Friday, January 3, 2025

ಕೊನೆಗೂ ತಾಂಡವ್ ವೆಂಚರ್ಸ್ ಮನವಿ ತಿರಸ್ಕರಿಸಿದ KIADB

ಮೈಸೂರು: ಸರ್ಕಾರದ ನಿಯಮ ಅಂದ್ರೆ ಅದು ಎಲ್ಲರಿಗೂ ಅನ್ವಯ ಆಗ್ಲೇ ಬೇಕು. ಆದ್ರೆ ಮೈಸೂರಿನಲ್ಲಿ ಮಾತ್ರ ಸರ್ಕಾರಿ ನಿಯಮವನ್ನೇ ಗಾಳಿಗೆ ತೂರಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಕಟ್ಟಡ ಕಾಮಗಾರಿ ಮಾಡ್ತಿದ್ದಾರೆ. ಕೆಐಎಡಿಬಿಯಿಂದ ಅನುಮತಿ ಇಲ್ದೆ ಇದ್ರೂ ಇವ್ರು ಮಾಡ್ತಿರೋ ಕಾಮಗಾರಿ ಮಾತ್ರ ಸ್ಟಾಪ್ ಅಗಿಲ್ಲ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಬೃಹತ್ ಕಟ್ಟಡ, ಯಂತ್ರೋಪಕರಣಗಳು, ಈಜುಕೊಳದ ಪಕ್ಕದಲ್ಲೇ ವಿಲ್ಲಾ ಮಾದರಿಯ ಕಟ್ಟಡಗಳು. ಈ ದೃಶ್ಯ ನೊಡ್ತಾ ಇದ್ರೆ ಇದ್ಯಾವುದೋ ಬಿಯರ್ ಫ್ಯಾಕ್ಟರಿ ಅನ್ನಿಸದೆ ಇರೋದಿಲ್ಲ. ಎಸ್, ಅಂದ ಹಾಗೆ ತಾಂಡವ್ ವೆನ್ ಚುರ್ಸ್ ನ ಉದ್ದೇಶಿತ ಬಾರ್ ಅಂಡ್ ರೆಸ್ಟೋರೆಂಟ್ ಕಾಮಗಾರಿ ಇದು.ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ 279-ಬಿ ನ ಈ ಪ್ರದೇಶ ವಿಜಯನಗರದ ನಿವಾಸಿ ಕೆ.ಹನುಮಂತೇಗೌಡ ಎಂಬುವವರಿಗೆ ಸೇರಿದ ಜಾಗ.ಸ್ಟೀಲ್ ಇಂಡಸ್ಟ್ರಿಗೆ ಕೆಐಎಡಿಬಿಯಿಂದ ಹಂಚಿಕೆಯಾಗಿರೋ ಜಾಗಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಮಾಡಲಾಗ್ತಿರೋ ಆರೋಪ ಕೇಳಿ ಬಂದಿದೆ. ಆದ್ರೆ ಈ ಜಾಗದಲ್ಲಿ ನಿರ್ಮಾಣವಾಗ್ತಿರೋ ಕಟ್ಟಡ ಕಾಮಗಾರಿಗಳಿಗೆ ಈ ವರೆಗೂ ಯಾವುದೇ ಅನುಮತಿ ಪಡೆದೆ ಇಲ್ಲ.

ನಿಯಮಾವಳಿ ಪ್ರಕಾರ ಕೈಗಾರಿಕೆಗೆ ಉದ್ದೇಶಿತ ಜಾಗದಲ್ಲಿ ಯಾವುದೇ ಹೊಸ ಕಟ್ಟಡ ಕಟ್ಟಬೇಕಾದ್ರೂ ಸಂಭಂದಿಸಿದ ಇಲಾಖೆಯಿಂದ ಯೋಜನೆಗಳ ಅನುಮತಿಯನ್ನ ಕಡ್ಡಾಯವಾಗಿ ಪಡೆಯಲೇಬೇಕು ಅನ್ನೋ ನಿಯಮ ಇದೆ. ಆದ್ರೆ, ತಾಂಡವ್ ವೆನ್ ಚುರ್ಸ್ ನಿಂದ ಈ ಜಾಗದಲ್ಲಿ ನಿರ್ಮಾಣ ಮಾಡ್ತಿರೋ ಉದ್ದೇಶಿತ ಬಾರ್ ಅಂಡ್ ರೆಸ್ಟೋರೆಂಟ್ ಗೆ ಪ್ಲಾನ್ ಅಪ್ರೂವಲ್ ಆಗಿಯೇ ಇಲ್ಲ. ಸೆ.7ರಲ್ಲಿ ಕೆಐಡಿಬಿಗೆ ಅನುಮತಿಯನ್ನ ಕೋರಿ ಮನವಿ ಸಲ್ಲಿಸಲಾಗಿದೆ. ಆದ್ರೆ, ಕೆಐಎಡಿಬಿ ವತಿಯಿಂದ ಒಮ್ಮೆ ಕೈಗಾರಿಕೆಗೆ ಮಂಜೂರಾತಿ ಪಡೆದು ನಿವೇಶನ ಹಂಚಿಕೆಯಾಗಿ ಕ್ರಯ ಪತ್ರದ ನಂತರ ಇನ್ನೂ ಮುಂದೆ ಕೆಐಡಿಬಿ ವತಿಯಿಂದ ಹೋಟೆಲ್ ಬಾರ್ ನಡೆಸಲು ಸಲ್ಲಿಸಿರೋ ಅರ್ಜಿ ಪ್ರಕರಣ ಪುರಸ್ಕರಿಸದಂತೆ/ ತಿರಸ್ಕರಿಸಲು ನಿರ್ದೇಶನ ಇದೆ ಅಂತಾ ಕ್ಯಾಬಿನೆಟ್ ತೀರ್ಮಾನದ ಪ್ರತಿಯನ್ನ ಲಗತ್ತಿಸಿ ಹಿಂಬರಹ ನೀಡಿದೆ. ಆದ್ರೂ ಕೂಡ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುಮತಿ ಇಲ್ದೆ ಇದ್ರೂ ಇಲ್ಲಿ ತನಗಿಷ್ಟದಂತೆ ಕೆಐಡಿಬಿ ನಿಯಮ‌ ಗಾಳಿಗೆ ತೂರಿ ರಾಜಾರೋಷವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

ಇನ್ನೂ, ಈ ಬಗ್ಗೆ ಪವರ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ KIADB, ಈ ಜಾಗದ ಪಕ್ಕದಲ್ಲಿಯೇ ಮೈಸೂರು ನಗರಕ್ಕೆ ಗ್ಯಾಸ್ ಸರಬರಾಜು ಮಾಡುವ ಘಟಕ ಕೂಡ ಇದೆ. ಇದ್ರ ಮದ್ಯೆ ಕೈಗಾರಿಕಾ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‌ ಗೆ ಅನುಮತಿ ಇಲ್ಲ ಅಂತಾ, ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಕೆಐಡಿಬಿಯಿಂದ ನೋಟಿಸ್ ನೀಡಲಾಗಿದೆಯಂತೆ. ಆದ್ರೂ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಅಬಕಾರಿ ಇಲಾಖೆಯ ಉನ್ನತ ಮಟ್ಟದ ಮೂವರು ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿದ್ದಾರೆ ಅನ್ನೋ ಗುಮಾನಿ ಕೂಡ ಇದೆ‌. ಈ ಕೂಡಲೇ ಘಟನೆಯಿಂದ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.

ಕ್ಯಾಮರಾ ಮನ್ ಹರೀಶ್ ಜೊತೆ ಸುರೇಶ್ ಬಿ.ಪವರ್ ಟಿವಿ ಮೈಸೂರು‌.

RELATED ARTICLES

Related Articles

TRENDING ARTICLES