ಮಂಡ್ಯ: ಸುಮಲತಾಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ವಿರುದ್ದ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟೆ ಹೆಸರು ಹೇಳಿಕೊಂಡು ಸಂಸದೆ ಬಂದ ಉದ್ದೇಶವೇ ಬೇರೆ ಇದೆ. ದೇವರ ದಯೇಯಿಂದ KRS ನಲ್ಲಿ ಯಾವುದೇ ಬಿರುಕು ಇಲ್ಲ. KRS ಬಿರುಕು ಬಿಟ್ಟಿದೆ, KRS ಹೊಡೆದುಹೊಗ್ತಿದೆ ಅಂತನಮ್ಮ ಸಂಸದೆಗೆ ಅನುಮಾನ ಬಂದಿತ್ತು. ಅದು ಇದು ಅಂತ ಹೇಳಿ 15 ದಿನ ಮಾಧ್ಯಮ ಹಾಗೂ ರೈತಾಪಿವರ್ಗಕ್ಕೆ ಆತಂಕ ತಂದಿದ್ರು ಎಲ್ಲರಿಗೂ KRS ಬಿರುಕಿನ ವಿಚಾರ ಸಮಸ್ಯೆಯಾಗಿತ್ತು ಎಂದರು.
ಇನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ದೊಡ್ಡ ಕಾರ್ಯಾಗಾರ ಮಾಡಿದೆ. ನಿಜವಾಗಿಯೂ ಇವರಿಗೆ ರೈತರ ಬಗ್ಗೆ ಆತಂಕ ಇದ್ದು. KRS ಕಟ್ಟೆ ಬಗ್ಗೆ ಆತಂಕ ಇದ್ದು, ಅದೇ ಉದ್ದೇಶಕ್ಕೆ ಸೀಮಿತವಾಗಿದ್ದಿದ್ರೆ ಬರಬೇಕಿತ್ತು. ರಾಜ್ಯದ ಅಧಿಕಾರಿಗಳು, ಮಂತ್ರಿಗಳು ಅಣೆಕಟ್ಟು ಸಂರಕ್ಷಣೆ ಬಗ್ಗೆ ಕಾರ್ಯಗಾರ ಮಾಡಿದ್ರು. ಅವರು ಕಾರ್ಯಗಾರಕ್ಕೆ ಗೈರಾಗಿದ್ದಾರೆ ಎಂದು ಹೇಳಿದರು.
ಅದಲ್ಲದೇ, ರಾಜ್ಯದ ಮಂತ್ರಿ, ಅಧಿಕಾರಿಗಳು, ಎಂಎಲ್ಎ ಗಳು ಇದ್ರು ಅಷ್ಟು ಅನುಮಾನ ಇದಿದ್ರೆ ಸಭೆಗೆ ಬರಬೇಕಿತ್ತು. ಅವರ ಉದ್ದೇಶಗಳು ಬೇರೆ ಇದೆ ಜನರು ಅರ್ಥಮಾಡಿಕೊಂಡ್ರೆ ಸಾಕು. ಕಟ್ಟೆ ಹೆಸರು ಹೇಳಿಕೊಂಡು ಬಂದ ಉದ್ದೇಶವೇ ಬೇರೆ ಇದೆ. ಜನರು ಅರ್ಥ ಮಾಡಿಕೊಳ್ತಿದ್ದಾರೆ. ಸಂಸದೆ ಸಭೆಗೆ ಬಂದು ಚರ್ಚೆ ಮಾಡಬಹುದಿತ್ತು ಏಕೆ ಬರಲಿಲ್ಲ.? KRS ಡ್ಯಾಂ ಬಿರುಕು ಬಿಟ್ಟಿದೆ ಅನ್ನೊ ಮಾಹಿತಿ ಇದೆ ಅಂತ ಚರ್ಚೆ ಮಾಡಬೇಕಿತ್ತು. ಅವರು ಬರಲಿಲ್ಲ, ಭಾಗಿಯಾಗಿಲ್ಲ, ಸರ್ಕಾರ ಇಂಟ್ರೆಸ್ಟ್ ಕೊಟ್ಟಿ ಸಭೆ ಮಾಡಿದ್ದಾರೆ. ಆದ್ರೂ ಕೂಡ ಆ ಸಭೆಗೆ ಸಂಸದೆ ಗೈರಾಗಿದ್ದಾರೆ ಎಂದು ಕಿಡಿಕಾಡಿದ್ದಾರೆ.