ಬೆಂಗಳೂರು : ಶಾಲಾ ಬ್ಯಾಗ್ ಹೊರೆಯಿಂದಯಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆಯಿಂದ ಮುಕ್ತರಾಗಲು ಶನಿವಾರ ಬ್ಯಾಗ್ ಲೆಸ್ ಡೇ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ಶಿಕ್ಷಣ ಇಲಾಖೆ ಪೋಷಕರಿಂದ ಶಾಲಾ ಬ್ಯಾಗ್ ಪ್ಲಾಬ್ಲಂ ಸಮಸ್ಯೆ ಕೇಳಿ ಬರುತ್ತಿದ್ದು, ಶನಿವಾರದಂದು ಮಕ್ಕಳ ಬ್ಯಾಗ ಹೊರೆ ಇಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಕಳೆದ ಎರಡುವರೆ ವರ್ಷಗಳ ಕಾಲ ಆನ್ ಲೈನ್ ಪಾಠ ಕೇಳಿದ್ದ ಮಕ್ಕಳು, ಈಗ ಮತ್ತೆ ಪೂರ್ಣ ಪ್ರಮಾಣದ ಶಾಲೆಗಳು ಆರಂಭವಾಗುತ್ತಿದ್ದಂತೆ ಹೊಸ ಸಮಸ್ಯೆಗಳು ಶುರುವಾಗುತ್ತಿವೆ. ಕಳೆದ ಎರಡು ವರ್ಷ ಕೊವಿಡ್ ಸಂಕಷ್ಟದ ಮಧ್ಯೆ ಮನೆಯಲ್ಲಿ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡಿದ್ದ ಮಕ್ಕಳು, ಇದೀಗ ಆಫ್ ಲೈನ್ ಕ್ಲಾಸ್ ಆರಂಭವಾಗ್ತೀದ್ದಂತೆ ಶಾಲೆಗಳ ಆರಂಭದ ಬೆನ್ನಲ್ಲೇ ಸ್ಕೂಲ್ ಬ್ಯಾಗ್ ಪ್ರಾಬ್ಲಂಗೆ ಮಕ್ಕಳು ತುತ್ತಾಗುತ್ತಿದ್ದಾರೆ.
ಏಕಾಏಕಿ ಭಾರದ ಬ್ಯಾಗ್ ಹಿಡಿದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುವ ಆತಂಕ ಪೋಷಕರಿಗೆ ಎದುರಾಗಿದೆ. ಭಾರದ ಬ್ಯಾಗ್ ನಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಎದುರಿಸುತ್ತಿದ್ದು. ೧೦ ರಿಂದ ೧೫ ಕೆಜಿ ಭಾರದ ಬ್ಯಾಗ್ ನಿಂದ ಮಕ್ಕಳಿಗೆ ಅನೇಕ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಗಮನಕ್ಕೆ ತರುತ್ತಿರುವ ಪೋಷಕರು. ಪೋಷಕರ ದೂರು ಹಿನ್ನಲೆ ಶಾಲೆಗಳಿಗೆ ಸೂಚನೆ ನೀಡಲು ಮುಂದಾದ ಇಲಾಖೆ, ಐದು ದಿನಗಳು ಮಾತ್ರ ಪಠ್ಯ ಪ್ರಾಯೋಗಿಕ ಪುಸ್ತಕ ತರವಂತೆ ಮಕ್ಕಳಿಗೆ ಸೂಚಿಸಿ. ಅಗತ್ಯ ಹಾಗೂ ವೇಳಾಪಟ್ಟಿಗೆ ತಕ್ಕಂತೆ ಪಠ್ಯ ಹಾಗೂ ಬ್ಯಾಗ್ ಇರಲಿ. ಶನಿವಾರ ಮಕ್ಕಳಿಗೆ ವ್ಯಾಯಮ ದೈಹಿಕ ಚಟುವಟಿಕಯ ಕಾರ್ಯಕ್ರಮ ಮಾಡಿಸಿ ಅಂತ ಸೂಚನೆ ಮಾಡಿದ್ದಾರೆ.