ಹಾವೇರಿ : ಛಿದ್ರ ಛಿದ್ರವಾಗಿ ಬಿದ್ದಿರುವ ಮಾಂಸದ ತುಂಡುಗಳ ರಾಶಿ. ಇದ್ಯಾವೋದು ಮಟನ್ ಅಂಗಡಿ ಮುಂದೆ ಇರೋ ರಾಶಿ ಅಲ್ಲಾ. ಬದಲಾಗಿ ಕಲ್ಲಿನ ಕ್ವಾರಿಯಲ್ಲಿ ಸಿಕ್ಕಿರುವ ಮೃತ ವ್ಯಕ್ತಿಯ ದೇಹದ ಅಂಗಾಂಗಳು. ಹೌದು, ಹಾವೇರಿಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿಯ ಕಲ್ಲಿನ ಕ್ವಾರಿಯ ಗುಂಡಿ ಮುಚ್ಚುವ ವೇಳೆ ಮೃತ ವ್ಯಕ್ತಿಯ ದೇಹದ ಅಂಗಾಂಗಳು ಛಿದ್ರ ಛಿದ್ರವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಳೆತು ಗಬ್ಬು ನಾರುತ್ತಿದ್ದ ದೇಹದ ಭಾಗಗಳನ್ನ ಕಂಡು ಗುಂಡಿ ಮುಚ್ಚುತ್ತಿದ್ದ ಕೂಲಿ ಕಾರ್ಮಿಕರು ಒಂದು ಕ್ಷಣ ಭಯಭೀತರಾಗಿದ್ದಾರೆ. ಕಲ್ಲು ಬ್ಲಾಸ್ಟ್ ಮಾಡುವ ವೇಳೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಹ ಬ್ಲಾಸ್ಟ್ ಆಗಿ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗ್ತಿದೆ.
ಕ್ವಾರಿಯಲ್ಲಿ ಕೇಲಸ ಮಾಡ್ತಿದ್ದ ಕೂಲಿ ಕಾರ್ಮಿಕ ನಾಪತ್ತೆಯಾಗಿ ತಿಂಗಳುಗಳೆ ಕಳೆದಿದೆ. ಆದ್ರೆ, ಇದುವರೆಗೂ ನಾಪತ್ತೆಯಾಗಿರುವ ಕೂಲಿ ಕಾರ್ಮಿಕನ ಸುಳಿವು ಪತ್ತೆಯಾಗಿಲ್ಲ. ಹೊಸಪೇಟೆ ಮೂಲದ ವೆಂಕಟೇಶ ಮೇ. 7ರಂದು ಈ ಕಲ್ಲಿನ ಕ್ವಾರಿಯಲ್ಲಿ ಕೆಲಸಕ್ಕೆ ಬಂದಿದ್ದ. ಮೇ. 17ರಂದು ವೆಂಕಟೇಶ ನಾಪತ್ತೆಯಾಗಿದ್ರು, ಮೇ. 26ರಂದು ಹಾನಗಲ್ ಠಾಣೆಯಲ್ಲಿ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿತ್ತು. ಆದ್ರೆ. ಈಗ ಸಿಕ್ಕಿರುವ ಮೃತದೇಹದ ಭಾಗಗಳು ಹಾಗೂ ಬಟ್ಟೆ ನೋಡಿ ಇದು ವೆಂಕಟೇಶನದ್ದೆ ಮೃತದೇಹ ಎನ್ನುವ ಅನುಮಾನ ಕುಟುಂಬದವರದ್ದು. ಕೈ ಮುಖಂಡ ಸತೀಶ್ ದೇಶಪಾಂಡೆಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ ಕೂಲಿ ಕಾರ್ಮಿಕ ಬ್ಲಾಸ್ಟಿಂಗ್ ವೇಳೆ ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದ್ದು ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ ಎನ್ನಲಾಗಿದೆ. ಇದೆ ಕಾರಣಕ್ಕೆ ವೆಂಕಟೇಶ ಕುಟುಂಬದವರು ಮೃತದೇಹವನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯ ಮಾಡಿದ್ದಾರೆ.
ಕೂಲಿಕಾರ್ಮಿಕನ ನಾಪತ್ತೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೃತದೇಹದ ವೈದ್ಯಕೀಯ ಪರೀಕ್ಷೆ ಬಳಿಕವೆ ಸತ್ಯಾ ಸತ್ಯತೆ ಹೊರಬರಬೇಕಿದೆ. ಈ ನಿಟ್ಟಿನಲ್ಲಿ ಹಾನಗಲ್ ಪೊಲೀಸರು ಪ್ರಾಮಾಣಿಕ ತನಿಖೆ ನಡೆಸಬೇಕಿದೆ.
ವೀರೇಶ ಬಾರ್ಕಿ,ಪವರ್ ಟಿವಿ ಹಾವೇರಿ.