು ಒಳಹರಿವು ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 3,000 ಕ್ಯೂಸೆಕ್ಸ್ ನೀರು ಜಲಾಶದಿಂದ ಹೊರಕ್ಕೆ ಬಿಡಲಾಗಿದೆ. ಕರಾವಳಿ ತಾಲೂಕಿನಲ್ಲಿ ಕೊಂಚ ಮಳೆ ಪ್ರಮಾಣ ಇಳಿಮುಖವಾಗಿದ್ದು, ಮುಂದಿನ 24 ಗಂಟೆಯಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ.