Sunday, November 24, 2024

ಕಡಲತೀರದಲ್ಲಿ ದುರ್ಗಾ ದೇವಿ ಮೂರ್ತಿ ಪತ್ತೆ

ಕಾರವಾರ : ಉತ್ತರಕನ್ನಡ ಜಿಲ್ಲೆಯ ಗೊಕರ್ಣದ ಮುಖ್ಯ ಕಡಲತೀರದಲ್ಲಿ ದುರ್ಗಾದೇವಿ ಮೂರ್ತಿಯೊಂದು ಪತ್ತೆಯಾಗಿದೆ. ಯಾರು ಸಮುದ್ರದಲ್ಲಿ ವಿರ್ಸಜಿಸಿ ಹೋಗಿದ್ದು ಅದೇ ವಾಪಸ ಬಂದಿರಬಹುದು ಎನ್ನಲಾಗಿದೆ.

ಪ್ರವಾಸಿಗರು ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವ ವೇಳೆ ಈ ಮೂರ್ತಿ ಕಾಲಿಗೆ ತಾಗಿದ್ದು, ತಕ್ಷಣ ದಡಕ್ಕೆ ತಂದಿದ್ದಾರೆ. ಮೂಗಿಗೆ ಚಿನ್ನದ ಮೂಗುತಿ ಇದ್ದು, ಬಹು ಆಕರ್ಷಕವಾದ ದೇವಿಯನ್ನು ನೋಡಲು ಸ್ಥಳೀಯರು ಮತ್ತು ಪ್ರವಾಸಿಗರು ಮುಗಿಬಿದ್ದದರು. ಅಲ್ಲದೆ ಮೊಬೈಲ್ ನಲ್ಲಿ ಪೋಟೋ ಕ್ಲಿಕಿಸಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿರುವ ದೃಶ್ಯ ಕಂಡು ಬಂತು.ಮೂರ್ತಿ ಭಿನ್ನವಾದಾಗ ನೂತನ ಮೂರ್ತಿ ಪ್ರತಿಷ್ಠಾಪಿಸಿ ಹಳೆಯದನ್ನು ಸಮುದ್ರದಲ್ಲಿ ವಿಸರ್ಜಿಸುವುದು ವಾಡಿಕೆಯಾಗಿದೆ.

ಸ್ಥಳಕ್ಕೆ ಪಿ.ಐ. ವಸಂತ ಆಚಾರ, ಪಿ.ಎಸ್. ಐ. ಸುಧಾ ಅಘನಾಶಿನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಮಹಾರಷ್ಟ ಮೂಲದವರು ಮೂರ್ತಿ ತಂದು ಪೂಜಿಸಿ. ಇಲ್ಲಿಯೆ ಬಿಟ್ಟಿ ಹೋಗಿದ್ದಾರೆ ಎನ್ನವ ಮಾತು ಸಹ ಸ್ಥಳೀಯರಿಂದ ಕೇಳಿ ಬರತ್ತಾ ಇದೆ.

RELATED ARTICLES

Related Articles

TRENDING ARTICLES