ದಾವಣಗೆರೆ: ರಾಜ್ಯದಲ್ಲಿ 24 ಸಾವಿರ ಕೋಟಿ ರೂಪಾಯಿ ಸಾಲ ರಾಜ್ಯದ 33 ಲಕ್ಷ ರೈತರಿಗೆ ಸಾಲ ಕೊಡಲು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ದಾವಣಗೆರೆಯಲ್ಲಿ ಸಹಹಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದ ಇಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯಶಸ್ವಿನಿ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ತಯಾರಿ ಆಗಿದೆ. ಈ ಬಗ್ಗೆ ಸಿಎಂ ಅವರ ಜೊತೆ ಮಾತಾನಾಡಲಾಗಿದೆ ಬರುವ ಅಕ್ಟೋಬರ್ ಎರಡರಂದು ಉದ್ಘಾಟನೆ ಆಗುವ ಸಾಧ್ಯತೆ ಇದೆ ಎಂದರು.
ಈಗಾಗಲೇ ಹಾಲು ಉತ್ಪಾಕರಿಗೆ ಅನುಕೂಲ ಆಗುವಂತೆ ಕ್ಷೀರ ಸಹಕಾರ ಬ್ಯಾಂಕ್ ಯೋಜನೆ ಇದೆ. ಇದರಲ್ಲಿ ಒಂಬತ್ತು ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯವ ನೀಡುವ ಉದ್ದೇಶವಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹತಾಶಯರಾಗಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಮಾತಾಡುವಾಗ ಘನತೆಯಿಂದ ಮಾತಾಡಲಿ ಎಂದು ಗರಂ ಆದರು.
ಇನ್ನು ಆರ್ ಎಸ್ ಎಸ್ ನವರಿಗೆ 40 ರಷ್ಟು ಕಮಿಷನ್ ಕೊಡುತ್ತಾರೆ ಅಂದ್ರೆ ಎನು ಅರ್ಥ.ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆ. ಇದರ ಬಗ್ಗೆ ಮಾತಾಡುವುದು ಸರಿಯಲ್ಲ. ಮೇಲಾಗಿ ಕುಮಾರಸ್ವಾಮಿ ಅವರಿಗೆ ಎನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಇದೇ ಕಾರಣಕ್ಕೆ ಈ ರೀತಿಯಾದ ಆರೋಪಗಳನ್ನ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವಾಗ ಸ್ವಲ್ಪ ವಿಚಾರಿಸಿ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.