Friday, November 22, 2024

ಬಯಲು ಸೀಮೆಯಲ್ಲೂ ವಿಶಿಷ್ಟ ಭೂತಾರಾಧನೆ ಸಂಭ್ರಮ

ಬೆಂಗಳೂರು ಗ್ರಾಮಾಂತರ: ದೇವತೆಗಳಂತೆಯೇ ಭೂತಗಳನ್ನೂ ಪೂಜಿಸುವ ಪದ್ದತಿ ನಮ್ಮ ಸಂಸ್ಕೃತಿಯಲ್ಲಿ ಬೆರೆತುಹೋಗಿದೆ. ಭೂತಾರಾಧನೆ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಾದರೂ ಬಯಲು ಸೀಮೆಗಳಲ್ಲಿಯೂ ತನ್ನತನ ಹೊಂದಿದೆ.

ಬೆಂಗಳೂರು ಪಕ್ಕದ ಗ್ರಾಮವೊಂದರಲ್ಲಿ ಭೂತಾರಾಧನೆ ಶತಮಾನಗಳಿಂದ ಆಚರಿಸಲ್ಪಡುತ್ತಿದ್ದು ತನ್ನದೇ ವೈಶಿಷ್ಟ್ಯತೆಗಳಿಂದ ಭಕ್ತರಿಗೆ ಮನರಂಜನೆಯನ್ನ ನೀಡುತ್ತಿದೆ. ಅಂದಹಾಗೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಗ್ರಾಮದಲ್ಲಿ ಆಚರಿಸುವ ಭೂತ ನೆರಿಗೆ ಹಬ್ಬದ ವೈಶಿಷ್ಟ್ಯತೆ. ಇನ್ನೂ ಶ್ರೀಮನ್ನಾರಾಯಣನ ದ್ವಾರಪಾಲಕಾರದ ಜಯವಿಜಯರು ಶಾಪಗ್ರಸ್ತರಾಗಿ ಬಳಿಕ ಹಿರಣ್ಯ-ಕಶ್ಯಪರಾಗಿ ಜನ್ಮತಾಳಿದ ಪುರಾಣದ ಕಥೆ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ತೂಬುಗೆರೆ ಗ್ರಾಮಸ್ಥರು ಇದೇ ಹಿರಣ್ಯ-ಕಶ್ಯಪರಿಗೆ ಇಟ್ಟಿರುವ ಹೆಸರು ಕೆಂಚಣ್ಣ ಹಾಗೂ ಕರಿಯಣ್ಣ ಭೂತಗಳು.

ಈ ಭೂತಗಳಿಗಾಗಿ ಗ್ರಾಮಸ್ಥರು ಪ್ರತಿ ವರ್ಷ ಹಬ್ಬ ಆಚರಿಸುತ್ತಾರೆ. ಭಕ್ತರ ನಂಬಿಕೆಯಂತೆ ಗ್ರಾಮದ ವೆಂಕಟನಾರಾಯಣ ದೇವಾಲಯದ ಅರ್ಚಕ ಭೂತ ವೇಷಧಾರಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅವರ ಮೇಲೆ ಭೂತಗಳನ್ನ ಆವಾಹಿಸುತ್ತಾನೆ. ಈ ವೇಳೆ ಭೂತಾವಾಹಿಸಿಕೊಂಡ ವ್ಯಕ್ತಿಗಳು ಇಡೀ ಗ್ರಾಮದ ತುಂಬೆಲ್ಲಾ ಸಂಚರಿಸುತ್ತಾರೆ. ಹೀಗೆ ಭೂತಗಳು ಸಂಚರಿಸುವುದರಿಂದ ಗ್ರಾಮದಲ್ಲಿರುವ ಇತರೆ ದುಷ್ಟಶಕ್ತಿಗಳು ದೂರವಾಗುತ್ತವಂತೆ. ಅಲ್ಲದೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯ ನಂತರದ ದ್ವಾದಶಿಯಂದು ಭೂತಾರಾಧನೆ ಹಬ್ಬ ಆಚರಿಸಲಾಗುತ್ತದೆ.

RELATED ARTICLES

Related Articles

TRENDING ARTICLES