ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಎರಡನೇ ಭಾರಿಗೆ ಲೋಪವಾಗಿದೆ. ಪಂಜಾಬ್ನಲ್ಲಿ ಭದ್ರತಾ ಲೋಪದ ಬಳಿಕ ಇದೀಗ ಆಂಧ್ರಪ್ರದೇಶದ ವಿಜಯವಾಡದಲ್ಲಿ ಇದೇ ರೀತಿ ಘಟನೆ ನಡೆದಿದೆ. ಪ್ರಧಾನಿ ಮೋದಿಯ ಹೆಲಿಕಾಪ್ಟರ್ ಸನಿಹದಲ್ಲಿ ಪ್ರತಿಭಟನಕಾರರ ಬಲೂನ್ ಹಾರಿ ಬಂದಿದೆ.
ಹೀಗಾಗಿ ಆತಂಕದ ವಾತವಾರಣ ನಿರ್ಮಾಣವಾಗಿತ್ತು. ಇದು ಪ್ರಧಾನಿ ಮೋದಿ ಭದ್ರತೆ ವಿಚಾರದಲ್ಲಿ ನಡೆದ ಅತೀ ದೊಡ್ಡ ಲೋಪ ಎಂದು ಹೇಳಲಾಗುತ್ತಿದೆ. ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಹಾಗೂ ಮೋದಿ ಹೆಲಿಕಾಪ್ಟರ್ ಮೂಲಕ ತೆರಳು ಮಾರ್ಗದಲ್ಲಿ ಪ್ರತಿಭಟನೆ ವೇಳೆ ಬಲೂನ್ ಹಾರಿಬಿಟ್ಟ ಭದ್ರತಾ ಲೋಪವೆಸಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ವೇಳೆ ಕಪ್ಪು ಬಲೂನ್ಗಳನ್ನ ಹಾರಿ ಬಿಡಲಾಗಿದೆ. ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಈ ಬಲೂನ್ಗಳನ್ನು ಹಾರಿ ಬಿಡಲಾಗಿದೆ. ಹಾರಿಬಿಟ್ಟ ದೊಡ್ಡ ಗಾತ್ರದ ಬಲೂನ್ಗಳು ಆಗಸದಲ್ಲಿ ತೇಲಾಡಿದೆ. ಇತ್ತ ಕಾರ್ಯಕ್ರಮದ ಮುಗಿಸಿ ಮೋದಿ ಹೆಲಿಕಾಪ್ಟರ್ ಏರಿ ಪ್ರಯಾಣ ಆರಂಭಿಸಿದರು. ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಮೇಲಕ್ಕೆ ಹಾರುತ್ತಿದ್ದಂತೆ ಪ್ರತಿಭಟನಾಕಾರರ ಬಲೂನ್ ಅಡ್ಡಬಂದಿದೆ. ಆದರೆ ಪೈಲೈಟ್ ಸಮಯಪ್ರಜ್ಞೆಯಿಂದ ಬಹುದೊಡ್ಡ ಅಪಾಯ ತಪ್ಪಿದೆ.
ಇದು ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ನಡೆದ ಎರಡನೇ ಲೋಪವಾಗಿದೆ. ಮೋದಿ ಸಂಚರಿಸುವ ವಾಯು ಮಾರ್ಗದಲ್ಲಿ ಯಾವುದೇ ಅಡೇ ಇರದಂತೆ ನೋಡಿಕೊಳ್ಳಲಾಗುತ್ತದೆ. ಮೋದಿ ಪ್ರಯಾಣಕ್ಕೂ ಮುನ್ನ ಹಮಾಮಾನ ಕೂಡ ಪರಿಶೀಲನೆ ನಡೆಯಲಾಗುತ್ತದೆ. ಆದರೆ ಈ ಎಲ್ಲಾ ನಿಯಮಗಳ ಮೀರಿ ಬಲೂನ್ಗಗಳು ಮೋದಿ ಹೆಲಿಕಾಪ್ಟರ್ ಸನಿದಲ್ಲಿ ಹಾರಿವೆ..