ವಿಜಯಪುರ : ಗ್ರಾಮೀಣ ವಲಯದ ವ್ಯಾಪ್ತಿಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಿದೆ.
ಕಳೆದ ಒಂದು ವಾರದಿಂದ ಬಿಸಿಯೂಟ ಬಂದ್ ಆಗಿದ್ದು, ವಿಜಯಪುರ ತಾಲೂಕು, ವಿಜಯಪುರ ಗ್ರಾಮೀಣ ಭಾಗದ ತಿಕೋಟ, ಬಬಲೇಶ್ವರ ಭಾಗದ ಎಲ್ಲ ಸರ್ಕಾರಿ ಶಾಲೆಗಳಲ್ಲು ಇದೆ ಸ್ಥಿತಿ ಉಂಟಾಗಿದೆ. ವಿಜಯಪುರ ತಾಲೂಕಿನ 201 ಶಾಲೆ, ಬಬಲೇಶ್ವರ-ತಿಕೋಟ ತಾಲೂಕುಗಳ 490 ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟವೇ ಬಂದ್ ಆಗಿದೆ.
ಇನ್ನು, ಮನೆಯಿಂದ ಬುತ್ತಿಕಟ್ಟಿಕೊಂಡು ಬಂದು ಊಟ ಮಾಡ್ತಿರೋ ವಿದ್ಯಾರ್ಥಿಗಳು, ಮನೆಯಲ್ಲಿ ಬುತ್ತಿ ಕಟ್ಟಿ ಕೊಡದೆ ಇದ್ರೆ ಮಕ್ಕಳಿಗೆ ಉಪವಾಸ, ವನವಾಸವೇ ಗತಿ ಅಡುಗೆ ಗ್ಯಾಸ್ ಪುರೈಕೆಯಾಗದೆ 500ಕ್ಕು ಅಧಿಕ ಶಾಲೆಗಳಲ್ಲಿ ಬಿಸಿಯೂಟವೇ ಬಂದ್ ಆಗಿದೆ.
ವಿಜಯಪುರದ ವೆಂಕಟೇಶ್ವರ ಗ್ಯಾಸ್ ಎಜೆನ್ಸಿಯಿಂದ ಪುರೈಕೆಯಾಗ್ತಿದ್ದ ಅಡುಗೆ ಗ್ಯಾಸ್ 20 ಲಕ್ಷ ರೂಪಾಯಿ ಭಾಕಿ ಕಟ್ಟದ ಅಕ್ಷರ ದಾಸೋಹ ಅಧಿಕಾರಿಗಳು. ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ 2 ಸಾವಿರಕ್ಕು ಅಧಿಕ ಗ್ಯಾಸ್ ಸಿಲಿಂಡರ್‌ಗಳ 20 ಲಕ್ಷರು, ಅಕ್ಷರ ದಾಸೋಹ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ. ಅಪಾರ ಪ್ರಮಾಣದಲ್ಲಿ ಭಾಕಿ ಉಳಿಸಿಕೊಂಡ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವೆಂಕಟೇಶ್ವರ ಗ್ಯಾಸ್ ಎಜೆನ್ಸಿ. ಅಕ್ಷರ ದಾಸೋಹ ಅಧಿಕಾರಿಗಳ ಯಡವಟ್ಟಿಗೆ ಶಾಲಾ ಮಕ್ಕಳು ಮನೆಯಿಂದ ಬುತ್ತಿ ಕಟ್ಟಿಕೊಂಡು ಬರುತ್ತಿದ್ದಾರೆ.