Monday, December 23, 2024

ನೀವು ನನಗೆ ಕಳ್ಳ ಅಂತ ಹೇಳಬೇಡಿ : ಆರ್.ಪಿ ನಾಯ್ಕ್

ಕಾರವಾರ : ನಗರಸಭೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಪೌರಾಯುಕ್ತ ಆರ್.ಪಿ ನಾಯ್ಕ್ ನಡುವೆ ಮಾತಿನ‌ ಚಕಮಕಿ ಉಂಟಾಗಿದ್ದು, ನಗರಸಭೆಗೆ ಕಾಂಗ್ರೆಸ್ ಮಾಜಿ ಶಾಸಕರ ಮುತ್ತಿಗೆ ಹಾಕಿದ್ದಾರೆ.

ನೀವು ನನಗೆ ಕಳ್ಳ ಹೇಳುವ ಅವಶ್ಯಕತೆ ಇಲ್ಲ ಎಂದ ಪೌರಾಯುಕ್ತ. ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡ ಪೌರಾಯುಕ್ತ ಆರ್.ಪಿ ನಾಯ್ಕ್. ಮಾಹಿತಿ ಕೇಳಲು ಬಂದ ಮಾಜಿ‌ ಶಾಸಕ ಸತೀಶ್ ಸೈಲ್. ಮಾಹಿತಿ ಕೇಳಲು ಬಂದ ಸಂದರ್ಭದಲ್ಲಿ ತೀವ್ರ ಮಾತಿನ ಚಕಮಕಿ ಉಂಟಾಗಿದೆ.

ಅದಲ್ಲದೇ, ಕೈ ಕೈ ಮಿಲಾಯಿಸಿಕೊಳ್ಳುವ ಹಂತದ ವರೆಗು ತಲುಪಿದ ಮಾತಿನ ಚಕಮಕಿ ಉಂಟಾಗಿದ್ದು, ಎಲ್ಲ ಅಭಿವೃದ್ಧಿ ಕೆಲಸ ಮುಗಿದ ಬಳಿಕ ಟೆಂಡರ್ ಕರೆದ ಪೌರಾಯುಕ್ತರು. ಕೆಲಸ ಮುಗಿದ ಬಳಿಕ ಟೆಂಡರ್ ಯಾಕೆ ಕರೆದಿದ್ದು ಎಂದು ಮಾಜಿ ಶಾಸಕ ಸತೀಶ್ ಸೈಲ್ ಪ್ರಶ್ನೆ ಮಾಡಿದ್ದಾರೆ.

ಇನ್ನು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೆಲಸ ಮಾಡಲಾಗಿದೆ ಎಂದು ಸಬೂಬು ನೀಡಿದ ಪೌರಾಯುಕ್ತ ಆರ್.ಪಿ‌.ನಾಯ್ಕ್. ಆಯಾ ರಸ್ತೆ ಅಭಿವೃದ್ದಿ, ಗಾರ್ಡನ್, ಸೇರಿ ಒಟ್ಟೂ 170 ಅಭಿವೃದ್ಧಿ ಕಾಮಗಾರಿಯನ್ನ ಟೆಂಡರ್ ನೀಡದೆ ಕೆಲಸ ಮುಕ್ತಾಯಗೊಂಡಿದ್ದು, ಕೆಲಸ ಮುಕ್ತಾಯ ಬಳಿಕ ಟೆಂಡರ್ ಕರೆದ ಪೌರಾಯುಕ್ತರು. ವಿಚಾರಿಸಲು ಬಂದ ಸಂದರ್ಭದಲ್ಲಿ ಪೌರಾಯುಕ್ತರು ಮತ್ತು ಸೈಲ್ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಎಲ್ಲ ಕೆಲಸ ಮುಗಿದ ಬಳಿಕ ಟೆಂಡರ್ ಕರೆಯುವ ಅವಶ್ಯಕತೆ ಏನಿದೆ? ಬರವಣಿಗೆಯಲ್ಲಿ ಮಾಹಿತಿ ಕೇಳಿ ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES