Friday, November 22, 2024

ಮೋದಿ ರೈತರ ಬಗ್ಗೆ ಎಲ್ಲಾದ್ರೂ ಮಾತನಾಡ್ತಾರ? : ಸಿದ್ದರಾಮಯ್ಯ ಕಿಡಿ

ಬೆಂಗಳೂರು : ನಮ್ಮ ದೇಶದಲ್ಲಿ ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿಂದು ನಡೆದ ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 50% ಯುವಜನರಿದ್ದಾರೆ. ಜಗತ್ತಿನ ಯಾವ ದೇಶದಲ್ಲೂ ಇಷ್ಟು ಯುವಶಕ್ತಿ ಇಲ್ಲ. ಇಂತಹ ಯುವಶಕ್ತಿಯನ್ನ ನಾವು ಬಳಸಿಕೊಳ್ಳಬೇಕು ಆಗ ಮಾತ್ರ ದೇಶವನ್ನ ಕಟ್ಟೋಕೆ‌ ಸಾಧ್ಯವಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಮೋದಿ ಸಹ ಸರಿಯಾಗಿ ಯುವಕರಿಂದ ಕೆಲಸವನ್ನ ತೆಗೆಸುತ್ತಿಲ್ಲ.ಯುವಕರಿಗೆ ಉದ್ಯೋಗಗಳನ್ನ ಕೊಡುತ್ತಿಲ್ಲ. ಯುವಕರು ಮೋದಿ‌ ಸರ್ಕಾರವನ್ನ ಖಂಡಿಸಬೇಕು ಎಂದರು.

ಅಷ್ಟೆಅಲ್ಲದೇ ಬಿಜೆಪಿಯ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣ್ಯಂ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಆರ್ಥಿಕತೆಯಲ್ಲಿ ಮನಮೋಹನ್ ಸಿಂಗ್ ಕಾಲದಲ್ಲಿ ಹಿಂದೆ 103ನೇ ಸ್ಥಾನಕ್ಕೆ ಬಂದಿದ್ದೇವು. ಆದರೆ, ಇವತ್ತು 144ನೇ ಸ್ಥಾನಕ್ಕೆ ಹೋಗಿದ್ದೇವೆ. ಎಂಎಸ್ ಎಂಇ ಸೃಷ್ಟಿಸಿದ್ದ ಉದ್ಯೋಗ 10 ಕೋಟಿ. ಈಗ ಇವುಗಳ ಉದ್ಯೋಗ 2.3 ಕೋಟಿ ಮಾತ್ರ. ದೇಶ ಉದ್ಯೋಗಾವಕಾಶದಲ್ಲೂ ಕುಸಿತವಾಗಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಎಂದು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾಡಿದರು.

ಇನ್ನು ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ತಂದಿದೆ. 17 ವರ್ಷಕ್ಕೆ ಕೆಲಸಕ್ಕೆ ಸೇರಬೇಕು. ನಾಲ್ಕು ವರ್ಷದ ನಂತರ ವಾಪಸ್ ಬರಬೇಕು. ಆ ನಂತರ ಅವರ ಜೀವನ ಹೇಗೆ ನಡೆಸಬೇಕು. ಮತ್ತೆ ಅವರನ್ನ ನಿರುದ್ಯೋಗಿಗಳನ್ನ ಮಾಡೋದು. ಮೋದಿ ರೈತರ ಬಗ್ಗೆ ಎಲ್ಲಾದ್ರೂ ಮಾತನಾಡ್ತಾರ? ಯುವಕ ಭವಿಷ್ಯದ ಬಗ್ಗೆ ಮಾತನಾಡ್ತಾರಾ? ಯುವಕರಿಗೆ ಉದ್ಯೋಗ ಕೊಡಿ ಅಂದ್ರೆ ಇಲ್ಲ. ಹಿಂದೆ ಯುವಕರು ಮೋದಿ ಮೋದಿ ಅಂತಿದ್ರು, ಆದರೆ ಈಗ ಯುವಕರಿಗೆ ಎಂಥ ಕೆಟ್ಟ ಪರಿಸ್ಥಿತಿ ತಂದಿಟ್ಟಿದ್ದಾರೆ ನೋಡಿ.

ಚೀನಾದಲ್ಲಿ ತಲಾ ಆದಾಯ 12.500 ಸಾವಿರ ಡಾಲರ್. ನಮ್ಮ ದೇಶದಲ್ಲಿ 1850 ಡಾಲರ್ ಇದೆ. ತಲಾ ಆದಾಯ ಹೆಚ್ಚಳ ಮಾಡುವ ಕೆಲಸ ಮಾಡ್ತಿಲ್ಲ. ದೇಶದ ಆರ್ಥಿಕತೆ ಅದೋಗತಿಗೆ ಹೋಗ್ತಿದೆ ಎಂದು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES