Friday, November 8, 2024

ಸಿದ್ದರಾಮೋತ್ಸವ ಅಂತ ಕರೆದಿದ್ದು RSS ನಾಯಕರು : ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಸಿದ್ದರಾಮೋತ್ಸವಕ್ಕೆ ಸಿದ್ದು ಆಪ್ತರ ಸಿದ್ಧತೆ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಎಲ್ಲ ಕೆಲಸ ಕಾರ್ಯಗಳು ಭರದಿಂದ ಸಾಗ್ತಿದೆ. ಆದ್ರೆ, ಇದು ಕಾಂಗ್ರೆಸ್​ನ ಅಧಿಕೃತ ಕಾರ್ಯಕ್ರಮನಾ..? ಅಥವಾ ಸಿದ್ದರಾಮಯ್ಯ ಆಪ್ತರು ಮಾತ್ರ ಮಾಡುತ್ತಿರುವ ಸಮಾವೇಶನಾ.? ಎಂಬ ಗೊಂದಲ ಶುರುವಾಗಿದೆ.

ಸದ್ಯ ಇಂತಹದೊಂದು ಗೊಂದಲ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ. ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟು ಹಬ್ಬವನ್ನು ಆಪ್ತರು, ಅಭಿಮಾನಿಗಳು ಅದ್ದೂರಿಯಾಗಿ ಮಾಡಲು ಪ್ಲ್ಯಾನ್​ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೇ ಈ ಕಾರ್ಯಕ್ರಮ ಆಯೋಜನೆ ಮಾಡಿದ್ರೂ, ಇದು ಪಕ್ಷದ ಕಾರ್ಯಕ್ರಮ ಅಲ್ಲ ಅಂತ ಘಂಟಾಘೋಷವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರು. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯರ ಹುಟ್ಟುಹಬ್ಬವನ್ನು ಪಕ್ಷದ ವೇದಿಕೆಯಲ್ಲಿ ಮಾಡ್ತೇವೆ. ರಾಹುಲ್ ಗಾಂಧಿ ಕೂಡ ಬರ್ತಾರೆ ಅಂತ ಅನೌನ್ಸ್ ಮಾಡಿದ್ರು. ಹೀಗಾಗಿ ಸಿದ್ದರಾಮೋತ್ಸವ ಕಾರ್ಯಕ್ರಮ ಸಮಿತಿ ಆಶಯದಂತೆ ಆಗುತ್ತಾ.? ಇಲ್ಲ, ಕಾಂಗ್ರೆಸ್ ಪಕ್ಷದ ಸೂಚನೆಯಂತೆ ನಡೆಯುತ್ತೆ ಅನ್ನೋ ಗೊಂದಲ ಶುರುವಾಗಿದೆ. ಇದೆ ಗೊಂದಲ ಕಾಂಗ್ರೆಸ್ ‌ನಾಯಕರಿಗೂ ಇದೆ. ಆದ್ರೆ, ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಸಿದ್ದರಾಮೋತ್ಸವ ಸಮಿತಿ ಕಾರ್ಯಕ್ರಮ ನಡೆಸುತ್ತೆ ಅಂತ ಸ್ಪಷ್ಟನೆ ನೀಡುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕ್ರಮವಾದ್ರೂ ಡಿಕೆಶಿ ಪಾತ್ರ ಇಲ್ಲ..!

ಸಮಿತಿ ಮಾಡುವ ಕಾರ್ಯಕ್ರಮದ ಕ್ರೆಡಿಟ್ ಪಡೆಯುತ್ತ ಕೆಪಿಸಿಸಿ..?

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಂದ್ರೆ ಕೆಪಿಸಿಸಿ ಅಧ್ಯಕ್ಷರ ಅಡಿಯಲ್ಲಿ ಕಾರ್ಯಕ್ರಮ ಆಯೋಜನೆ ಆಗಬೇಕು.‌. ಆದ್ರೆ, ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ‌ಮಾಡುತ್ತಿರುವ ಅದ್ದೂರಿ ಸಮಾವೇಶದ ಕ್ರೆಡಿಟ್ ಪಡೆಯಲು ‌ಪ್ಲ್ಯಾನ್ ಮಾಡಿದ್ಯಾ ಎಂಬ ಅನುಮಾನ ಶುರುವಾಗಿದೆ.. ಪಕ್ಷಾತೀತ ಕಾರ್ಯಕ್ರಮ ‌ಮಾಡಿದ್ರೆ, ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ.. ಹಾಗಾಗಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಮಾಡುವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಕಾರ್ಯಕ್ರಮ ಅಂತ ಘೋಷಣೆ ‌ಮಾಡಲಾಗಿದೆ.. ಇದರಿಂದಾಗಿ ಕಾಂಗ್ರೆಸ್​ಗೆ ಆಗುತ್ತಿದ್ದ ಮುಜುಗರ ಮತ್ತು ಸಮಾವೇಶದಿಂದ ಬರುವ ಕ್ರೆಡಿಟ್​ ಪಡೆಯಲು ಮಾತ್ರ ಅಧಿಕೃತಗೊಳಿಸಲಾಗಿದ್ಯಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇನ್ನು, ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ಕೊಟ್ಟಿರೋ ಸಿದ್ದರಾಮಯ್ಯ, ಸಿದ್ದರಾಮೋತ್ಸವ ಅಂತ ಕರೆದಿದ್ದು RSS ನಾಯಕರು.. ನಾನು ಯಾವತ್ತು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಮುಂದೆಯೂ ಹುಟ್ಟು ಹಬ್ಬ ಮಾಡಿಕೊಳ್ಳಲ್ಲ ಎಂದ್ರು.

ಒಟ್ಟಿನಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.. ಇತ್ತ ಸಮಾವೇಶ ಬೆಂಬಲಿಸಲು ಆಗದೆ ಸಮಾವೇಶದಿಂದ ದೂರ ಸರಿಯಲೂ ಆಗದ ತ್ರಿಶಂಕು ಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಲುಕಿಕೊಂಡಿದ್ದಾರೆ.. ಹಾಗಾಗಿ ಕಾಂಗ್ರೆಸ್ ಅಧಿಕೃತ ಕಾರ್ಯಕ್ರಮ ಅಂತ ಡಿಕೆಶಿ ಹೇಳ್ತಿದ್ರೂ, ಸಿದ್ದು ಆಪ್ತರು ಮಾತ್ರ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ.

ಬಸವರಾಜ್ ಚರಂತಿಮಠ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES