ಬೆಂಗಳೂರು : ಸಾರಿಗೆ ಮುಷ್ಕರದ ನಂತರ ಬಿಎಂಟಿಸಿಯಲ್ಲಿ ದಿನದಿಂದ ದಿನಕ್ಕೆ ಅಧಿಕಾರಿಗಳ ಕಿರುಕುಳ ಹೆಚ್ಚಳ ಆರೋಪದ ಹಿನ್ನಲೆಯಲ್ಲಿ ಏಳು ತಿಂಗಳಿಗೆ ಏಳು ನೂರು ನೌಕರರು ಡಿಸ್ಮಿಸ್ ಅಂಡ್ ಸಸ್ಪೆಂಡ್ ಮಾಡಲಾಗಿದೆ.
ಸಾರಿಗೆ ನೌಕರರು ಮುಷ್ಕರ ಮಾಡಿದ್ದೆ ತಪ್ಪಾ ಆಯ್ತಾ..? ಬೇಡಿಕೆಗಳ ಈಡೇರಿಕೆಗೆ ಪ್ರಜಾಪ್ರಭುತ್ವದಲ್ಲಿ ಮುಷ್ಕರ ಮಾಡೋದೆ ತಪ್ಪಾ..? ಮುಷ್ಕರ ಮಾಡಿದಕ್ಕೆ ಇದೆಂಥಾ ಶಿಕ್ಷೆ..? ಸಾರಿಗೆ ಮುಷ್ಕರದ ನಂತರ ಬಿಎಂಟಿಸಿಯಲ್ಲಿ ದಿನದಿಂದ ದಿನಕ್ಕೆ ಅಧಿಕಾರಿಗಳ ಕಿರುಕುಳ ಹೆಚ್ಚಳ ಆರೋಪದ ಹಿನ್ನಲೆಯಲ್ಲಿ ನೌಕರರು ಕೂತ್ರು ತಪ್ಪು ನಿಂತ್ರು ತಪ್ಪು ಅನ್ನೋ ಹಾಗಾಗಿದೆ ಪರಿಸ್ಥಿತಿ ಉಂಟಾಗಿದೆ.
ಇನ್ನು, ಟಿಕೆಟ್ ಕೊಡುವ ವೇಳೆ ಒಂದು ರುಪಾಯಿ ಹೆಚ್ಚಾಗಿದಕ್ಕೆ, ಆಫೀಸರ್ ಬಂದಾಗ ಪ್ರಯಾಣಿಕರಿಗೆ ಟಿಕೆಟ್ ಕೊಟ್ಟ ಎಂಬ ಕಾರಣಕ್ಕೂ ಶಿಕ್ಷೆ ವಿಧಿಸಿದ್ದಾರೆ. ಆರೋಗ್ಯದ ಕಾರಣಕ್ಕಾಗಿ ರಜೆ ಹಾಕಿದ್ದಕ್ಕೆ, ಕಂಡಕ್ಟರ್ ಡ್ರೈವರ್ ಗಳಿಗೆ ಡಿಸ್ಮಿಸ್ ಮತ್ತು ಸಸ್ಪೆಂಡ್ ಮಾಡಲಾಗಿದ್ದು, ತಿಂಗಳಿಗೆ ನೂರು ಜನರಂತೆ ಏಳು ತಿಂಗಳಿಗೆ ಏಳು ನೂರು ನೌಕರರ ಮೇಲೆ ಶಿಕ್ಷೆ ವಿಧಿಸಿದ್ದಾರೆ. ಜನವರಿಯಿಂದ ಜುಲೈ ವರೆಗೆ ಬರೋಬ್ಬರಿ ಏಳು ನೂರು ನೌಕರರನ್ನು ಡಿಸ್ಮಿಸ್ ಮತ್ತು ಸಸ್ಪೆಂಡ್ ಮಾಡಿದ ಬಿಎಂಟಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ.