Saturday, November 23, 2024

ಬಿಜೆಪಿ ಕುತಂತ್ರದಿಂದ ಅಧಿಕಾರಕ್ಕೆ ಬಂದಿದೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ನಾವು ಜನರಿಂದ ಅಧಿಕಾರ ಕಳೆದುಕೊಂಡಿಲ್ಲ, ಬಿಜೆಪಿಯ ಕುತಂತ್ರದಿಂದ ಅಧಿಕಾರ ಕಳೆದುಕೊಂಡಿದ್ದೇವೆ. ಇದು ಡೆಮೋಕ್ರಾಸಿಗೆ ಬಹುದೊಡ್ಡ ಹೊಡೆತ ಎಂದು ಕಲಬುರಗಿಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ ಸರ್ಕಾರ ಪತನ ಹಿನ್ನಲೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿ ಕುತಂತ್ರ ಮಾಡಿದೆ ಅಂತಾ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರ ಒಂದೇ ಅಲ್ಲ ಬಹುತೇಕ ಕಡೆ ಕುತಂತ್ರದಿಂದಲೇ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.

ಮೋದಿಜಿಯವರಿಗೆ 330 ರ ಮೇಲೂ ಸೀಟು ಬಂದರು, ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರು ತೃಪ್ತಿಯಿಲ್ಲ. ಇಂತಹ ಕೆಲಸ ಮಾಡಬಾರದು. ಇಂದಿಲ್ಲ ನಾಳೆ ಇದರಿಂದ ದೇಶಕ್ಕೆ ದೊಡ್ಡ ಹೊಡೆತ ಬಿಳುತ್ತದೆ. ಜನ ನಮ್ಮ ಹಿಂದೆ ಇದಾರೆ, ಜನಬೆಂಬಲ ಇದೆ. ರಾಜಕೀಯ ಶಕ್ತಿಯನ್ನ ಉಪಯೋಗಿಸಿಕೊಂಡು ಸರ್ಕಾರಗಳನ್ನ ಉರುಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷಾಂತರ ಕಾಯ್ದೆ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು‌ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಮಾಡಬೇಕಾದ ಕೆಲಸ. ಯಾರೇ ಪಕ್ಷದ ರೂಲ್ಸ್‌ಗಳನ್ನ ಉಲ್ಲಂಘಿಸಿದ್ರೆ ಐದು ವರ್ಷ ಸ್ಪರ್ಧಿಸದಂತೆ ಕಾಯ್ದೆ ಜಾರಿಯಾಗಬೇಕು.ಸಂದರ್ಭ ಬಂದಾಗ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ. ಮಹಾರಾಷ್ಟ್ರ ಸರ್ಕಾರ ಬಿಳುವ ಬಗ್ಗೆ ನಮಗೆನು ಇಂಟಲಿಜೆನ್ಸ್ ಮಾಹಿತಿ‌ ಇದ್ದಿರಲಿಲ್ಲ. ಆದರೆ ಈ ಚಟುವಟಿಕೆಗಳು ಮೊದಲಿನಿಂದಲೂ ನಡೆಯುತ್ತಾ ಬಂದಿದೆ.

ಇನ್ನು ಇದೇ ವೇಳೆ ಮಹಾರಾಷ್ಟ್ರದಲ್ಲಿ ಕ್ಲಚ್ ಒಬ್ರ ಕಡೆ.. ಬ್ರೇಕ್ ಒಬ್ರ ಕಡೆ.. ಎಕ್ಸ್‌ಲೇಟರ್ ಇಬ್ರ ಕಡೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದು ಅವರ ಕಲ್ಪನೆ ಇರಬಹುದು.‌‌ ಬಿಜೆಪಿ ಸರ್ಕಾರದ ಹ್ಯಾಬಿಟ್ ಒಂದೇ ಏನಾದರು ಮಾಡಿ ನಡೆಯೋ ಸರ್ಕಾರ ಉರುಳಿಸುವುದು ಎಂದು ಬಿಜೆಪಿ ವಿರುದ್ಧ ಹಿರಿಯ ಕಾಂಗ್ರೆಸ್​​ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾಡಿದರು.

RELATED ARTICLES

Related Articles

TRENDING ARTICLES