ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಸಚಿವರ ಹೇಳಿಕೆ ಹಿನ್ನಲೆ, ಸಮವಸ್ತ್ರ ಸಮರ ಮತ್ತೆ ತಾರಕಕ್ಕೇರಿದೆ. ಕಾಂಗ್ರೆಸ್ ಇದನ್ನ ಬಳಿಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲಿಕಿಸಲು ಹೊರಟಿದೆ. ಆದ್ರೆ, ಸಿಎಂ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ರು.
ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಬಟ್ಟೆ ಕೊಡುವ ಅಗತ್ಯವಿಲ್ಲ ಎಂಬ ಶಿಕ್ಷಣ ಸಚಿವರ ಹೇಳಿಕೆಗೆ ಕಾಂಗ್ರೆಸ್ ನಾಯಕರ ಕಣ್ಣುಕೆಂಪಗಾಗಿಸಿದೆ. ಇದೇ ವಿಚಾರ ಇಟ್ಕೊಂಡು ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಸರ್ಕಾರದ ಬಡವರ ಕಾಳಜಿ ಮತ್ತು ಬದ್ದತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಲು, ಒಳ್ಳೆಯ ಶಾಲೆಯಲ್ಲಿ ಓದಿಸಲು ದುಡಿಯುತ್ತಾರೆ. ಅದಕ್ಕೆ ಸರ್ಕಾರವೂ ಸಹ ಶೂ, ಬಟ್ಟೆಗಳನ್ನು ಕೊಡುವ ಕಾರ್ಯಕ್ರಮ ಮಾಡಿದೆ. ಆದರೆ, ಶಿಕ್ಷಣ ಸಚಿವರು ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ..ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ..? ಇವರು ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ..ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೇಳಿ..ಕಾಂಗ್ರೆಸ್‌ನವರು ಭಿಕ್ಷೆ ಬೇಡಿ ಬಟ್ಟೆಗಳನ್ನು ಕೊಡ್ತಾರೆ ಅಂತ ತಿರುಗೇಟು ನೀಡಿದ್ದಾರೆ ಕೈ ನಾಯಕರು.
ಭಿಕ್ಷೆ ಬೇಡಿಯಾದ್ರೂ ಯೂನಿಪಾರ್ಮ್ ಶೂ ಕೊಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಿಎಂ ಕೂಡ ಕಾಂಗ್ರೆಸ್ ನಾಯಕರ ಬದ್ದತೆ ಪ್ರಶ್ನಿಸಿದ್ದಾರೆ. ಅಲ್ಲದೇ ನಾವು ಶೂ, ಸಾಕ್ಸ್, ಯೂನಿಪಾರ್ಪ್ ಕೊಡಲು ಸಿದ್ದರಿದ್ದೇವೆ ಅಂತ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.. ಕೊವಿಡ್ ಟೈಮಲ್ಲಿ ಭಿಕ್ಷೆ ಬೇಡಿ ಕೊಡ್ತೀರಿ ಎಂದಿದ್ರಲ್ಲ..ಆ ದುಡ್ಡು ಎಲ್ಲಿ ಹೋಯ್ತು ಅಂತ ಕಾಂಗ್ರೆಸ್‌ಗೆ ಸಿಎಂ ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಶಿಕ್ಷಣ ಸಚಿವರ ಹೇಳಿಕೆ ಬೆನ್ನಲ್ಲೇ ಸಿಎಂ ಎಚ್ಚೆತ್ತುಕೊಂಡು ಸಮವಸ್ತ್ರ ಕೊಡೋದಾಗಿ ಹೇಳಿದ್ದಾರೆ. ಸರ್ಕಾರ ಇಷ್ಟು ದಿನ ಯೂನಿಪಾರ್ಮ್ ಬಗ್ಗೆ ಸುಮ್ಮನಿದ್ದು, ಇದೀಗ ಕಾಂಗ್ರೆಸ್ ಹೋರಾಟದ ಬೆನ್ನಲ್ಲೇ ಯೂನಿಫಾರ್ಮ್ ಕೊಡುವ ಬಗ್ಗೆ ಮಾತನಾಡುತ್ತಿದೆ. ಈ ವಿಚಾರ ಕಾಂಗ್ರೆಸ್ ಹೇಗೆ ಸ್ವೀಕರಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಕ್ಯಾಮರಮ್ಯಾನ್ ಜಯರಾಮ್ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ