ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ಯಾರಿಗೆ ತಾನೆ ಗೊತ್ತಿಲ್ಲ. ಹೆಸರಿಗೆ ತಕ್ಕಂತೆ ಇವರು ನಟನೆಯಲ್ಲೂ ಎಲ್ಲರಿಗೂ ಪ್ರಿಯವಾಗಿರುವ ಕಲಾವಿದೆ. ಸದ್ಯ, ಪ್ರಿಯಾ ಆನಂದ್ ವಿವಾದಿತ ಹೇಳಿಕೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವ್ರ ಹೆಸರು ದೇಶ ಬಿಟ್ಟು ಪರಾರಿಯಾಗಿರೋ ಕೈಲಾಸವಾಸಿ, ಅಘೋಷಿತ ದೇವಮಾನವ ನಿತ್ಯಾನಂದ ಅವರ ಜತೆ ತಳುಕು ಹಾಕಿಕೊಂಡಿದೆ. ಅಸಲಿಗೆ ಏನ್ ಸಮಾಚಾರ ಅಂತೀರಾ. ಈ ಸ್ಟೋರಿ ಓದಿ.
ಅಸಲಿಗೆ ಯಾವುದು ಸತ್ಯ.. ಯಾವುದು ಸುಳ್ಳು.. ಪ್ರಿಯಾ ಸ್ಪಷ್ಟನೆ
ಅಪ್ಪು ಅಭಿನಯದ ರಾಜಕುಮಾರ, ಜೇಮ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಪ್ರಿಯಾ ಆನಂದ್ ವಿವಾದಿತ ಹೇಳಿಕೆಯಿಂದ ಸಖತ್ ಸುದ್ದಿಯಲ್ಲಿದ್ದಾರೆ. ದೇಶ ಬಿಟ್ಟು ಕೈಲಾಸದಲ್ಲಿ ನೆಲೆಸಿರುವ ಅಘೋಷಿತ ದೇವಮಾನವ ನಿತ್ಯಾನಂದ ಅವರನ್ನು ಮದ್ವೆ ಆಗೋದಾಗಿ ಹೇಳಿಕೆ ನೀಡಿ ವೀವಾದದಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ನಿತ್ಯಾನಂದ ಅವರನ್ನು ಮದ್ವೆ ಆಗಲು ಬಯಸಿದ್ದೇನೆ ಎಂದಿದ್ದರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ವಿಲಾಸಪ್ರಿಯ, ರಾಸಲೀಲೆಯಲ್ಲಿ ಸಿಲುಕಿ ದೇಶ ಬಿಟ್ಟು ಪರಾರಿಯಾಗಿ ತನ್ನದೇ ಸಾಮ್ರಾಜ್ಯಕ್ಕೆ ಕೈಲಾಸ ಎಂಬ ಹೆಸರಿಟ್ಟು ದೇವಮಾನವನಾಗಿ ಮೆರೆಯುತ್ತಿರುವ ಸನ್ಯಾಸಿಯೇ ಸ್ವಾಮಿ ನಿತ್ಯಾನಂದ. ಇದೀಗ ಪ್ರಿಯಾ ಅನಂದ್ಗೂ, ಸ್ವಾಮಿ ನಿತ್ಯಾನಂದನಿಗೂ ಏನು ಸಂಬಂಧ ಅಂತಾ ಕೇಳಬೇಡಿ. ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡ್ತಾ ತಮಾಷೆಗೆ ನಿತ್ಯಾನಂದ ಅವರ ಟ್ರೋಲ್ಗಳನ್ನು ಉಲ್ಲೇಖಿಸಿ, ನಾನು ನಿತ್ಯಾನಂದ ಅವರನ್ನು ಮದ್ವೆ ಆಗ್ತೀನಿ ಎಂದಿದ್ದಾರೆ ಪ್ರಿಯಾ ಅನಂದ್. ಇದೀಗ ಈ ಹೇಳಿಕೆ ಸಖತ್ ಟ್ರೋಲ್ ಆಗಿದೆ.
ಇದ್ರ ಜತೆಯಲ್ಲಿ, ನನ್ನ ಹೆಸರಿಗೂ, ಅವರ ಹೆಸರಿಗೂ ಸಾಮ್ಯತೆ ಇದೆ. ನಾನು ಅವರನ್ನು ಮದ್ವೆ ಆದರೆ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಹೇಳಿಕೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಿಯಾ ಅನಂದ್ ಅಲ್ಲಗಳೆದಿದ್ದರೂ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಈ ಕುರಿತು ಪವರ್ ಟಿವಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿತಾದ್ರೂ, ದಯವಿಟ್ಟು ನಾನು ಹೇಳಿಲ್ಲ. ಇದನ್ನು ಇಲ್ಲಿಗೆ ಬಿಟ್ಟಿಬಿಡಿ ಎಂದು ಸಮಜಾಯಿಷಿ ಕೊಟ್ಟರು. ಒಟ್ಟಾರೆ ತಮಾಷೆಗೆ ಆಡಿದ ಮಾತು ಈ ಹಂತದವರೆಗು ತಲುಪಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ತಕ್ಷಣಕ್ಕೆ ರಿಯಾಕ್ಟ್ ಮಾಡಿದ್ದರೆ ಇಂತಹ ಸಣ್ಣ ಪುಟ್ಟ ಆರೋಪಗಳಿಂದ ಬೇಗ ಮುಕ್ತವಾಗಬಹುದಿತ್ತು. ಎನಿವೇ ಪ್ರಿಯಾ ಆನಂದ್ ಸಿನಿಕರಿಯರ್ಗೆ ಆಲ್ ದಿ ಬೆಸ್ಟ್.
ರಾಕೇಶ್ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ