ಬೆಂಗಳೂರು : ಜಲಮಂಡಳಿಯಲ್ಲಿ ಬಡ್ತಿಗಾಗಿಯೇ ಬೇಕಾಬಿಟ್ಟಿ ಹುದ್ದೆಗಳ ಸೃಷ್ಟಿ ಮಾಡಿದ್ದು, BWSSB ಯಲ್ಲಿ ಪ್ರಮೋಷನ್ಗಾಗಿ ಹೆಚ್ಚುವರಿ ಹುದ್ದೆ ಕಳ್ಳಾಟ ನಡೆಯುತ್ತಿದೆ.
ಬಡ್ತಿಗಾಗಿಯೇ ಸೃಷ್ಟಿ ಅಗೇ ಬಿಟ್ಟುವು ನಾಲ್ಕು ಚೀಫ್ ಇಂಜಿನಿಯರ್ ಹುದ್ದೆ. ಕಾರ್ಯಭಾರ ಒತ್ತಡ ವಿಲ್ಲದಿದ್ದರೂ ಮಂಡಳಿಯಲ್ಲಿ ಹೆಚ್ಚುವರಿ ಹುದ್ದೆ ಸೃಷ್ಟಿಯಾಗಿದ್ದು, ಹೆಚ್ಚುವರಿ ನಾಲ್ಕು ಚೀಫ್ ಇಂಜಿನಿಯರ್ಗಳ ಹುದ್ದೆಯಲ್ಲಿ ನಡೆದಿದ್ಯಾ ಭಾರಿ ಡೀಲಿಂಗ್.? 10 ಲಕ್ಷ ನೀರಿನ ಸಂಪರ್ಕಗಳಿಗೆ ಬರೋಬ್ಬರಿ 10 ಚೀಫ್ ಎಂಜಿನಿಯರ್ಗಳು ಬೇಕಾ..? ಬಿಳಿಯಾನೆಯಂಥ ಹೆಚ್ಚುವರಿ ಚೀಫ್ ಇಂಜಿನಿಯರ್ಗಳಿಂದ ಜಲಮಂಡಳಿಗೆ ಆರ್ಥಿಕ ಹೊರೆ ಉಂಟಾಗಿದೆ.
ಬಡ್ತಿಗಾಗಿ ಹುದ್ದೆ ಸೃಷ್ಟಿಗೆ ಈಗಾಗಲೇ ಸರ್ಕಾರ ಫುಲ್ ಸ್ಟಾಪ್ಟ್ ಇಟ್ಟಿದೆ. ಆದ್ರೆ ಬೆಂಗಳೂರು ಜಲಮಂಡಳಿಯಲ್ಲಿ ಬಡ್ತಿಗಾಗಿಯೇ ಬೇಕಾಬಿಟ್ಟಿ ಹುದ್ದೆಗಳ ಸೃಷ್ಟಿ ಮಾಡಲಾಗಿದ್ದು, ಅಗತ್ಯ ಇಲ್ಲದಿದ್ರೂ 4 ಹುದ್ದೆ ಸೃಷ್ಟಿ ಮಾಡಿದ್ದೇಕೆ..? ಮಂಡಳಿಯಲ್ಲಿ ಮಹತ್ವದ ಯೋಜನೆಗಳು ನಡೆಯದೇ ಇದ್ರೂ ಹೆಚ್ಚುವರಿ ಹುದ್ದೆ ಏಕೆ..? ಹೆಚ್ಚುವರಿ ಹುದ್ದೆಗಳ ಸೃಷ್ಟಿಯಿಂದ ಜಲಮಂಡಳಿಗೆ ಪ್ರತಿ ತಿಂಗಳು 48 ಕೋಟಿ ಹೆಚ್ಚುವರಿ ಹೊರೆಯಾಗಿದ್ದು, ಈಗಾಗಲೇ ಬಹುತೇಕ ಎಂಜಿನಿಯರ್ ಗಳಿಗೆ ಕೆಲಸದ ಇಲ್ಲದಿದ್ರೂ ಪುಕ್ಕಟ್ಟೆ ವೇತನ ಪಡೆಯುತ್ತಿದ್ದಾರೆ. ಇಷ್ಟು ದಿನ ಜಲಮಂಡಳಿಯಲ್ಲಿ 6 ಚೀಫ್ ಎಂಜಿನಿಯರ್ ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದರು, ಆದರೆ ಇನ್ಮುಂದೆ 10 ಚೀಫ್ ಎಂಜಿನಿಯರ್ಗಳು ಕಾರ್ಯನಿರ್ವಹಣೆ ಮಾಡಲಾಗಿದೆ.