ಗತಕಾಲದ ಚೋಳರ ಸಾಮ್ರಾಜ್ಯದ ವೈಭವ ಮತ್ತೆ ಬೆಳ್ಳಿತೆರೆ ಮೇಲೆ ಅನಾವರಣಗೊಳ್ತಿದೆ. ಬರೋಬ್ಬರಿ 500 ಕೋಟಿಯಲ್ಲಿ ಸಿನಿ ಮಾಂತ್ರಿಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದೆ. ಸೌತ್ನಿಂದ ಬಾಲಿವುಡ್ವರೆಗೆ ಬಹು ತಾರಾಗಣದ ಪೊನ್ನಿಯಿನ್ ಸೆಲ್ವನ್ ಟೀಸರ್ ಪಂಚ ಭಾಷೆಯಲ್ಲಿ ಜಗಮಗಿಸುತ್ತಿದೆ.
500 ಕೋಟಿಯಲ್ಲಿ ಚೋಳ ಸಾಮ್ರಾಜ್ಯದ ಗತವೈಭವ..!
ಪಂಚ ಭಾಷೆಯಲ್ಲಿ ಬಹುತಾರಾಗಣದ ಐತಿಹಾಸಿಕ ಚಿತ್ರ
ಸಂಜಯ್ ಲೀಲಾ ಬನ್ಸಾಲಿ, ರಾಜಮೌಳಿ ನಂತ್ರ ಐತಿಹಾಸಿಕ ಕಥೆಗಳನ್ನು ಯುದ್ಧ ಸನ್ನಿವೇಶಗಳ ಸಮೇತ ನೋಡುಗರ ಕಣ್ಣಿಗೆ ಕಟ್ಟಿದಂತೆ ತೋರಿಸೋ ಮಾಂತ್ರಿಕನಾಗಿ ಮಣಿರತ್ನಂ ಕೂಡ ಮುಂಚೂಣಿಯಲ್ಲಿದ್ದಾರೆ. ಸದ್ಯ ರಿಲೀಸ್ ಆಗಿರೋ ಪೊನ್ನಿಯಿನ್ ಸೆಲ್ವನ್- 1ರ ಟೀಸರ್ ಇದಾಗಿದ್ದು, ಪ್ರೇಕ್ಷಕರ ಕಣ್ಮನ ತಣಿಸಿದೆ. ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟಿದೆ.
ದಕ್ಷಿಣ ಭಾರತದ ಕೆಲ ಭಾಗಗಳನ್ನು ದೀರ್ಘಕಾಲ ಆಳಿದಂತಹ ಚೋಳರ ಸಾಮ್ರಾಜ್ಯದ ಕುರಿತ ದೃಶ್ಯಚಿತ್ತಾರ ಇದಾಗಿದೆ. 9ನೇ ಶತನಮಾನದಿಂದ 13ನೇ ಶತಮಾನದವರೆಗಿನ ಆ ಮಹಾಪರ್ವ ನೂರಾರು ಯುದ್ಧ ಕದನಗಳಿಂದ ತುಂಬಿತ್ತು. ಅದನ್ನ ಆರು ನ್ಯಾಷನಲ್ ಅವಾರ್ಡ್ಗಳನ್ನ ಪಡೆದಿರೋ ಮಣಿರತ್ನಂ ಅವ್ರು ಡ್ರೀಮ್ ಪ್ರಾಜೆಕ್ಟ್ ಆಗಿ ಬರೋಬ್ಬರಿ 500 ಕೋಟಿ ಭಾರೀ ಬಜೆಟ್ನಲ್ಲಿ ತಯಾರಿಸಿದ್ದಾರೆ. ಅದೂ ಎರಡೆರಡು ಭಾಗಗಳಲ್ಲಿ ಅನ್ನೋದು ಇಂಟರೆಸ್ಟಿಂಗ್.
ಶುಕ್ರವಾರ ಸಂಜೆ ಚೆನ್ನೈನಲ್ಲಿ ತಮಿಳು ಟೀಸರ್ ಲಾಂಚ್ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು. ತಮಿಳಿನ ಟೀಸರ್ನ ಸೂರ್ಯ ಲಾಂಚ್ ಮಾಡಿದರಾದ್ರೂ, ಚಿತ್ರದ ಪ್ರಮುಖ ನಾಯಕನಟ ವಿಕ್ರಮ್ ಅನಾರೋಗ್ಯದಿಂದ ಗೈರಾಗಿದ್ರು. ಉಳಿದಂತೆ ತ್ರಿಶಾ, ಜಯಂ ರವಿ, ಕಾರ್ತಿ ಸೇರಿದಂತೆ ಎಲ್ಲಾ ಕಲಾವಿದರು ಭಾಗಿಯಾಗಿದ್ರು.
ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಮಲಯಾಳಂನಲ್ಲಿ ಮೋಹನ್ಲಾಲ್, ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಹಾಗೂ ಹಿಂದಿಯಲ್ಲಿ ಬಿಗ್ಬಿ ಅಮಿತಾಬ್ ಬಚ್ಚನ್ ಪೊನ್ನಿಯಿನ್ ಸೆಲ್ವನ್ ಟೀಸರ್ನ ಬಿಡುಗಡೆ ಮಾಡಿದ್ರು. ಐಶ್ವರ್ಯಾ ರೈ ಕೂಡ ಲೀಡ್ನಲ್ಲಿದ್ದು, ಟೀಸರ್ನ ಒಂದೊಂದು ದೃಶ್ಯ ಕೂಡ ನೋಡುಗರಿಗೆ ವ್ಹಾವ್ ಫೀಲ್ ಕೊಡ್ತಿದೆ. ದಸರಾಗೆ ಅಂದ್ರೆ ಸೆಪ್ಟೆಂಬರ್ 30ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದ್ದು, ಕನ್ನಡತಿ ಐಶ್ವರ್ಯಾ ರೈ ಖದರ್ ಜೊತೆ ಹತ್ತಾರು ಸೂಪರ್ ಸ್ಟಾರ್ಗಳ ಕತ್ತಿ ವರಸೆ, ಕುದುರೆ & ಆನೆಗಳ ಜೊತೆ ಅನಾವರಣಗೊಳ್ಳಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ