ಬೆಂಗಳೂರು : ಕೊರೋನಾ ಅಂದ್ರೆ ಜನ ಒಂದು ಕ್ಷಣ ಬೆಚ್ಚಿಬೀಳ್ತಾರೆ. ಯಾಕಂದ್ರೆ ಅದು ಸೃಷ್ಟಿಸಿರೋ ಅವಾಂತರಗಳಿಂದ ಸಾವು, ನೋವು, ಆರ್ಥಿಕ ದುಸ್ಥಿತಿ, ನಿರುದ್ಯೋಗ ಹೀಗೆ ಒಂದಲ್ಲ ಎರಡಲ್ಲ ಪ್ರಾಬ್ಲಮ್ಗಳು. ಮೊದಲ ಮತ್ತು 2ನೇ ಅಲೆಗಳಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರು ಬೆಡ್, ಆಕ್ಸಿಜನ್, ಟ್ರೀಟ್ಮೆಂಟ್ ಸಿಗದೆ ಪರಿತಪಿಸಿದ್ರು. ಎಷ್ಟೋ ಜನರು ಗುರುತೇ ಇಲ್ಲದಂತೆ ಮಣ್ಣಲ್ಲಿ ಮಣ್ಣಾಗಿ ಹೋದ್ರು. ಇಂತಹ ಭಯಾನಕ ಸ್ಥಿತಿ ಆಗ ನಿರ್ಮಾಣವಾಗಿತ್ತು. ಆದ್ರೆ 3ನೇ ವೇವ್ ನಲ್ಲಿ ಆ ಪ್ರಾಬ್ಲಮ್ ಇರ್ಲಿಲ್ಲ. ಸದ್ಯ 4ನೇ ಅಲೆ ಆತಂಕ ಎದುರಾಗಿದ್ದು, ಆಸ್ಪತ್ರೆ ದಾಖಲಾತಿಯೂ ಹೆಚ್ಚಾಗ್ತಿದೆ. ಈ ಮಧ್ಯೆ ಸೋಂಕಿತರಿಗೆ ಶಾಕ್ ಕೊಡಲು ಸರ್ಕಾರ ಮುಂದಾಗಿದೆ.
ಜನರು ಸತತ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಈ ಮಧ್ಯೆ ಕೊರೋನಾ 4ನೇ ಅಲೆ ಜೊತೆ ರೂಪಾಂತರಿಗಳ ಅಟ್ಟಹಾಸ ಬೇರೆ ಹೆಚ್ಚಾಗ್ತಿರೋದ್ರಿಂದ ನಿಧಾನವಾಗಿ ಆಸ್ಪತ್ರೆಗಳಿಗೆ ಡಿಮ್ಯಾಂಡ್ ಹೆಚ್ಚಾಗ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಖಾಸಗಿ ಆಸ್ಪತ್ರೆಗಳು ಕೊವಿಡ್ ಚಿಕಿತ್ಸಾ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಚಿಕಿತ್ಸಾ ದರದ ಜೊತೆ ಇತರೆ 70ಕ್ಕೂ ಹೆಚ್ಚು ಚಿಕಿತ್ಸೆಗಳ ದರ ಏರಿಕೆಗೂ ಪಟ್ಟು ಹಿಡಿದಿವೆ. ಹಳೆಯ ದರದಿಂದ ನಮಗೆ ಲಾಸ್ ಆಗುತ್ತಿದೆ, ದರ ಹೆಚ್ಚಿಸದಿದ್ರೆ ಚಿಕಿತ್ಸೆ ಕೊಡೋದೆ ಕಷ್ಟ ಎನ್ನುತ್ತಿವೆ. ಇದಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ದರ ಹೆಚ್ಚಳಕ್ಕೆ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿ, ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿದೆ.
ಮುಂದಿನ ದಿನಗಳಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ ಹೆಚ್ಚಳವಾಗೋದ್ರಿಂದ ಮಾಸ್ಕ್ಗೆ ಹೆಚ್ಚಿನ ಒತ್ತು ನೀಡಲಾಗ್ತಿದೆ. ಜನರು ಮಾಸ್ಕ್ ಹಾಕದೇ ನಿಯಮ ಉಲ್ಲಂಘನೆ ಮಾಡ್ತಿದ್ರೆ ಸರ್ಕಾರ ದಂಡ ಪ್ರಯೋಗಕ್ಕೆ ಮುಂದಾಗುತ್ತೆ ಎಂದು ಆರೋಗ್ಯ ಸಚಿವರು ಎಚ್ಚರಿಸಿದ್ದಾರೆ. ಈ ಮಧ್ಯೆ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ಕೂಡ ಹೆಚ್ಚಳ ಮಾಡಲಾಗಿದ್ದು, ಎಲ್ಲವನ್ನೂ ಮಾನಿಟರ್ ಮಾಡಲಾಗ್ತಿದೆ.
ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಸಮಸ್ಯೆ ಪರಿಹರಿಸಲು ಜನರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಮುಂದಾಗಿರೋದು ನಿಜಕ್ಕೂ ವಿಪರ್ಯಾಸ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು