ಬೆಂಗಳೂರು: ಕಳೆದ ಎರಡು ಮೂರು ವರ್ಷಗಳಿಂದ ಮಾದಕ ವಸ್ತು ವಿರೋಧಿ ದಿನ ಅಭಿಯಾನ ಮಾಡಲಾಗುತ್ತಿದೆ ಎಂದು ಬೆಂಗಳೂರು ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಮೂರು ವರ್ಷಗಳಿಂದ ಮಾದಕ ವಸ್ತು ವಿರೋದಿ ದಿನ ಅಭಿಯಾನ ಮಾಡಲಾಗುತ್ತಿದೆ. 2021 ರಲ್ಲಿ 4555 ಕೇಸ್ ಪತ್ತೆ,5753 ಆರೋಪಿಗಳನ್ನು ಬಂಧಿಸಿ 60ಕೋಟಿ ಮೌಲ್ಯದ 3705 ಕೆಜಿ ವಿವಿಧ ಮಾದಕ ವಸ್ತುಗಳ ಜಪ್ತಿ ಮಾಡಲಾಗಿದೆ. 2022ರಲ್ಲಿ 1716ಕೇಸ್ ಪತ್ತೆ,2262 ಆರೋಪಿಗಳ ಬಂಧಿಸಿ, 55ಕೋಟಿ ಮೌಲ್ಯದ 2005 ಕೆಜಿ ವಿವಿಧ ಮಾದಕ ವಸ್ತುಗಳ ಜಪ್ತಿ ಮಾಡಲಾಗಿತ್ತು ಎಂದರು.
ಇನ್ನು, 2021ರಲ್ಲಿ 141 ಹಾಗೂ 2022ರಲ್ಲಿ 45 ಜನ ವಿದೇಶಿ ಗರನ್ನು ಮಾದಕ ವಸ್ತುಗಳ ಕೇಸ್ ಸಂಬಂಧ ಬಂಧಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವಿದೇಶಿಯರು ಜಾಸ್ತಿ ಇದ್ದಾರೆ. ಯಾರೇ ಕೂಡಾ ವಿದೇಶಿ ಪ್ರಜೆಗೆ ಮನೆ ಬಾಡಿಗೆ ಕೊಡುವವರಿದ್ರೇ ಸ್ಥಳೀಯ ಪೊಲೀಸ್ ಠಾಣೆ ತಿಳಿಸಿ ವಿದೇಶಿ ಪ್ರಜೆಗಳು ವಿಸಾ ಪಾಸ್ ಪೋರ್ಟ್ ಇಲ್ಲದೆ ಅಕ್ರಮವಾಗಿ ಇರೋ ಕೇಸ್ ಜಾಸ್ತಿ ಆಗಿವೆ ಎಂದು ಹೇಳಿದರು.
ರಾಜ್ಯದಲ್ಲಿ ಡ್ರಗ್ ಪ್ರಕರಣಗಳಲ್ಲಿ ವಿದೇಶಿ ಪ್ರಜೆ ಕೈವಾಡ ಜಾಸ್ತಿ ಅಗಿದೆ. ಆ ಉದೇಶದಿಂದ ಯಾರಿಗಾದ್ರೂ ಬಾಡಿಗೆ ಕೊಡೋ ಮುಂಚೆ ಒಂದು ಬಾರಿ ತಿಳಿಸಿ. ವಶಪಡಿಸಿಕೊಂಡ ವಿವಿದ ಬಗೆಯ ಮಾದಕ ವಸ್ತುಗಳನ್ನು ಕಾನೂನು ರಿತ್ಯಾ ನಾಶ ಮಾಡಲಾಗುವುದು ಎಂದರು.