ಮೈಸೂರು: ತೆಲುಗು ನಟ ವಿಜಯ್ ಕೃಷ್ಣ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರಿಬ್ಬರ ಸಂಬಂಧಕ್ಕೆ ಕೊನೆಗೂ ಬಿಗ್ಟ್ವಿಸ್ಟ್ ಸಿಕ್ಕಿದ್ದು, ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಇಬ್ಬರು ಒಂದೇ ರೂಮ್ನಲ್ಲಿರುವುದು ದೃಶ್ಯ ಸಮೇತವಾಗಿ ಸಿಕ್ಕಿ ಬಿದ್ದಿದ್ದಾರೆ.
ಕಳೆದ ಮೂರು ದಿನಳಿಂದ ನರೇಶ್ ಪತ್ನಿ ರಮ್ಯಾ ರಘುಪತಿ ಅವರು ತಮ್ಮ ಪತಿ ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪ ಮಾಡಿದ್ದರು. ಇದೀಗ ಈ ಆರೋಪವನ್ನು ದೃಶ್ಯ ಸಮೇತವಾಗಿ ಜನರಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲುಗು ನಟ ನರೇಶ್-ಪವಿತ್ರಾ ಲೋಕೇಶ್ ಮೈಸೂರಿನ ದಿ ಕೋರಮ್ ಹೋಟೆಲ್ನ ರೂಮ್ ನಂಬರ್ 3001ರಲ್ಲಿ ಇದ್ದರು. ಮುಂಜಾನೆಯಿಂದಲೂ ರಮ್ಯಾ ರಘುಪತಿ ಅವರು ರೂಮ್ ಹೊರಗೆ ಅವರ ಬರುವಿಕೆಗಾಗಿ ಕಾದು ಕುಳಿತಿದ್ದರು.
ಹೋಟೆಲ್ನಲ್ಲಿ ನರೇಶ್ ತನ್ನ ಹೆಸರಿನಲ್ಲಿಯೇ ರೂಮ್ ಬುಕ್ ಮಾಡಿದನ್ನು ಪವರ್ ಟಿವಿಗೆ ಈ ಕುರಿತು ಹೋಟೆಲ್ ಮ್ಯಾನೇಜರ್ ರಕ್ಷಿತ್ ಅವರು ಖಚಿತಪಡಿಸಿದ್ದರು.
ಅಲ್ಲದೇ ನರೇಶ್ ರೂಮ್ಗೆ ನಿನ್ನೆ ರಾತ್ರಿ ಪವಿತ್ರಾ ಲೋಕೇಶ್ ಡೈರೆಕ್ಟಾಗಿ ಹೋದರು ಎಂಬ ಸ್ಫೋಟಕ ಮಾಹಿತಿಯನ್ನು ಸಹ ಬಹಿರಂಗಪಡಿಸಿದ್ದಾರೆ.