Friday, November 22, 2024

ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ಸಿದ್ಧತೆ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಣ ಹಮ್ಮಿಕೊಂಡಿರುವ ಸಿದ್ದರಾಮೋತ್ಸವಕ್ಕೆ ಅದ್ಧೂರಿ ಸಿದ್ಧತೆಗಳು ನಡೆದಿವೆ. ಕಾರ್ಯಕ್ರಮವನ್ನ ಸ್ಮರಣೀಯವನ್ನಾಗಿಸಬೇಕು..ಜನರ ಮನದಲ್ಲಿ ಉಳಿಯಬೇಕೆಂಬ ನಿಟ್ಟಿನಲ್ಲಿ ಅಮೃತ ಮಹೋತ್ಸವ ಸಮಿತಿ ಇನ್ನಿಲ್ಲದ ತಯಾರಿ ನಡೆಸಿದೆ. ಇಂದು ಅರಮನೆ ಮೈದಾನದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಯ್ತು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೇ ವರ್ಷವನ್ನು ಸ್ಮರಣೀಯವನ್ನಾಗಿಸೋಕೆ ಅವರ ಆಪ್ತ ಬಳಗ ಕಾರ್ಯಕ್ರಮ ಹಮ್ಮಿಕೊಂಡಿದೆ.. ಬರುವ ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನ ನಡೆಸೋಕೆ ನಿರ್ಧರಿಸಿದೆ.. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ..ಕಾರ್ಯಕ್ರಮ ಯಶಸ್ವಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪೂರ್ವ ಭಾವಿ ಸಭೆಯನ್ನೂ ನಡೆಸಲಾಯ್ತು..ಆರ್‌.ವಿ.ದೇಶಪಾಂಡೆ, ರಾಜಣ್ಣ, ಶಾಮನೂರು, ಹೆಚ್.ಸಿ.ಮಹದೇವಪ್ಪ ನೇತೃತ್ವದ ಕಮಿಟಿಗಳ ಸದಸ್ಯರು ಭಾಗಿಯಾಗಿದ್ರು..ಕಮಿಟಿಗಳಿಗೆ ಸಭೆಯಲ್ಲಿ ಕೆಲವು ಸಲಹೆ ಹಾಗೂ ಸೂಚನೆಗಳನ್ನ ನೀಡಲಾಯ್ತು.

ಪೂರ್ವಭಾವಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗೈರು:

ಇನ್ನು ಅರಮನೆ ಮೈದಾನದಲ್ಲಿ ನಡೆದ ಪೂರ್ವ ಸಿದ್ಧತಾ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಗೈರಾಗಿದ್ರು..ಆದ್ರೆ ಸಂಸದ ಡಿ.ಕೆ.ಸುರೇಶ್, ಸಿದ್ದು ವಿರುದ್ಧ ಅಂತರ ಕಾಯ್ದುಕೊಂಡಿರುವ ಮಾಜಿ ಡಿಸಿಎಂ ಪರಮೇಶ್ವರ್ ಹಾಜರಾಗಿದ್ರು.. ಇದು ಸಿದ್ದು ಬೆಂಬಲಿಗರು ನಡೆಸ್ತಿರೋ ಕಾರ್ಯಕ್ರಮವಾದ್ರೂ, ಕಾಂಗ್ರೆಸ್‌ನ ಎಲ್ಲಾ ನಾಯಕರು ಪಾಲ್ಗೊಂಡಿದ್ರು.. ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಿದ್ದು ಬೆಂಬಲಿಗರನ್ನು ಕುರಿತು ಪರೋಕ್ಷವಾಗಿಯೇ ಛೇಡಿಸಿದ್ರು. ವ್ಯಕ್ತಿ ಪೂಜೆ ಸಿದ್ದರಾಮಯ್ಯನವರಿಗೂ ಇಷ್ಟವಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ರೆ, ನೊಂದ ಸಮುದಾಯಗಳಿಗೂ ಅವಕಾಶ ಕೊಡ್ಬೇಕು ಅಂತ ಪರೋಕ್ಷವಾಗಿ ಪರಮೇಶ್ವರ್ ಕುಟುಕಿದ್ರು.

ನಂತ್ರ ಸಿದ್ದು ಪರಮಾಪ್ತ ಬಸವರಾಜ ರಾಯರೆಡ್ಡಿ, ನಾವು ವ್ಯಕ್ತಿ ಪೂಜೆ ಮಾಡ್ತಿಲ್ಲ.. ಸಿದ್ದರಾಮೋತ್ಸವ ಅಂತ ಹೆಸರಿಟ್ಟಿಲ್ಲ.. ನಾವು ಮಾಡ್ತಿರೋದು ಅಮೃತ ಮಹೋತ್ಸವ ಅಂತ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಪಂಚ್ ಕೊಟ್ರು..

ಒಟ್ಟಿನಲ್ಲಿ ಸರ್ಕಾರದ ಧೋರಣೆಗಳನ್ನು ಒರೆಗೆ ಹಚ್ಚಬೇಕಾದ ವಿರೋಧ ಪಕ್ಷದ ನಾಯಕರು ತಮ್ಮಲ್ಲೇ ಪರಸ್ಪರ ಟೀಕೆ ಟಿಪ್ಪಣಿಯಲ್ಲಿ ತೊಡಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

ರೂಪೇಶ್ ಜೊತೆ ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು..

RELATED ARTICLES

Related Articles

TRENDING ARTICLES