Friday, November 22, 2024

ಜುಲೈ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ

ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ ಏರಿಕೆ ಸರದಿ. ರಾಜ್ಯದಲ್ಲಿ ಜುಲೈ 1 ರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ. ಬೆಲೆ ಏರಿಕೆ ಬಿಸಿ ನಡುವೆ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ.

ಜುಲೈ 1 ರಿಂದ ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಹೆಚ್ಚಾಗಲಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ 19 ರೂಪಾಯಿಂದ 31 ರೂಪಾಯಿ ಪಾವತಿಸಬೇಕು.

ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಇಟ್ಟಿದ್ದ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿದೆ.

ಎಸ್ಕಾಂಗಳು ಎಷ್ಟು ದರ ಹೆಚ್ಚಳಕ್ಕೆ ಪ್ರಸಾವ ಸಲ್ಲಿಸಿತ್ತು?
* ಪ್ರತಿ ಯೂನಿಟ್‍ಗೆ 38 ರಿಂದ 55 ರೂ. ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು
* ಬೆಸ್ಕಾಂ – 55.28
* ಮೆಸ್ಕಾಂ – 38.98
* ಸೆಸ್ಕ್ – 40.47
* ಹೆಸ್ಕಾಂ – 49.54
* ಗೆಸ್ಕಾಂ – 39.36 ಹೆಚ್ಚಿಸಲು ನಿರ್ಧರಿಸಿದ್ದವು

RELATED ARTICLES

Related Articles

TRENDING ARTICLES