Friday, November 22, 2024

ದೇವೇಂದ್ರ ಅಲ್ಲ..ಈಗ ಏಕನಾಥ..!

ಮಹಾರಾಷ್ಟ್ರ: ಮಹಾ ನಾಟಕಕ್ಕೆ ಅದ್ಧೂರಿಯಾಗಿಯೇ ಮಹಾ ಮಂಗಳಾರತಿ ಆಗಿದೆ.. ಹೌದು, ತೀವ್ರ ಕುತೂಹಲ ಕೆರಳಿಸಿದ್ದ ಶಿವಸೇನೆ ವರ್ಸಸ್‌ ಏಕನಾಥ್‌ ಶಿಂಧೆ ಸೇನೆಯ ಸಮರದಲ್ಲಿ ಠಾಕ್ರೆ ಪಡೆ ಕೊಚ್ಚಿ ಹೋಗಿದೆ. ಕೇಂದ್ರ ಸರ್ಕಾರವೇ ರೆಬೆಲ್‌ ಶಾಸಕರಿಗೆ Z ಶ್ರೇಣಿಯ ಭದ್ರತೆ ಒದಗಿಸಿತ್ತು. ಫುಲ್‌ ಸೆಕ್ಯುರಿಟಿಯಲ್ಲಿ ಬಂದ ಶಿಂಧೆ ಟೀಂ ರಾಜ್ಯಪಾಲರನ್ನು ಭೇಟಿ ಮಾಡಿತು. ಆ ಹೊತ್ತಲ್ಲಿ ದೇವೇಂದ್ರ ಫಡ್ನವಿಸ್‌ ಸಿಎಂ, ಏಕನಾಥ ಶಿಂಧೆ ಉಪ ಸಿಎಂ ಎಂದೇ ಹೇಳಲಾಗ್ತಿತ್ತು.. ಆದ್ರೆ, ಮಹಾ ನಾಟಕಕ್ಕೆ ಲಾಸ್ಟ್‌ ಟ್ವಿಸ್ಟ್‌ ಸಿಕ್ಕಿ ಬಿಡ್ತು.. ದೇವೇಂದ್ರ ಅಲ್ಲ.. ಈಗ ಏಕನಾಥ ಸಿಎಂ ಅನ್ನೋ ಅಚ್ಚರಿ ಸಂಗತಿ ಹೊರ ಬಿತ್ತು.

ಜಂಟಿ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್‌ ಮತ್ತು ಏಕನಾಥ್‌ ಶಿಂಧೆ ಅಚ್ಚರಿಯ ಬೆಳವಣಿಗೆಗೆ ಕಾರಣವಾದ್ರು.. ಹೌದು, ಸ್ವತಃ ದೇವೇಂದ್ರ ಫಡ್ನವಿಸ್‌ ಏಕನಾಥ್‌ ಶಿಂಧೆ ಮಹಾರಾಷ್ಟ್ರ ಸಿಎಂ ಎಂದು ಘೋಷಣೆ ಮಾಡಿದ್ರು. ಇದ್ರ ಜೊತೆಗೆ, ಶಿಂಧೆ ಸರ್ಕಾರಕ್ಕೆ ನಾವು ಬಾಹ್ಯಬೆಂಬಲ ನೀಡಲಿದ್ದೇವೆ. ನಾವು ಸಂಪುಟದ ಭಾಗವಾಗುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ರು.

ಈ ಎಲ್ಲಾ ಬೆಳವಣಿಗಳ ಬೆನ್ನಲ್ಲೇ ಸಿಎಂ ಹಾಗೂ ಉಪ ಮುಖ್ಯಮಂತ್ರಿಯ ಪಟ್ಟಾಭಿಷೇಕಕ್ಕೆ ತಯಾರಿ ನಡೆದಿತ್ತು. ಹೌದು, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮುಖ್ಯಮಂತ್ರಿ ಹಾಗು ಉಪ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಿದ್ರು.

ಮಹಾ ವಿಕಾಸ್‌ ಅಘಾಡಿ ಸರ್ಕಾರ ಬೀಳೋದಕ್ಕೆ ಬಿಜೆಪಿ ಕಾರಣ ಅಂತ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಕಿಡಿಕಾರುತ್ತಿದೆ. ಆದ್ರೆ, ಶಿವಸೇನೆ ಬಿಟ್ಟು ತಮ್ಮದೇ ಲೆಕ್ಕಾಚಾರದಲ್ಲಿರುವ ಶಿಂಧೆ ಟೀಂ ಬಾಳಾ ಸಾಹೇಬ್‌ ಠಾಕ್ರೆ ಹೆಸರು ಮುಂದಿಟ್ಕೊಂಡು ಮತ್ತೊಂದು ಪ್ರಬಲ ಸೇನೆ ಕಟ್ಟಿದ್ದಾಗಿದೆ.. ಆದ್ರೆ, ಶಿಂಧೆಯ ಶ್ರಮಕ್ಕೆ ಫಲ ಸಿಗಬೇಕಲ್ವಾ..? ಹಾಗಾಗಿಯೇ ಬಿಜೆಪಿಗೆ ಸಿಎಂ ಪಟ್ಟ ಕೊಟ್ಟು ನೋಡುವ ತಂತ್ರ ಅನುಸರಿಸಿದೆ. ಜೊತೆಗೆ, ಹಿಂದುತ್ವಕ್ಕಾಗಿ ನಾವು ಒಂದಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ಕೇವಲ ಸಪೋರ್ಟ್‌ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ರೂ, ಮುಂಬರುವ ವಿಧಾನಸಭೆ ಚುನಾವಣೆಯೇ ಟಾರ್ಗೆಟ್‌ ಆಗಿದೆ..

ಕೊನೆ ಗಳಿಗೆಯಲ್ಲಿ ಏಕನಾಥ್‌ ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು, ಸರ್ಕಾರ ಬೀಳಿಸಿದರೆಂಬ ಅಪವಾದದಿಂದ ದೂರ ಇರಲು ಪ್ರಯತ್ನಿಸಿದೆ. ಜೊತೆಗೆ, ಶಿವಸೇನೆಯನ್ನು ಸೋಲಿಸಿ ಎದುರಾಳಿ ಶಿಂಧೆ ಸೇನೆಗೆ ಬಲ ತುಂಬುವ ಮೂಲಕ ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟಿದೆ ಬಿಜೆಪಿ.

RELATED ARTICLES

Related Articles

TRENDING ARTICLES