ನಗು ಮೊಗದ ಸರದಾರ, ಕೋಟಿ ಕೋಟಿ ಕನ್ನಡಿಗರ ಮನೆ ಮಗ, ನಮಸ್ಕಾರ ಎನ್ನುತ್ತಲೇ ಅಭಿಮಾನಿಗಳ ಎದೆಯಲ್ಲಿ ಪುಟ್ಟದೊಂದು ಗುಡಿ ಕಟ್ಟಿದ ಗೋಲ್ಡನ್ ಹುಡುಗ ಗಣೇಶ್. ಸಕ್ಕರೆಯಂತ ಮನಸ್ಸು, ಮಗುವಿನ ನಗು, ಗುಳಿ ಕೆನ್ನೆಯ ಚೆಲುವ ಗಣೇಶ್ಗೆ ಇಂದು ಬರ್ತ್ ಡೇ ಸಂಭ್ರಮ. ಯೆಸ್.. ಮುಂಗಾರಿನ ಸೋನೆ ಮಳೆ ಸುರಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ ಪ್ರತಿಭಾನ್ವಿತ ಕಲಾವಿದನಿಗೆ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ.
ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಟೈಮ್ ಒಂದಿತ್ತು. ಖಾಸಗಿ ವಾಹಿನಿಯಲ್ಲಿ ಕಾಮಿಡಿ ಮಾಡಿಕೊಂಡಿದ್ದ ಚೆಲ್ಲಾಟದ ಹುಡುಗ ಗಣೇಶ್ ಮುಂಗಾರುಮಳೆ ಚಿತ್ರದ ನಂತ್ರ ಧಿಡೀರ್ ಗೆಲುವಿನ ಶಿಖರ ತಲುಪಿದ್ರು. ಗಣೇಶ್ ಅಭಿನಯದ ಮೋಡಿಗೆ ಇಡೀ ಕರುನಾಡೇ ಫಿದಾ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು, ಅಜ್ಜ ಅಜ್ಜಿಯರಿಗೂ ಗಣಿ ಅಂದ್ರೆ ಅಪರಿಮಿತ ಪ್ರೀತಿ. ಟೀನೇಜ್ ಹುಡುಗೀರ ಪಾಲಿಗೆ ಫೇವರಿಟ್ ನಮ್ ಗಣಿ. ಯೆಸ್.. ಯಾವುದು ಅತಿಶಯೋಕ್ತಿಯಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಅಕ್ಷರಶಃ ಸಿನಿಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದರು.
ಗಣೇಶ್ ತಮ್ಮ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ ಮಿರಾಕಲ್ ಮಾಡಿದ್ದ ಮೋಸ್ಟ್ ಟ್ಯಾಲೆಂಟೆಡ್ ಆ್ಯಕ್ಟರ್ಸಾಮಾನ್ಯನಂತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಅಸಮಾನ್ಯನಾಗಿ ಬೆಳೆದ ಸಿನಿಜರ್ನಿಯನ್ನು ನೋಡಿದ್ರೆ ಒಂದು ಕ್ಷಣ ಎಂತವ್ರಿಗೂ ಅಚ್ಚರಿಯಾಗುತ್ತೆ. ಗಣೇಶ್ ಜೀವನಹಾದಿಯೇ ಯುವಕಲಾವಿದರಿಗೆ ಒಂದು ಮಾದರಿ. ಇಂತಹ ಕನ್ನಡದ ಪ್ರತಿಭಾನ್ವಿತ ಕಲಾವಿದ ಇಂದು ಬರ್ತ್ಡೇ ಖುಷಿಯಲ್ಲಿದ್ದಾರೆ. ಚಿತ್ರರಂಗದ ಸ್ಟಾರ್ ನಟ ನಟಿಯರು, ಅಭಿಮಾನಿಗಳು ಪ್ರೀತಿಯ ಗಣೇಶ್ಗೆ ಬರ್ತ್ ಡೇ ವಿಶ್ ತಿಳಿಸ್ತಿದ್ದಾರೆ.
ಆದ್ರೆ, ಅಕ್ಕರೆಯ ಅಭಿಮಾನಿಗಳಿಗೆ ಗೋಲ್ಡನ್ ಗಣಿ ಭಾವನಾತ್ಮಕ ಪತ್ರ ಬರೆದು ಬೇಸರ ಮೂಡಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಗಣೇಶ್ ಅಭಿಮಾನಿಗಳೊಂದಿಗೆ ಬರ್ತ್ಡೇ ಆಚರಿಸಿಕೊಂಡಿಲ್ಲ. ಈ ಭಾರಿಯಾದರೂ ಈ ಕನಸು ನನಸಾಗಲಿದೆ ಎಂದುಕೊಂಡಿದ್ದ ಮೆಚ್ಚಿನ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಯೆಸ್.. ನನ್ನ ಪ್ರತಿ ಹೆಜ್ಜೆಯಲ್ಲೂ ನೀವಿದ್ದೀರಿ. ನಿಮಗೆ ನಾನು ಋಣಿಯಾಗಿದ್ದೀನಿ. ಆದ್ರೇ ಈ ಕೋವಿಡ್ ಕಾರಣ ನಾನು ಮನೆಯಲ್ಲಿರಲು ಸಾಧ್ಯವಿಲ್ಲ. ನನಗಾಗಿ ತರುವ ಹಾರ ತುರಾಯಿಗಳ ಬದಲಾಗಿ ನೀವಿದ್ದಲ್ಲಿಯೇ ಅಗತ್ಯ ಇರುವವರಿಗೆ ಸಹಾಯ ಮಾಡಿ ಎಂದಿದ್ದಾರೆ. ಈ ಮೂಲಕ ಸಮಾಜದ ಹಿತ ಸಾರುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಚೆಲ್ಲಾಟದಿಂದ ಶುರುವಾಗಿ, ಮುಂಗಾರುಮಳೆ, ಚೆಲುವಿನ ಚಿತ್ತಾರ, ಶೈಲೂ, ಕೃಷ್ಣ, ಗಾಳಿಪಟ, ಅರಮನೆ, ಮುಗುಳುನಗೆ ಹೀಗೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ ಕನ್ನಡದ ಅಕ್ಕರೆಯ ಕಲಾವಿದ ಗಣೇಶ್. ಇದೀಗ ಬಾನದಾರಿಯಲ್ಲಿ, ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇವ್ರ ಬರ್ತ್ ಡೇ ಸಲುವಾಗಿ ಗಾಳಿಪಟ 2 ಚಿತ್ರತಂಡ ನಾನಾಡದ ಮಾತೆಲ್ಲವ ಲಿರಿಕಲ್ ಸಾಂಗ್ ರಿಲೀಸ್ ಮಾಡಿ ಬರ್ತ್ಡೇಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದೆ. ಇಂತಹಾ ಮೇರು ಪ್ರತಿಭೆಗೆ ಪವರ್ ಟಿವಿ ಕಡೆಯಿಂದ ಬರ್ತ್ ಡೇ ವಿಶ್ ತಿಳಿಸೋಣ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ