ಹುಬ್ಬಳ್ಳಿ : ಮಳೆಗಾಲ ಶುರುವಾದ ನಂತರ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಇದೆ ಕುಷಿಯಲ್ಲಿ ರೈತರು ಬಿತ್ತನೆ ಮಾಡಿ ಬೆಳೆ ಬೆಳಸಲು ತಯಾರಾಗಿದ್ದಾರೆ, ಆದರೆ ಇದೀಗ ಬೆಳೆದ ಬೆಳೆಗೆ ರೋಗ ಬಾಧೆ ಶುರುವಾಗಿದ್ದು ರೈತರು ಕಂಗಾಲಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಹೆಸರು ಹಾಗೂ ಉದ್ದು ಬೆಳೆ ಬೆಳೆಗಳಿಗೆ ಹಳದಿ ನಂಜು ರೋಗ ಹಾಗೂ ಕೀಟಬಾಧೆಗೆ (ಎಲ್ಲೋಲವೆನ್ ಮೊಜಾಯಿಕ್) ಅಪ್ಪಳಿಸಿದೆ, ಬೆಳವಣಿಗೆ ರೈತ ವಲಯದಲ್ಲಿ ಆತಂಕ ಶುರುವಾಗಿದೆ. ಹೆಸರು ಹಾಗೂ ಉದ್ದು ಕಡಿಮೆ ವೆಚ್ಚದಲ್ಲಿ ಬೆಳೆದು, ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನ ಸಮಯದಲ್ಲಿ ಈ ಬೆಳೆಯನ್ನೇ ಬಿತ್ತನೆ ಮಾಡಿದ್ದಾರೆ.ಈ ಮದ್ಯೆ ಹೆಸರು ಮತ್ತು ಉದ್ದು ಬೆಳೆಗಳಿಗೆ ಅವಶ್ಯಕತೆ ಗಿಂತ ಜಾಸ್ತಿ ಪ್ರಮಾಣದ ಮಳೆ ಆಗಿದ್ದರಿಂದ ಹಾಗೂ ಮಣ್ಣಿನ ತೇವಾಂಶ ಹೆಚ್ಚಾಗಿದ್ದರೆ ಪ್ರಾರಂಭಿಕ ಹಂತದಲ್ಲಿ ಹಳದಿ ನಂಜು ರೋಗಕ್ಕೆ ಸಸಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
ಹೆಸರು ಹಾಗೂ ಉದ್ದು ಬೆಳೆಗೆ ಹಳದಿ ನಂಜು ರೋಗ ಹಾಗೂ ಕೀಟಬಾಧೆ ಒಕ್ಕರಿಸಿ ಬೆಳೆಗೆ ನಂಜು ರೋಗ ತಗುಲಿ ಬೆಳೆ ನೆಲಕಚ್ಚುವ ಪರಿಸ್ಥಿತಿ ಬಂದೋದಗಿದೆ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಕಮರುತ್ತಿದೆ.ಹಾಕಿದ ಬಂಡವಾಳ ವಾಪಸ್ ಬರುತ್ತೋ ಇಲ್ಲವೊ ಎಂಬ ಚಿಂತೆಯಾಗಿದೆ ಎಂದು ರೈತರು ಆತಂಕ ಪಡುತ್ತಿದ್ದಾರೆ ,ಹುಬ್ಬಳ್ಳಿ, ಕುಂದಗೋಳ ನವಲಗುಂದ ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹಳದಿ ನಂಜು ರೋಗ ಬಾಧೆ ಕಾಣಿಸಿಕೊಂಡಿದೆ. ಹೀಗಾಗಿ ನಷ್ಟ ಅನುಭವಿಸುವ ಭಯ ರೈತರಲ್ಲಿ ಕಾಡುತ್ತಿದೆ.
ಇನ್ನೂ ಮತ್ತೊಂದು ಕಡೆ ರೈತರಿಗೆ ಕೂಲಿ ಕಾರ್ಮಿಕರು ದೊರೆಯದೆ ಇರುವುದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ,ಒಟ್ಟಾರೆ ರೈತರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದ್ದು ರೈತರ ನೆರವಿಗೆ ಬಂದು ಹಳದಿ ನಂಜು ರೋಗಕ್ಕೆ ಯಾವ ಔಷಧ ಸಿಂಪರಣೆ ಮಾಡಬಹುದು ಎಂದು ಹೇಳಬೇಕಿದ್ದ ಕೃಷಿ ಅಧಿಕಾರಿಗಳು ಯಾವುದನ್ನು ಗಮನಿಸದೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಈ ಬಗ್ಗೆ ತಜ್ಞರು ಕೂಡಲೇ ಪರಿಹಾರ ತಿಳಿಸಿಕೊಡಬೇಕು ಎನ್ನುವುದು ಪವರ್ ಟಿವಿ ಆಶಯ.