Thursday, September 19, 2024

ಪುಷ್ಪಗಳಲ್ಲಿ ಅರಳಲಿರುವ ರಾಜ್ ಕುಮಾರ್ ಹಾಗೂ ಪುನೀತ್

ಬೆಂಗಳೂರು : ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಕಳೆಗುಂದಿದ್ದ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಮತ್ತೆ ಕಳೆ ಬರುತ್ತಿದೆ. ಇದೇ ಆಗಸ್ಟ್ 5 ರಿಂದ 15 ರವರೆಗೆ ಸ್ವಾತಂತ್ಯೋತ್ಸವದ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಭಾರಿ ಫಲಪುಷ್ಪ ಪ್ರದರ್ಶನ ದಲ್ಲಿ ವರನಟ ಡಾ ರಾಜ್ ಕುಮಾರ್ ಮತ್ತು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರಾರಾಜಿಸಲಿದ್ದಾರೆ.

ಹೂವುಗಳ ಅಲಂಕಾರದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಗಳನ್ನು ಮಾಡಿ ಪ್ರದರ್ಶನಕ್ಕೆ ಇಡುತ್ತಿರುವುದು ಈ ಭಾರಿಯ ವಿಶೇಷವಾಗಿದೆ . ಅಷ್ಟೇ ಅಲ್ಲ ರಾಜಕುಮಾರ್ ಅವರ ಬೇಡರ ಕಣ್ಣಪ್ಪ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಇನ್ನು ಕೆಲವು ಸಿನಿಮಾದಲ್ಲಿ ರಾಜಕುಮಾರ್ ಅವರು ಕೊಟ್ಟ ಸಂದೇಶವನ್ನು ಫಲ ಪುಷ್ಪ ಪ್ರದರ್ಶನದಲ್ಲಿ ಬಿಂಬಿಸಲಾಗುತ್ತೆ.

ಇನ್ನು ಸಸ್ಯಕಾಶಿಯಲ್ಲಿ ಗಾಜನೂರಿನಲ್ಲಿ ಇರುವ ಡಾ ರಾಜ್ ಕುಮಾರ್ ಹುಟ್ಟಿದ ಮನೆ ಯ ಮಾದರಿಯನ್ನು ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಗಜನೂರು ಮನೆಯ ಮನೆಯ ಅಂಗಳದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕುಳಿತಿರುವ ಮಾದರಿ ಈ ಬಾರಿಯ ಫಲಪುಷ್ಪ ಪ್ರದರ್ಶನದ ಹೈಲೈಟ್ ಆಗಲಿದೆ ಅಂತ ಲಾಲ್ಬಾಗ್ ಡೈರೆಕ್ಟರ್ ಜಗದೀಶ್ ತಿಳಿಸಿದರು.

ಇನ್ನು ಈ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಸುಮಾರು 35 ಕ್ಕೂ ಹೆಚ್ಚು ವಿದೇಶಿ ತಳಿಯ ಹೂಗಳು , ದೇಶೀಯ 65 ಕ್ಕೂ ಹೆಚ್ಚು ಹೂ ಗಳುಗಳನ್ನು ಪ್ರದರ್ಶಿಸಿ ಅಲಂಕರಿಸಲಾಗುತ್ತೆ . ಇದರ ಜೊತೆಗೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ , ಹಾಗೂ ವಯಸ್ಕರಿಗೆ ವಾರದ ದಿನದಲ್ಲಿ 70 ರೂಪಾಯಿ ಹಾಗೂ ವಾರದ ಅಂತ್ಯದಲ್ಲಿ 100 ರೂಪಾಯಿ ನಿಗದಿ ಮಾಡಲು ಚಿಂತನೆ ನಡೆಸಿದ್ದಾರೆ.

ಒಟ್ಟಾರೆ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಈ ಬಾರಿ ಪ್ಲವರ್ ಶೋ ನಡೆಸಿ ಪುನೀತ್ ಅವರಿಗೆ ಹೂ ಗಳ ಮೂಲಕ ಪ್ರಾಣ ತುಂಬಲು ತೋಟಗಾರಿಕೆ ಇಲಾಖೆ ಮುಂದಾಗಿದೆ . ಇನ್ನು ಇತ್ತ ಜನರು ಕೂಡ ಈ ಬಾರಿಯ ಪ್ಲವರ್ ಶೋ ನಲ್ಲಿ ಪುನೀತ್ ಅವರನ್ನು ಪ್ಲವರ್ ಗಳಲ್ಲಿ ಕಣ್ಣು ತುಂಬಿಕೊಳ್ಳಲ್ಲು ಕಾದು ಕುಳಿತ್ತಿದ್ದಾರೆ.

RELATED ARTICLES

Related Articles

TRENDING ARTICLES