ಚಾಮರಾಜನಗರ : ಅರಣ್ಯದ ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಡು ಮೃಗಗಳ ಭಯದಲ್ಲೇ ಕಗ್ಗತ್ತಲೆಯಲ್ಲೇ 8 ಕಿಲೋ ಮೀಟರ್ ದೂರ ಗರ್ಭಿಣಿಯನ್ನು ಹೊತ್ತು ತಂದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ದಟ್ಟಾರಣ್ಯದಲ್ಲಿ 8 ಕಿಲೋ ಮೀಟರ್ ದೂರ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ಕರೆ ತಂದ ಗ್ರಾಮಸ್ಥರು. ಡೋಲಿ ಕಟ್ಟಿ ಗರ್ಬಿಣಿಯನ್ಮು ಹೊತ್ತು ನಾಲ್ಕು ಗಂಟೆ ಕಾಲ ನಡೆದು ಆಸ್ಪತ್ರೆಗೆ ಸೇರಿಸಿದ ಗ್ರಾಮಸ್ಥರು. ಅರಣ್ಯದ ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಡು ಮೃಗಗಳ ಭಯದಲ್ಲೇ ಕಗ್ಗತ್ತಲೆಯಲ್ಲೇ ಕಾಲ್ನಡಿಗೆ ಮಾಡುತ್ತಿದ್ದು, ಮಹದೇಶ್ವರಬೆಟ್ಟ ಅರಣ್ಯ ವ್ಯಾಪ್ತಿಯ ದೊಡ್ಡಾಣೆ ಗ್ರಾಮಸ್ಥರ ಹರ ಸಾಹಸ ಪಡುತ್ತಿದ್ದಾರೆ.
ಗ್ರಾಮದ ಶಾಂತಲಾ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ದೊಡ್ಡಾಣೆಯಿಂದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯನ್ನು ಗ್ರಾಮಸ್ಥರು ಹೊತ್ತು ತಂದಿದ್ದಾರೆ. ಮದ್ಯರಾತ್ರಿ 2 ಗಂಟೆಗೆ ಹೊರಟು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆಗೆ ಗ್ರಾಮಸ್ಥರು ತಲುಪಿದ್ದಾರೆ.
ಇನ್ನು, ಗರ್ಬಿಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರ ತುರ್ತು ಬಳಕೆಗೆ ಜನವನ ಸಾರಿಗೆ ಜಾರಿಗೆ ತಂದಿದ್ದಾರೆ. ಆದರೆ ಚಾಲಕರು ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಮಾಡಿ ಸಂಪರ್ಕ ಸಾಧ್ಯವಾಗದೆ ಮತ್ತೆ ಡೋಲಿ ಗ್ರಾಮಸ್ಥರು ಮೊರೆಹೋಗಿದ್ದಾರೆ.