Friday, November 8, 2024

AIADMK ನಾಯಕತ್ವದ ಗಲಾಟೆ: ಪ್ರಾಥಮಿಕ ಸದಸ್ಯತ್ವದಿಂದ ಓ.ಪನ್ನೀರ್‌ಸೆಲ್ವಂ ಉಚ್ಛಾಟನೆ

ತಮಿಳುನಾಡು: ರಾಜಕೀಯ ದೇಶದ ಗಮನ ಸೆಳೆಯುತ್ತಿದೆ. ಇಷ್ಟು ದಿನ ಜಯಲಲಿತಾ ಹೆಸ್ರೇಳಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡ್ತಿದ್ದ ನಾಯಕರು ಬೀದಿಯಲ್ಲಿ ಫೈಟ್‌ ಮಾಡ್ತಿದ್ದಾರೆ. ಹೌದು, ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಓ. ಪನ್ನೀರಸೆಲ್ವಂ ಅವರ ಬೆಂಬಲಿಗರು ಪಕ್ಷದ ಕಚೇರಿಯ ಒಳಗೆ ಮತ್ತು ಹೊರಗೆ ಹಿಂಸಾಚಾರ ನಡೆಸಿದ್ದಾರೆ.

ಜಯಲಲಿತಾ ಸಾವಿನ ಬಳಿಕ ಒಂದಿಲ್ಲೊಂದು ಕಾರಣಕ್ಕೆ ಪಕ್ಷದಲ್ಲಿ ಆಂತರಿಕ ಕಿತ್ತಾಟಗಳು ನಡೆಯುತ್ತಲೇ ಇವೆ. ಆದ್ರೆ, ಈ ಬಾರಿಯ ವಿಷ್ಯ ಹಂಗಿಲ್ಲ. ತಮಿಳುನಾಡು ರಾಜಕೀಯದ ದಿಕ್ಕು ಬದಲಿಸುವ ಮಹತ್ತರ ಬೆಳವಣಿಗೆ ದಿಕ್ಸೂಚಿ ಎನ್ನುವಂತಹ ಘಟನೆಗಳು ನಡೆಯುತ್ತಿವೆ.

ಎಐಎಡಿಎಂಕೆ ಪಕ್ಷದ ಎರಡು ಬಣಗಳನ್ನು ನಡುವಿನ ಬೀದಿ ಕಾಳಗ. ಜನರಲ್ ಕೌನ್ಸಿಲ್ ಸಭೆಯ ನಂತರ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬೆಂಬಲಿಗರ ನಡುವೆ ಹೊಡೆದಾಟ, ಮಾರಾಮಾರಿ ನಡೆದಿದೆ.

ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಓ ಪನ್ನೀರಸೆಲ್ವಂ ಅವರನ್ನು ವಜಾಗೊಳಿಸಲಾಗಿದ್ದು, ಖಜಾಂಚಿ ಸ್ಥಾನದಿಂದ ಹೊರಹಾಕಲಾಗಿದೆ. ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಳನಿಸ್ವಾಮಿ ಬಣವು ಪನ್ನೀರಸೆಲ್ವಂ ಬಣವನ್ನು ಪಕ್ಷದಿಂದ ಸಂಪೂರ್ಣ ಹೊರಹಾಕಿದೆ. ಜನರಲ್ ಕೌನ್ಸಿಲ್ ಸಭೆಯಲ್ಲಿ ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕ್ರಮ ಕೈಗೊಳ್ಳುವಂತೆ ಜನರಲ್ ಕೌನ್ಸಿಲ್ ಸದಸ್ಯರು ಒತ್ತಾಯಿಸಿದ್ದರು. ಪಕ್ಷವನ್ನು ಏಕೈಕ ಸರ್ವೋಚ್ಚ ನಾಯಕನಾಗಿ ಮುನ್ನಡೆಸಲು ಜನರಲ್ ಕೌನ್ಸಿಲ್ ಪಳನಿಸ್ವಾಮಿ ಅವರಿಗೆ ಅಧಿಕಾರ ನೀಡಿತು. ಜೊತೆಗೆ ಪ್ರತಿಸ್ಪರ್ಧಿ ನಾಯಕ ಓ ಪನ್ನೀರಸೆಲ್ವಂ ಅಥವಾ ಒಪಿಎಸ್ ಬಣವನ್ನು “ಪಕ್ಷ ವಿರೋಧಿ” ಚಟುವಟಿಕೆಗಳಿಗಾಗಿ ಹೊರಹಾಕಲಾಗಿದೆ.

ಪಳನಿಸ್ವಾಮಿ – ಪನ್ನೀರ್‌ಸೆಲ್ವಂ ಕಚ್ಚಾಟ ಅಂತಿಮ ಹಂತಕ್ಕೆ..? :

ಪಕ್ಷದ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಈ ಜನರನ್ ಕೌನ್ಸಿಲ್ ಸಭೆಗಿತ್ತು. ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷದ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಜಿಸಿ ಸಭೆಯನ್ನು ನಡೆಸಲು ಇಪಿಎಸ್ ಬಣಕ್ಕೆ ಅಥವಾ ಪಳನಿಸ್ವಾಮಿ ಅವರ ಬೆಂಬಲಿಗರ ಗುಂಪಿಗೆ ಅನುಮತಿ ನೀಡಿದೆ. AIADMK ಪಕ್ಷದ ಭವಿಷ್ಯದ ನಾಯಕತ್ವ ರಚನೆಯನ್ನು ನಿರ್ಧರಿಸಲು ಎಐಎಡಿಎಂಕೆಯ ನಿರ್ಣಾಯಕ ಸಾಮಾನ್ಯ ಮಂಡಳಿ ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಈ ನಂತರ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬಣದ ನಡುವೆ ಹಿಗ್ಗಾಮುಗ್ಗಾ ಕಚ್ಚಾಟ ಹೆಚ್ಚಾಗಿದೆ.

ತಮಿಳುನಾಡು ರಾಜಕೀಯದಲ್ಲಿ ಭಾರೀ ಮಹತ್ವದ ಬದಲಾವಣೆ :

ಇಪಿಎಸ್ ಎಂದೂ ಕರೆಯಲ್ಪಡುವ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಬಣವು ಕರೆದಿರುವ ಸಭೆಯನ್ನು ಸ್ಥಗಿತಗೊಳಿಸುವಂತೆ ಎಐಎಡಿಎಂಕೆಯ ಉನ್ನತ ನಾಯಕ ಓ ಪನ್ನೀರಸೆಲ್ವಂ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ ಅವರ ಮನವಿಯನ್ನು ತಳ್ಳಿಹಾಕಿದೆ. ಈ ಮೂಲಕ ತಮಿಳುನಾಡು ರಾಜಕೀಯದ ಎಐಎಡಿಎಂಕೆ ಪಕ್ಷದ ನಾಯಕತ್ವದಲ್ಲಿ ನಿರ್ಣಾಯಕ ಬದಲಾವಣೆಗಳು ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಸಭೆಯಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸಂಘಟನೆಯ ಏಕೈಕ ನಾಯಕರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಪಳನಿಸ್ವಾಮಿ ಬೆಂಬಲಿಗರಿಗೆ ಈ ಸಭೆಯು ಮಹತ್ವ ಪಡೆದಿದೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES

Related Articles

TRENDING ARTICLES