ಬೆಂಗಳೂರು : ಕಾಯಂ ನೌಕರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಪೌರಕಾರ್ಮಿಕರ ಪ್ರತಿಭಟನೆ ತೀವ್ರವಾಗಲಿದೆ.
ಕಸದ ವಿಚಾರದಲ್ಲಿ ಬೆಂಗಳೂರು ಮಾರ್ಯಾದೆ ಮತ್ತೆ ಹರಾಜು ಆಗುತ್ತಾ.? ಕಳೆದ ನಾಲ್ಕು ದಿನದಿಂದ ಸಿಲಿಕಾನ್ ಸಿಟಿ ಗಬ್ಬು ನಾರುತ್ತಿದ್ದು, ಗಾರ್ಬೇಜ್ ಸಿಟಿಯತ್ತ ಸಿಲಿಕಾನ್ ಸಿಟಿ ಬೆಂಗಳೂರು..? ನಗರದ ರಸ್ತೆ ರಸ್ತೆಗಳಲ್ಲಿ ಹೆಚ್ಚಾಗ್ತಿದೆ ರಾಶಿ ರಾಶಿ ಕಸ. ಪಟ್ಟು ಬಿಡದೆ ಪೌರಕಾರ್ಮಿಕರು ಪ್ರತಿಭಟನೆ ಹಿನ್ನಲೆ ಕಸಮಯವಾಗ್ತಿದೆ.
ಇನ್ನು, ಬೆಂಗಳೂರಿನ ಆಟದ ಮೈದಾನ, ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ತುಂಬಿದೆ ಬರೀ ಕಸ ತುಂಬಿಕೊಂಡಿದ್ದು, ಕಳೆದ ಶುಕ್ರವಾರ ದಿಂದ ಬೆಂಗಳೂರಿನಲ್ಲಿ ಕಸ ಸಮರ್ಪಕವಾಗಿ ವಿಲೇವಾರಿ ಆಗ್ತಿಲ್ಲ. ಹೀಗಾಗಿ ಎಲ್ಲೆಡೆ ಕಸ ಕಂಡು ಬಂದು ಗಬ್ಬುನಾರುತ್ತಿದೆ. 18 ಸಾವಿರ ಪೌರಕಾರ್ಮಿಕರಲ್ಲಿ ಶೇ 70 ರಷ್ಟು ಕಾರ್ಮಿಕರು ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದು, ಸರ್ಕಾರದಿಂದ ಲಿಖಿತ ಭರವಸೆಗೆ ಪೌರಕಾರ್ಮಿಕರ ಪಟ್ಟು ಹಿಡಿದಿದ್ದಾರೆ. ಕಾಯಂ ನೌಕರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಈ ಪ್ರತಿಭಟನೆಯಿಂದ ತ್ಯಾಜ್ಯ ವಿಲೇವಾರಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.